Advertisement

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

06:25 PM Oct 16, 2021 | Team Udayavani |

ಗುಳೇದಗುಡ್ಡ: ಗಂಜಿಗೇರಿ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆಯರಿಬ್ಬರು ಕಾಲು ಜಾರಿ ಬಿದ್ದು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಧಾರುಣ ಘಟನೆ ಗುಳೇದಗುಡ್ಡ ತಾಲೂಕಿನ ಶನಿವಾರ ಸಂಭವಿಸಿದೆ.

Advertisement

ಪಟ್ಟಣದ ನಡುವಿನ ಪೇಟೆಯ ಲಲಿತಾ (37) ಹಾಗೂ ಅನುಪಮಾ (20) ಸಾವನ್ನಪ್ಪಿದ ಮಹಿಳೆಯರು ಎಂದು ಗುರುತಿಸಲಾಗಿದೆ.

ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಇಬ್ಬರು ಮಹಿಳೆಯರು ಶನಿವಾರದಂದು ಪರ್ವತಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಗಂಜಿಗೇರಿ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದಾಗ ಈ ಅವಘಡ ಸಂಭವಿಸಿದೆ. ಪೊಲಿಸ್‌ರ ಸಹಕಾರದೊಂದಿಗೆ ಅಲ್ಲಿನ ಜನರು ಇಬ್ಬರು ಮಹಿಳೆಯರ ಶವಗಳನ್ನು ಕೆರೆಯಿಂದ ಹೊರ ತೆಗೆದಿದ್ದಾರೆ.

ಕೆರೆಯಲ್ಲಿ ಮೊದಲು ಬಿದ್ದ ಮಹಿಳೆಯನ್ನು ರಕ್ಷಣೆ ಮಾಡಲು ಮತ್ತೊಬ್ಬರು ಜಿಗಿದಿದ್ದಾರೆ. ಹೀಗೆ ಒಟ್ಟು ಆರು ಜನ ಕೆರೆಗೆ ಜಿಗಿದಿದ್ದಾರೆ. ಕೆರೆಗೆ ಜಿಗಿದವರಲ್ಲಿ ಓರ್ವ ಪುರುಷ ಹಾಗೂ ನಾಲ್ವರು ಮಹಿಳೆಯರಾಗಿದ್ದಾರೆ. ಇವರಲ್ಲಿ ಇಬ್ಬರು  ಮಹಿಳೆಯ ನೀರು ಪಾಲಾಗಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದರು.

ಕೆರೆಯಲ್ಲಿ ಮುಳುಗುತ್ತಿದ್ದವರನ್ನು ನೋಡಿ ಟಂಟಂ ನಲ್ಲಿ ತೆರಳುತ್ತಿದ್ದವರು ಹಾಗೂ ಮೀನುಗಾರರ ಸಮಯ ಪ್ರಜ್ಞೆಯಿಂದ ನಾಲ್ವರ ರಕ್ಷಣೆ ಮಾಡಲಾಗಿದೆ. ವಿಷಯ ತಿಳಿದ ತಕ್ಷಣವೇ ಗುಳೇದಗುಡ್ಡ ಪೊಲಿಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಜೆ

Advertisement

ಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಪುರಸಭೆ ಸದಸ್ಯರಾದ ಪ್ರಶಾಂತ ಜವಳಿ, ಸಂತೊಷ ನಾಯನೇಗಲಿ, ಮುಖಂಡರಾದ ಮುಬಾರಕ ಮಂಗಳುರು ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದು ಮಹಿಳೆಯರ ಶವಗಳನ್ನು ಕೆರೆಯಿಂದ ಹೊರ ತೆಗೆಸುವಲ್ಲಿ ಹಾಗೂ ಆಸ್ಪತ್ರೆಗೆ ಶವಪರೀಕ್ಷೆಗೆ ಕಳಿಸುವಲ್ಲಿ ಸಹಕಾರ ಮಾಡಿದರು ಎಂದು ಅಲ್ಲಿ ನೆರೆದ ಜನರು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next