Advertisement

ಟ್ರಾಫಿಕ್‌ ಸಿಗ್ನಲ್ ಆಟಕ್ಕುಂಟು ಲೆಕ್ಕಕ್ಕಿಲ್

12:49 PM May 10, 2019 | pallavi |

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದ ಬಲಮುರಿ ವೃತ್ತದಲ್ಲಿ ಟ್ರಾಫಿಕ್‌ ಸಿಗ್ನಲ್ ದೀಪಗಳು ಉರಿಯು ವುದು ಸ್ಥಗಿತಗೊಂಡು ವಾರ ಕಳೆಯುತ್ತಿದ್ದರೂ ಇದುವರೆಗೂ ನಗರದ ಸಂಚಾರಿ ಪೊಲೀಸರು ಗಮನ ಹರಿಸದಿರುವುದು ವಾಹನ ಸವಾರರ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣ ವಾಗಿದೆ.

Advertisement

ಸಂಚಾರ ಅಸ್ತವ್ಯಸ್ತ: ಹೇಳಿ ಕೇಳಿ ಬಲಮುರಿ ವೃತ್ತ ಸದಾ ವಾಹನಗಳ ದಟ್ಟಣೆಯಿಂದ ಕೂಡಿದ್ದು, ಜನ ಸಂಚಾರ, ವಾಹನ ಸಂಚಾರ ದಟ್ಟವಾಗಿರುತ್ತದೆ. ಆದರೆ ಸುಗಮ ಸಂಚಾರಕ್ಕೆ ಸಾಥ್‌ ಕೊಡುವ ಟ್ರಾಫಿಕ್‌ ಸಿಗ್ನಲ್ ದೀಪಗಳು ಕೆಟ್ಟು ನಿಂತು ದುರಸ್ತಿ ಗೊಳ್ಳದ ಕಾರಣ ವಾಹನ ಸಂಚಾರ ಅಸ್ತವ್ಯಸ್ಥ ಗೊಂಡು ಸವಾರರು ಅಂಗೈಯಲ್ಲಿ ಪ್ರಾಣ ಹಿಡಿದು ಕೊಂಡು ಹೋಗುವ ದುಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕಬಳ್ಳಾಪುರದ ಬಿಬಿ ರಸ್ತೆಯಲ್ಲಿ ಬಜಾರ್‌ ರಸ್ತೆ, ಸಂತೆ ಮಾರುಕಟ್ಟೆ, ಸರ್‌ ಎಂವಿ ಕ್ರೀಡಾಂಗಣ ಸೇರಿದಂತೆ ನಗರದ ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ವೃತ್ತ ಇದಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಟ್ರಾಫಿಕ್‌ ಸಿಗ್ನಲ್ಗಳು ಸ್ಥಗಿತಗೊಂಡಿ ರುವುದರಿಂದ ಸುಗಮ ಸಂಚಾರದಲ್ಲಿ ವ್ಯತ್ಯಯ ಕಂಡಿದೆ.

ಗಮನ ಕೊಡದ ಪೊಲೀಸರು: ಜಿಲ್ಲಾ ಕೇಂದ್ರದಲ್ಲಿ ಟ್ರಾಫಿಕ್‌ ಸಿಗ್ನಲ್ಗಳು ಇರುವ ಕಡೆಯೇ ಸಾಕಷ್ಟು ರಸ್ತೆ ನಿಯಮಗಳು ಉಲ್ಲಂಘನೆಯಾಗುತ್ತಿದ್ದು, ಅಪಘಾತಗಳು ಸಂಭವಿಸಿ ಅಮಾಯಕರು ಬಲಿ ಯಾಗುತ್ತಿದ್ದಾರೆ. ಆದರೆ ಪ್ರಮುಖ ವೃತ್ತದಲ್ಲಿ ಟ್ರಾಫಿಕ್‌ ಸಿಗ್ನಲ್ಗಳು ಕಾರ್ಯ ನಿರ್ವಹಿಸದೇ ಇದ್ದರೂ ಸಂಚಾರಿ ಪೊಲೀಸರು ಮಾತ್ರ ಗಮನ ಕೊಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ವೃತ್ತಕ್ಕೆ ಹೊಂದಿಕೊಂಡಂತೆ ಜೂನಿಯರ್‌ ಕಾಲೇಜು, ರೈಲ್ವೆ ನಿಲ್ದಾಣ, ನಗರಸಭೆ ಕಾರ್ಯಾಲಯ ಕಚೇರಿ ಕೂಗಳತೆಯ ದೂರದಲ್ಲಿವೆ. ಆದರೆ ವಾಹನ ಸವಾರರಲ್ಲಿ ಒಂದಿಷ್ಟು ಶಿಸ್ತು ಹಾಗೂ ಅತಿ ವೇಗವಾಗಿ ಚಲಾಯಿಸುವುದನ್ನು ನಿಯಂತ್ರಣಕ್ಕೆ ತರುತ್ತಿದ್ದ ಟ್ರಾಫಿಕ್‌ ಸಿಗ್ನಲ್ಗಳು ಈಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

Advertisement

ಜಿಲ್ಲಾ ಕೇಂದ್ರದ ಬಹುತೇಕ ವೃತ್ತಗಳಲ್ಲಿ ಅಳವಡಿಸಲಾಗಿರುವ ಟ್ರಾಫಿಕ್‌ ಸಿಗ್ನಲ್ ದೀಪಗಳು ಕೂಡ ಓಬಿರಾಯನ ಕಾಲದ್ದಾಗಿದ್ದು, ಅವು ಕೂಡ ಅಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಕೆಲವು ವೃತ್ತಗಳಲ್ಲಿ ಟ್ರಾಫಿಕ್‌ ಸಿಗ್ನಲ್ಗಳನ್ನು ಕಾಟಾ ಚಾರಕ್ಕೆ ಅಳವಡಿಸಿರುವುದು ಬಿಟ್ಟರೆ ಕಾರ್ಯ ನಿರ್ವಹಿಸುತ್ತಿಲ್ಲ. ವಿಶೇಷವಾಗಿ ಹೆಚ್ಚು ವಾಹನ ದಟ್ಟಣೆ ಇರುವ ಹಳೆ ಎಸ್ಪಿ ಕಚೇರಿ, ಸಿದ್ದೇಶ್ವರ ಸಮುದಾಯ ಭವನ ವೃತ್ತ ಮತ್ತಿತರ ಕಡೆಗಳಲ್ಲಿ ಸಿಗ್ನಲ್ಗಳು ಇದ್ದರೂ ಉರಿಯುತ್ತಿಲ್ಲ. ಸವಾರರು, ಸಾರ್ವಜನಿಕರು ಈ ಬಗ್ಗೆ ಪೊಲೀಸ್‌ ಇಲಾಖೆ ಗಮನಕ್ಕೆ ತಂದರೂ ಯಾವುದೇ ಬದಲಾವಣೆ ಆಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next