ಬನಹಟ್ಟಿ: ಬುದ್ಧಿ ಮಾತು ಹೇಳಿದ ತಂದೆ – ತಾಯಿಯ ಮಾತಿಗೆ ಸಿಟ್ಟಾದ ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬನಹಟ್ಟಿ ನಡೆದಿದೆ.
ಸೌಂದರ್ಯ ಸಂಜು ಗೊಲಭಾವಿ(18) ಆತ್ಮಹತ್ಯೆ ಮಾಡಿಕೊಂಡಾಕೆ.
ಬನಹಟ್ಟಿಯ ಅಶೋಕ ಕಾಲನಿಯ ನಿವಾಸಿ ಸೌಂದರ್ಯ ಸಂಜು ಬನಹಟ್ಟಿಯಲ್ಲಿ ಪಿಯುಸಿ 2ನೇ ವರ್ಷ ಓದುತ್ತಿದ್ದು, ಸೋಮವಾರ ಸಂಜೆ ಮನೆಯಲ್ಲಿ ಮಗಳೊಂದಿಗೆ ಜಗಳವಾಗಿ ಅಭ್ಯಾಸ ಮಾಡದೆ ಊರಲ್ಲಿ ತಿರುಗಾಡುವುದು ಮಾಡುತ್ತಿದ್ದಿಯಾ, ಕಾಲಮಾನ ಸೂಕ್ಷ್ಮವಾಗಿದೆ ಬರಿ ಊರಲ್ಲಿ ತಿರುಗಾಡುತ್ತಿಯಾ ಎಂದು ಸಿಟ್ಟು ಮಾಡಿಕೊಂಡು ತಂದೆ ತಾಯಿ ಬುದ್ದಿವಾದ ಹೇಳಿದ್ದರು.
ಇದೇ ಮಾತನ್ನು ಸೌಂದರ್ಯ ಮನಸ್ಸಿಗೆ ಹಚ್ಚಿಕೊಂಡು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯಲ್ಲಿದ್ದ ಬಳೆಚೂರಿ(ಮಿಂಚಿನ)ನ ಪುಡಿಯನ್ನು ನೀರಿನಲ್ಲಿ ಹಾಕಿಕೊಂಡು ಕುಡಿದು ಮೃತಪಟ್ಟಿದ್ದಾಳೆ.
ಈ ಕುರಿತು ಬನಹಟ್ಟಿ ಪೋಲಿಸ ಠಾಣೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.