Advertisement

ನಿರುಪಯುಕ್ತ ಟ್ರಾಫಿಕ್‌ ಸಿಗ್ನಲ್‌ ಕಂಬ ತೆರವು ಕಾರ್ಯಕ್ಕೆ ಮುಂದಾದ ಬಿಆರ್‌ಟಿಎಸ್

10:35 AM Nov 10, 2020 | sudhir |

ಹುಬ್ಬಳ್ಳಿ: ನಗರದ ವಿವಿಧ ವೃತ್ತಗಳಲ್ಲಿ ಹಾಗೇ ಉಳಿದಿದ್ದ ನಿರುಯುಕ್ತ ಟ್ರಾಫಿಕ್‌ ಸಿಗ್ನಲ್‌ ಕಂಬಗಳ ತೆರವು ಕಾರ್ಯಕ್ಕೆ ಬಿಆರ್‌ಟಿಎಸ್‌ ಮುಂದಾಗಿದೆ. ಬಳಕೆಯಲ್ಲಿಲ್ಲದ ಕಂಬಗಳನ್ನು ತೆಗೆಯುವ ಕಾರ್ಯಾಚರಣೆ ಸೋಮವಾರದಿಂದ ಆರಂಭವಾಗಿದೆ.
ನಗರದ ಬಹುತೇಕ ವೃತ್ತಗಳಲ್ಲಿ ಬಳಕೆಯಿಲ್ಲದ ಟ್ರಾಫಿಕ್‌ ಸಿಗ್ನಲ್‌ ಕಂಬಗಳಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ನ. 7ರಂದು ಉದಯವಾಣಿ ಪತ್ರಿಕೆ “ಸಿಗ್ನಲ್‌ಗಾಗಿ ಸವಾರರ ಸರ್ಕಸ್‌’ ಎನ್ನುವ ಶೀರ್ಷಿಕೆಯಡಿ ವಿಸ್ತೃತವಾದ ವರದಿ ಪ್ರಕಟಿಸಿತ್ತು.

Advertisement

ಈ ಕುರಿತು ಎಚ್ಚೆತ್ತುಕೊಂಡಿರುವ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಬಿಆರ್‌ಟಿಎಸ್‌ ಕಂಪನಿ ಮೂಲಕ ನಿರುಪಯುಕ್ತ ಕಂಬಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದಾರೆ.

ಗಣೇಶ ಪೇಟೆ ವೃತ್ತ, ಅಂಬೇಡ್ಕರ್‌ ವೃತ್ತ, ಚಿಟಗುಪ್ಪಿ ಆಸ್ಪತ್ರೆ ಮುಂಭಾಗದ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಸವ ವನ, ಇಂದಿರಾ ಗಾಜಿನಮನೆ ವೃತ್ತ, ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ಉಳಿದಿರುವ ಹಳೇ ಕಂಬ ಹಾಗೂ ಸಿಗ್ನಲ್‌ ದೀಪಗಳನ್ನು
ತೆರವುಗೊಳಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳ ಆದೇಶ ಮೇರೆಗೆ ಬಿಆರ್‌ಟಿಎಸ್‌ ಕಾರಿಡಾರ್‌ ಉದ್ದಕ್ಕೂ ಇರುವ ಹಳೆಯ ಕಂಬಗಳನ್ನು ತೆಗೆಯಲು ಆರಂಭಿಸಿದ್ದೇವೆ. ಮೊದಲ ಹಂತದಲ್ಲಿ ಕಂಬಗಳಲ್ಲಿ ಉಳಿದಿರುವ ಸಿಗ್ನಲ್‌ ದೀಪಗಳನ್ನು ತೆರವುಗೊಳಿಸಲಾಗುತ್ತಿದೆ.

ಇದನ್ನೂ ಓದಿ:ಬಿಹಾರ ಫಲಿತಾಂಶ2020: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯುಗಿಂತ ಬಿಜೆಪಿ ಮೇಲುಗೈ

ನಂತರದಲ್ಲಿ ಕ್ರೇನ್‌ ಬಳಸಿಕೊಂಡು ಕಂಬಗಳನ್ನು ಕೀಳುವ ಕೆಲಸ ನಡೆಯಲಿದೆ ಎಂದು ಬಿಆರ್‌ಟಿಎಸ್‌ ಸಿಬ್ಬಂದಿಯೊಬ್ಬರು ತಿಳಿಸಿದರು.

Advertisement

ಬಿಆರ್‌ಟಿಎಸ್‌ ಯೋಜನೆ ಪ್ರಕಾರ ಕಾರಿಡಾರ್‌ ಉದ್ದಕ್ಕೂ ಟ್ರಾಫಿಕ್‌ ಸಿಗ್ನಲ್‌ ಅಳವಡಿಸುವುದು ಮಾತ್ರವಾಗಿತ್ತು. ಆದರೆ ಇದೀಗ ಹಳೆಯ ಕಂಬಗಳಿಂದ ಆಗುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ತೆರವುಗೊಳಿಸುವ ಅನಿವಾರ್ಯತೆ ಸೃಷ್ಟಿಯಾಗಿರುವುದರಿಂದ
ಬಿಆರ್‌ಟಿಎಸ್‌ ಕಂಪನಿ ಮೂಲಕ ಈ ಕಾರ್ಯ ಮಾಡಿಸಲಾಗುತ್ತಿದೆ. ಬಿಆರ್‌ಟಿಎಸ್‌ ಕಂಪನಿ ಹೊಸದಾಗಿ ಯಾವ ವೃತ್ತದಲ್ಲಿ ಹೊಸ ಸಿಗ್ನಲ್‌ ಕಂಬಗಳನ್ನು ಅಳವಡಿಸಿದೆಯೋ ಅಂತಹ ವೃತ್ತಗಳಲ್ಲಿ ಮಾತ್ರ ಹಳೆಯ ಕಂಬಗಳ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಆದರೆ ಇನ್ನುಳಿದ ಬಹುತೇಕ ವೃತ್ತಗಳಲ್ಲಿ ಹಳೇ ಟ್ರಾಫಿಕ್‌ ಸಿಗ್ನಲ್‌ ಕಂಬಗಳಿದ್ದು, ಅವುಗಳನ್ನು ಯಾವ
ಇಲಾಖೆಯಿಂದ ತೆರವುಗೊಳಿಸಬೇಕು ಎಂಬ ಪ್ರಶ್ನೆ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next