ದೇವನಹಳ್ಳಿ: ರಸ್ತೆ ಪಕ್ಕದಲ್ಲಿ ನಿಂತಿದ್ದ ಬೈಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ದೇವನಹಳ್ಳಿ ಪಟ್ಟಣದ ನಿವಾಸಿಯಾಗಿದ್ದ ಲಕ್ಷ್ಮೀ (30) ಸಾವನ್ನಪ್ಪಿರುವ ದುರ್ಧೈವಿಯಾಗಿದ್ದಾಳೆ.
ಪಟ್ಟಣದ ವಿಜಯಪುರ ವೃತ್ತದಲ್ಲಿ ಘಟನೆ ಸಂಭವಿಸಿದ್ದು, ಬೈಕಿನಲ್ಲಿದ್ದ ಕವಿತಾ ಎಂಬುವವರಿಗೆ ಗಾಯಗಳಾಗಿದ್ದು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಗದಗ: ಜಿಲ್ಲೆಯ ದಶಕಗಳ ಬೇಡಿಕೆಗಳಿಗೆ ರೆಕ್ಕೆ-ಪುಕ್ಕ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಚಾರಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಪತ್ತೆಹಚ್ಚಲು ತನಿಖೆ ಕೈಗೊಳ್ಳಲಾಗಿದೆ.