Advertisement

ಲಾಕ್ ಡೌನ್ ಇದ್ದರೂ ಶಿವಮೊಗ್ಗದಲ್ಲಿ ಟ್ರಾಫಿಕ್ ಜಾಮ್; ಎಚ್ಚರಿಕೆ ನೀಡಿದ ಪೊಲೀಸ್

09:49 AM Mar 31, 2020 | keerthan |

ಶಿವಮೊಗ್ಗ: ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ಲಾಕ್ ಡೌ್ನ್ ಹೇರಿದ್ದರೂ ಹಲವು ಶಿವಮೊಗ್ಗದ ಲಕ್ಕಿನಕೊಪ್ಪ  ಸರ್ಕಲ್ ಬಳಿಯ ಚೆಕ್ ಪೋಸ್ಟ್ ನಲ್ಲಿ ಟ್ರಾಫಿಕ್ ಜಾಮ್ ಆದ ಪ್ರಸಂಗ ನಡೆಯಿತು.

Advertisement

ಹೊರ ಜಿಲ್ಲೆಯಿಂದ ಬರುವವರಿಗೆ ಶಿವಮೊಗ್ಗ ಜಿಲ್ಲಾಡಳಿತ ಈ ಹಿಂದೆಯೇ ನಿರ್ಭಂಧ ಹೇರಿದ್ದರೂ ತುಮಕೂರು, ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ ಸೇರಿದಂತೆ ವಿವಿಧ ಕಡೆಯಿಂದ ಜನರು ಶಿವಮೊಗ್ಗಕ್ಕೆ ಆಗಮಿಸಿದ್ದರು. ಇವರನ್ನು ಶಿವಮೊಗ್ಗ ಜಿಲ್ಲೆಯ ಲಕ್ಕಿನಕೊಪ್ಪ ಸರ್ಕಲ್ ಬಳಿಯ ಚೆಕ್ ಪೋಸ್ಟ್ ನಲ್ಲೆ ತಡೆದ ಪೊಲೀಸರು ನಿರ್ಭಂಧ ಇದ್ದೂ, ಬಂದವರನ್ನು ವಾಪಸ್ ಕಳುಹಿಸಿದರು.

ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಾಹನಗಳನ್ನು ತಡೆದಿದ್ದರಿಂದಾಗಿ ಸರ್ಕಲ್ ಬಳಿ ಟ್ರಾಫಿಕ್ ಜಾಮ್ ಉಂಟಾಯಿತು. ಅದೇಶ ಮೀರಿ ಬಂದವರಿಗೆ ವಾಪಸ್ ತೆರಳಲು ಶಿವಮೊಗ್ಗ ಗ್ರಾಮಾಂತರ ಸಿಪಿಐ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next