Advertisement

ಸಂಚಾರಿ ನಿಯಮ ಉಲ್ಲಂಘನೆ: ದೆಹಲಿ ಪೊಲೀಸರಿಂದ ರಾಬರ್ಟ್‌ ವಾದ್ರಾಗೆ ಚಲನ್‌

06:41 PM Jun 25, 2021 | Team Udayavani |

ನವ ದೆಹಲಿ: ಸಂಚಾರ ನಿಯಮ ಉಲ್ಲಂಘನೆಗೈದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾರಿಗೆ ದೆಹಲಿ ಪೊಲೀಸರು ಚಲನ್‌ ನೀಡಿದ್ದಾರೆ.

Advertisement

ಅಪಾಯಕಾರಿ ಚಾಲನೆ ಆರೋಪದಲ್ಲಿ ಚಲನ್‌ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ವಾದ್ರಾ ಅವರು ತಮ್ಮ ಕಾರಲ್ಲಿ ಕಚೇರಿಗೆ ತೆರಳುತ್ತಿದ್ದರು. ಏಕಾಏಕಿ ಕಾರಿನ ವೇಗ ತಗ್ಗಿಸಿದ್ದರಿಂದ ಹಿಂದಿನಿಂದ ಬಂದ ಕಾರು, ವಾದ್ರಾ ಕಾರಿಗೆ ಡಿಕ್ಕಿ ಹೊಡೆಯಿತು.

ಈ ಹಿನ್ನೆಲೆಯಲ್ಲಿ ಚಲನ್‌ ನೀಡಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ಮಹಾರಾಷ್ಟ್ರ; ಮತ್ತೆ ಕಠಿಣ ಕೋವಿಡ್ ನಿರ್ಬಂಧ ಘೋಷಣೆ, 4 ಗಂಟೆವರೆಗೆ ಅಂಗಡಿ ಬಂದ್

Advertisement

Udayavani is now on Telegram. Click here to join our channel and stay updated with the latest news.

Next