Advertisement

ಹುಟ್ಟುಹಬ್ಬದ ದಿನವೇ ಯುವತಿ ಸಾವು

11:58 AM Jan 22, 2022 | Team Udayavani |

ಬೆಂಗಳೂರು: ಸ್ನೇಹಿತನ ಜತೆ ಬೈಕ್‌ನಲ್ಲಿ ಹೋಗುವಾಗ ಆಯಾ ತಪ್ಪಿ ಬಿದ್ದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಗೂಡ್ಸ್‌ ವಾಹನ ಹರಿದು ವಿದ್ಯಾರ್ಥಿನಿ ಯೊಬ್ಬರು ಹುಟ್ಟುಹಬ್ಬದ ದಿನವೇ ಮೃತಪಟ್ಟಿರುವ ಘಟನೆ ಹೆಬ್ಟಾಳ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

Advertisement

ವಿದ್ಯಾರಣ್ಯಪುರ ನಿವಾಸಿ ಮಹಶ್ರೀ(20) ಮೃತ ವಿದ್ಯಾರ್ಥಿನಿ. ನಗರದ ಕಾಲೇಜುವೊಂದರಲ್ಲಿ ದ್ವಿತೀಯ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಾ, ಟೆಕ್ಸ್‌ಟೈಲ್ಸ್‌ ಅಂಗಡಿಯಲ್ಲಿ ಪಾರ್ಟ್‌ ಟೈಮ್‌ ಕೆಲಸ ಮಾಡುತ್ತಿದ್ದರು.

ಶುಕ್ರವಾರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಮನೆಯಲ್ಲೇ ಇರುವಂತೆ ಪೋಷಕರು ಹೇಳಿದ್ದರು. ಆದರೂ ಸ್ನೇಹಿತ ನರಸಿಂಗ ಪೆರುಮಾಳ್‌ ಎಂಬಾತನ ಜತೆ ಬಿಇಎಲ್‌ನಿಂದ ನಾಗವಾರ ಕಡೆ ಬೈಕ್‌ನಲ್ಲಿ ಹೋಗು ತ್ತಿದ್ದರು. ಈ ವೇಳೆ ಭದ್ರಪ್ಪ ಲೇಔಟ್‌ ಮೇಲು ಸೇತುವೆ ಬಳಿ ಬೈಕ್‌ನ ಚಕ್ರಕ್ಕೆ ಮರದ ಪಟ್ಟಿಯೊಂದು ಸಿಕ್ಕಿದ್ದು, ಒಂದು ಕಡೆ ವಾಲಿದೆ.

ಅದೇ ವೇಳೆ ಗೂಡ್ಸ್‌ ವಾಹನ ಬಂದಿದ್ದು, ಬೈಕ್‌ಗೆ ತಗುಲಿದೆ. ಆಗ ಮಹಶ್ರೀ ಬೈಕ್‌ ನಿಂದ ಕೆಳಗೆ ಬಿದ್ದಿದ್ದು, ಗೂಡ್ಸ್‌ ವಾಹನದ ಹಿಂಬದಿ ಚಕ್ರ ಆಕೆ ಮೇಲೆ ಹರಿದಿದೆ.  ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಸಂಚಾರ ಪೊಲೀಸರು ಹೇಳಿದರು.

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಹೆಬ್ಬಾಳ ಸಂಚಾರ ಪೊಲೀಸರು ಪರಿಶೀಲಿಸಿ ಮೃತದೇಹವನ್ನು ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ.

Advertisement

ಘಟನೆ ಸಂಬಂಧ ಗೂಡ್ಸ್‌ ವಾಹನ ಚಾಲಕನನ್ನು ಬಂಧಿಸಿದ್ದು ಹಾಗೂ ವಿದ್ಯಾರ್ಥಿನಿ ಸ್ನೇಹಿತನಿಂದ ಹೇಳಿಕೆ ಪಡೆಯಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು. ಹೆಬ್ಟಾಳ ಸಂಚಾರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಸವಾರ ಸಾವು: ಮತ್ತೂಂದು ಪ್ರಕರಣದಲ್ಲಿ ಟಿಪ್ಪರ್‌ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮಸವಾರ ಮೃತಪಟ್ಟಿರುವ ಘಟನೆ ಕೆ.ಆರ್‌.ಪುರಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬನಶಂಕರಿನಿವಾಸಿ ಬಿಲಾಲ್‌ ಖಾನ್‌(28) ಮೃತ ಸವಾರ. ಕಟ್ಟಡನಿರ್ಮಾಣ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಬಿಲಾಲ್‌ ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆಕೆ.ಆರ್‌.ಪುರ ರೈಲ್ವೆ ನಿಲ್ದಾಣ ಸಮೀಪ ಹೋಗುತ್ತಿದ್ದರು. ಇದೇ ಮಾರ್ಗವಾಗಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಟಿಪ್ಪರ್‌ ಲಾರಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬಿಲಾಲ್‌ ಖಾನ್‌ ಮೇಲೆ ಲಾರಿ ಹರಿದು ಮೃತಪಟ್ಟಿದ್ದಾನೆ ಎಂದು ಸಂಚಾರ ಪೊಲೀಸರು ಹೇಳಿದರು.

ಕೆ.ಆರ್‌.ಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next