ಮಂಗಳೂರು: ತನ್ನ ಒಳ ಉಡುಪಿನಲ್ಲಿ ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳ ಕೈಗೆ ಸಿಕ್ಕಿಹಾಕಿಕೊಂಡಿದ್ದು, ಈತನಿಂದ ಬರೋಬ್ಬರಿ 57,14,940/- ಮೌಲ್ಯದ 1.23 ಕಿ.ಗ್ರಾಂ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿತ ವ್ಯಕ್ತಿಯನ್ನು ಇಸ್ಮಾಯಿಲ್ ಅಹಮದ್ ಕಲ್ಲಾರ್ ಎಂದು ಗುರುತಿಸಲಾಗಿದ್ದು, ಇವನು ಕಾಸರಗೋಡು ಮೂಲದನೆಂದು ತಿಳಿದುಬಂದಿದೆ.
ಈತ ಶುಕ್ರವಾರ (ಮಾ.26)ದಂದು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಪರಿಶೀಲನಾ ಹಂತದಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ:ಕಷ್ಟಗಳನ್ನು ಎದುರಿಸೋಣ; “ಓಡಬೇಡಿ ತಿರುಗಿ ನಿಂತು ಎದುರಿಸಿರಿ’ ಎಂಬುದು ಜೀವನೋತ್ಸಾಹದ ಮಂತ್ರ
ಈ ಕಾರ್ಯಾಚರಣೆಯು ಡಾ. ಕಪಿಲ್ ಗಾಡೆ IRS, ಡೆಪ್ಯುಟಿ ಕಮಿಷನರ್ ಮಾರ್ಗದರ್ಶನಲ್ಲಿ ನಡೆದಿದ್ದು, ಇವರ ಜೊತೆಗೆ ಅಧಿಕಾರಿಗಳಾದ ಶ್ರೀಕಾಂತ್ ಕೆ., ನಾಗೇಶ್ ಕುಮಾರ್ , ನವೀನ್ ಪಾಲ್ಗೊಂಡಿದ್ದರು.