Advertisement

ಕೂರಣಗೆರೆ ಕೆರೆಯಲ್ಲಿ ಅಕ್ರಮ ಮಣ್ಣು ಸಾಗಾಟ ತಡೆಗೆ ಆಗ್ರಹ

04:11 PM Jun 02, 2021 | Team Udayavani |

ಚನ್ನಪಟ್ಟಣ: ತಾಲೂಕಿನ ಕೂರಣಗೆರೆ ಗ್ರಾಮದಕೆರೆಯಲ್ಲಿ ಅಕ್ರಮವಾಗಿ ಜೆಸಿಬಿ, ಟ್ರ್ಯಾಕ್ಟರ್‌ಗಳಿಂದಕೆರೆ ಮಣ್ಣನ್ನು ಸಾಗಾಟ ಮಾಡಲಾಗುತ್ತಿದೆ. ಇದನ್ನುತಡೆದು ಗ್ರಾಮದ ಜನ- ಜಾನುವಾರುಗಳಿಗಾಗಿಕರೆಯನ್ನು ಉಳಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಮತ್ತು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.

Advertisement

ಕೂರಣಗೆರೆ ಗ್ರಾಮದ ಜನ, ಜಾನುವಾರುಗಳಅನುಕೂಲಕ್ಕೆ Çಮತ್ತು ಅಂತರ್ಜಲ ವೃದ್ಧಿಗಾಗಿಪೂರ್ವಿಕರ ಕಾಲದಿಂದ ಉಳಿಸಿಕೊಂಡು ಬಂದಿರುವಕೆರೆ ಸುಮಾರು 16 ಎಕರೆ ಪ್ರದೇಶದಲ್ಲಿದೆ. ಇದನ್ನುಬಹುತೇಕ ಕೆರೆ ಅಕ್ಕಪಕ್ಕದ ಕೆಲವರು ಅಕ್ರಮವಾಗಿಒತ್ತುವರಿ ಮಾಡಿಕೊಂಡಿದ್ದಾರೆ. ಸುಮಾರು 3-4ಎಕರೆ ಪ್ರದೇಶದ ಕೆರೆಯಲ್ಲಿ ಅಕ್ರಮವಾಗಿ ಮಣ್ಣನ್ನುತೆಗೆದು ಮಾರಾಟಕ್ಕಾಗಿ ಸಾಗಾಟ ಮಾಡುತ್ತಿದ್ದು, ಕೆರೆಸಂಪತ್ತು ನಾಶವಾಗುತ್ತಿದೆ ಎಂದು ಗ್ರಾಮಸ್ಥರುದೂರಿದ್ದಾರೆ.

ಕೆರೆಯಲ್ಲಿ ನೀರಿಲ್ಲ: ತಾಲೂಕಿನ ಬಹುತೇಕ ಎಲ್ಲಾಕೆರೆಗಳು ತುಂಬಿವೆ. ಆದರೆ, ಕೂರಣಗೆರೆ ಗ್ರಾಮದಕೆರೆಯಲ್ಲಿ ನೀರಿಲ. ಮಳೆ ಬಂದಾಗ ಜನ, ಜಾನುವಾರುಗಳಿಗೆ ಅನುಕೂಲವಾಗಿದೆ. ಈಗ ಬೇಸಿಗೆಕಾಲ. ಕೆರೆ ನೀರಿಲ್ಲದೆ  ಭತ್ತಿದೆ.ಇದನ್ನು ಉಪಯೋಗಿಸಿಕೊಂಡುಕೆಲವು ಬಲಾಡ್ಯರುಯಾವುದೇ ಅನುಮತಿ ಪಡೆಯದೇ ಕಳೆದ ಎರಡು ತಿಂಗಳಿನಿಂದ ಅಕ್ರಮವಾಗಿ ಜೆಸಿಬಿ, ಟ್ರಾÂಕ್ಟರ್‌ಬಳಸಿಕೊಂಡು 10-15 ಅಡಿ ಆಳ ಕೆರೆ ಮಣ್ಣನ್ನುತೆಗೆದು ಮಾರಾಟ ಮಾಡುವುದು, ಅಕ್ರಮವಾಗಿಪಿಲ್ಟರ್‌ ಮರಳು ಉತ್ಪಾದನೆಗೆ ಬಳಸುತ್ತಿದ್ದಾರೆ ಎಂಬಆರೋಪಕೇಳಿಬಂದಿದೆ.ಗ್ರಾಮದಲ್ಲಿ ಜೆಸಿಬಿ, ಟ್ರ್ಯಾಕ್ಟರ್ ಸಂಚರಿಸುತ್ತಿದ್ದು, ಗ್ರಾಮಸ್ಥರಿಗೆ ಗೆ ಮತ್ತು ಮಕ್ಕಳಿಗೆ ತೊಂದರೆ  ಆಗುತ್ತಿದೆ.

ಒತ್ತುವರಿ ತೆರವು ಮಾಡಿ: ಕೆರೆ ವಿಸ್ತೀರ್ಣ ಅಳತೆಮಾಡಿ ಒತ್ತುವರಿ ತೆರವು ಮಾಡಿಸಬೇಕು. ಕೆರೆಸಂಪñನು‌¤ ° ಉಳಿಸಬೇಕು ಎಂದು ಡೀಸಿ,ತಹಶೀಲ್ದಾರ್‌, ಚಕ್ಕೆರೆ ಗ್ರಾಪಂ ಪಿಡಿಒ ಅಧಿಕಾರಿಗಳಿಗೆಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸಮಾಜ ಸೇವಕ ಕೂರಣಗರೆ  ಕೆ.ಬಿ.ಕೃಷ್ಣಪ್ಪ ಕಿಡಿಕಾರಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next