Advertisement
ನಗರದ ಜಿಲ್ಲಾ ಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿದಯಾ ಸಂಘ ಹಾಗೂ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಮತ್ತು ಸಂರಕ್ಷಣಾ ವಿಧೇಯಕ-2021ರ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅನ ಧಿಕೃತವಾಗಿ ಗೋವು, ಕರುಗಳು, ಒಂಟೆಗಳು ಹಾಗೂ ಇತರೆ ಜಾನುವಾರುಗಳ ಅಕ್ರಮ ಸಾಗಾಣಿಕೆ ಹಾಗೂ ವಧೆ ಮಾಡುವ ಸಾಧ್ಯತೆಗಳಿವೆ. ಆದ್ದರಿಂದ, ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸುವ ಮೂಲಕ ಅಕ್ರಮ ಜಾನುವಾರು ಸಾಗಾಣಿಕೆ ಹಾಗೂ ವಧೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
Related Articles
Advertisement
ಜಿಲ್ಲಾ ಪ್ರಾಣಿದಯಾ ಸಂಘದ ಅಧಿಕಾರೇತರ ಸದಸ್ಯ ಶಾಂತಪ್ಪ ಅಟವಾಳಗಿ ಮಾತನಾಡಿ, ಬಿಡಾಡಿ ದನಗಳು ಹಾಗೂ ನಾಯಿಗಳಿಗೆ ಮುಂಜಾಗ್ರತಾ ಲಸಿಕೆಗಳನ್ನು ಮತ್ತು ಮೇವು, ನೀರು ನೀಡಲು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಜಿಲ್ಲಾ ಧಿಕಾರಿ ಸಂಜಯ ಶೆಟ್ಟಣ್ಣವರ, ಜಿಲ್ಲೆಯಲ್ಲಿ 2781 ಬಿಡಾಡಿ ದನಗಳಿದ್ದು, ಅವುಗಳಿಗೆ ಆಯಾ ತಾಲೂಕಿನ ಮಾರುಕಟ್ಟೆ ಸಮೀಪ ಒಂದೇ ಕಡೆಗೆ ಮೇವು ಮತ್ತು ನೀರು ಒದಗಿಸಲು ಸ್ವಯಂ ಸೇವಾ ಸಂಸ್ಥೆಗಳು, ಪ್ರಾಣಿ ಪ್ರಿಯರು ಮುಂದೆ ಬಂದಲ್ಲಿ ಸರ್ಕಾರದಿಂದ ಅನುದಾನ ಲಭ್ಯವಿದೆ. ಅದನ್ನು ಒದಗಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ಪ್ರಾಣಿಜನ್ಯ ರೋಗಗಳ ಬಗ್ಗೆ ಅರಿವು ಮೂಡಿಸಲು ಅನುದಾನವನ್ನು ಜಿಲ್ಲಾ ಪ್ರಾಣಿದಯಾ ಸಂಘದ ವತಿಯಿಂದ ನೀಡಲು ಅನುಮೋದನೆ ನೀಡಲಾಯಿತು. ಹಾವೇರಿ ಜಿಲ್ಲಾ ಪ್ರಾಣಿ ದಯಾ ಸಂಘದ ಸರ್ಕಾರೇತರ ಸದಸ್ಯರಾದ ನಿಜಲಿಂಗಪ್ಪ ಬಸಗೇಣ್ಣಿ, ಪರಿಮಳ ಜೈನ್, ರವಿ ಹಿಂಚಗೇರಿ, ಚಂದ್ರಕಾಂತ, ಸಿ.ಬಿ.ಪಾಟೀಲ, ಪವನ್ ಎಸ್‌ಟಿ ಗೋಶಾಲೆ, ಸಂಗೂರು, ಡಾ|ಸಂಜಯ, ಕಾಮಧೇನು ಗೋ ಸಂರಕ್ಷಣಾ ಕೇಂದ್ರ, ರಾಣಿಬೆನ್ನೂರ, ಪೌರಾಡಳಿತ ಇಲಾಖೆಯ ಅ ಧಿಕಾರಿಗಳು, ಸಾರಿಗೆ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣಾಧಿಕಾರಿಗಳು, ತಹಶೀಲ್ದಾರ್ ರು ಹಾಗೂ ಜಿಲ್ಲೆಯ ವಿವಿಧ ಖಾಸಗಿ ಗೋಶಾಲೆಗಳ ಸದಸ್ಯರು ಭಾಗವಹಿಸಿದ್ದರು.