Advertisement

ವಾಹನ ಚಾಲಕರಿಗೆ ಟ್ರಾಫಿಕ್‌ ಚಿಂತೆ 

11:42 AM Oct 21, 2018 | Team Udayavani |

ಮೂಲ್ಕಿ : ಕಾರ್ನಾಡಿನ ಶನಿವಾರ ನಡೆ ಯುವ ಸಂತೆಯ ದಿನ ಬಹುತೇಕ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ರಸ್ತೆಯ ಬದಿಯಲ್ಲಿ ನಡೆಸುತ್ತಿದ್ದು, ಇದರಿಂದ ಈ ದಾರಿಯ ಮೂಲಕ ಸಂಚರಿಸುವ ವಾಹನ ಚಾಲಕರಿಗೆ ಸಮಸ್ಯೆಯಾಗುತ್ತಿದೆ. ರಾಜ್ಯ ಹೆದ್ದಾರಿಯಾಗಿರುವ ಮೂಲ್ಕಿ ಕಿನ್ನಿಗೋಳಿ-ಬೆಳ್ತಂಗಡಿಯತ್ತ ಹೋಗುವ ವಾಹನಗಳು ವಾರದ ಸಂತೆಯ ದಿನ ಹೇಗೆ ಹೋಗಬೇಕೆಂಬುದು ವಾಹನ ಚಲಾಯಿಸುವವರ ಗೊಂದಲವಾಗಿದೆ.

Advertisement

ಇಲ್ಲಿ ಕೆಲವು ಸಂದರ್ಭಗಳಲ್ಲಿ ಜನರು ರಸ್ತೆಯನ್ನು ಬ್ಲಾಕ್‌ ಮಾಡುವಷ್ಟು ಕಠಿಣವಾಗಿ, ಯಾವುದೇ ಮುಲಾಜಿಲ್ಲದೆ ವಸ್ತುಗಳನ್ನು ಖರೀದಿ ಮಾಡುತ್ತಿರುತ್ತಾರೆ. ವಾಹನಗಳ ಚಾಲಕರು ಎಷ್ಟೇ ಹಾರ್ನ್ಸದ್ದು ಮಾಡಿದರೂ ಚಿಕ್ಕಾಸು ಬೆಲೆ ಇಲ್ಲ ಎಂಬ ಪರಿಸ್ಥಿತಿ ಇಲ್ಲಿನದು. ನ. ಪಂ. ಮೂಲಕ ರಸ್ತೆಯಲ್ಲಿ ವ್ಯಾಪಾರ ಮಾಡದಂತೆ ತಿಳಿಸಿದರೂ ಇಲ್ಲಿ ಯಾವುದೇ ನಿಯಮಗಳು ಪಾಲನೆಯಾಗುತ್ತಿಲ್ಲ. ಇಲ್ಲಿ ಪೊಲೀಸ್‌ ಇಲಾಖೆಯ ಹೋಮ್‌ಗಾರ್ಡ್‌ ನ ಒಬ್ಬರೋ ಇಬ್ಬರೋ ಸಿಬಂದಿಗಳಿರುತ್ತಾರೆ. ಆದರೆ ಇವರಿಗೆ ಈ ವ್ಯಾಪಾರಿಗಳು ಚಿಕ್ಕಾಸು ಬೆಲೆ ನೀಡದೆ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ.

ಜನರು ಎಚ್ಚೆತ್ತು ಸಹಕಾರ ನೀಡಿದರೆ ಸಾಧ್ಯ
ಸಂತೆ ನಡೆಯುವ ಜಾಗದಲ್ಲಿ ಜಾಗದ ಅವಕಾಶ ಕಡಿಮೆ ಇದೆ. ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರ ಮಾಡುವುದನ್ನು ನಗರ ಪಂಚಾಯತ್‌ ಒಪ್ಪದೆ ಹಲವು ಬಾರಿ ನಗರ ಪಂಚಾಯತ್‌ ಸಿಬಂದಿ ಸಂತೆಯನ್ನು ಖಾಲಿ ಮಾಡಿಸಿದ್ದಾರೆ.
 - ಸುನಿಲ್‌ ಆಳ್ವ,ಅಧ್ಯಕ್ಷ ,
    ನಗರ ಪಂಚಾಯತ್‌ ಮೂಲ್ಕಿ

Advertisement

Udayavani is now on Telegram. Click here to join our channel and stay updated with the latest news.

Next