Advertisement

ಸಂಚಾರಿ ನಿಯಮ ಕಡ್ಡಾಯ ಪಾಲಿಸಿ

11:34 AM Oct 27, 2018 | Team Udayavani |

ಹುಣಸೂರು: ನಗರದಲ್ಲಿ ಪೊಲೀಸ್‌ ಇಲಾಖೆ ರೋಟರಿ ಶಾಲಾ ವಿದ್ಯಾರ್ಥಿಗಳ ಸಹಯೋಗದಲ್ಲಿ ದ್ವಿಚಕ್ರವಾಹನ ಸವಾರರು “ಹೆಲ್ಮೆಟ್‌ ಧರಿಸಿ-ಪ್ರಾಣ ಉಳಿಸಿಕೊಳ್ಳಿ’ ಕುರಿತ ಜಾಗೃತಿ ಅಭಿಯಾನ ಜಾಥಾ ನಡೆಸಿದರು. ನಗರಸಭೆ ಆವರಣದಿಂದ ಹೊರಟ ಜಾಥಾಕ್ಕೆ ಶಾಸಕ ಎಚ್‌.ವಿಶ್ವನಾಥ್‌ ಸ್ವತಃ ಹೆಲ್ಮೆಟ್‌ ಧರಿಸಿಕೊಂಡು ಸ್ಕೂಟರ್‌ ರೈಡ್‌ ಮಾಡಿ, ನಗರಸಭಾ ಸದಸ್ಯೆ ಸುನಿತಾಗೆ ಹೆಲ್ಮೆಟ್‌ ನೀಡಿ ಚಾಲನೆ ನೀಡಿದರು.

Advertisement

ಬಳಿಕ ಮಾತನಾಡಿದ ವಿಶ್ವನಾಥ್‌, ತಾಲೂಕಿನಲ್ಲಿ ಹೆಲ್ಮೆಟ್‌ ಧರಿಸದೆ 25 ದಿನಗಳಲ್ಲಿ 10ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿರುವುದು ನೋವಿನ ಸಂಗತಿ, ಅಲ್ಲದೆ ಬಹುತೇಕರು ವಿಮೆ, ಡ್ರೈವಿಂಗ್‌ ಲೈಸನ್ಸ್‌ ಸೇರಿದಂತೆ ದಾಖಲಾತಿಗಳಿಲ್ಲದೆ ಹಾಗೂ ಮದ್ಯಸೇವನೆ ಮಾಡಿ ವಾಹನ ಚಲಾಯಿಸುವುದು, ಚಿಕ್ಕ ಮಕ್ಕಳು ದ್ವಿಚಕ್ರವಾಹನ ಓಡಿಸುವುದು ಹಾಗೂ ಅಲ್ಲಲ್ಲಿ ವೀಲಿಂಗ್‌, ತ್ರಿಬಲ್‌ ರೈಡ್‌ ಮಾಡುವುದು ಅಪಾಯಕಾರಿ. ಯುವ ಪಡೆ ಈ ಬಗ್ಗೆ ಎಚ್ಚರಿಕೆ ವಹಿಸಬೇಕೆಂದರು. 

ಹೆಲ್ಮೆಟ್‌ ಧರಿಸಿ ಜಾಥಾ: ನಗರಸಭೆ ಮೈದಾನದಿಂದ ಹೊರಟ ಜಾಥಾದಲ್ಲಿ 20ಕ್ಕೂ ಹೆಚ್ಚು ಪೊಲೀಸರು ಹೆಲ್ಮೆಟ್‌ ಧರಿಸಿ ಬೈಕ್‌ ಓಡಿಸಿದರೆ, ರೋಟರಿ ಶಾಲಾ ಮಕ್ಕಳು ಹೆಲ್ಮೆಟ್‌ ಧರಿಸಿರಿ-ಪ್ರಾಣ ಉಳಿಸಿಕೊಳ್ಳಿ, ರಸ್ತೆ ನಿಯಮ ಪಾಲಿಸಿ-ಆಗುವ ಅನಾಹುತ ತಪ್ಪಿಸಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರ ಗಮನ ಸೆಳೆದರು.

ನಗರಸಭೆ ಅಧ್ಯಕ್ಷ ಎಚ್‌.ವೈ.ಮಹದೇವ್‌, ಡಿವೈಎಸ್‌ಪಿ ಭಾಸ್ಕರ ರೈ, ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ, ರೋಟರಿ ಕಾರ್ಯದರ್ಶಿ ಸುನಿತಾ, ತಾಪಂ ಉಪಾಧ್ಯಕ್ಷ ಪ್ರೇಮಕುಮಾರ್‌, ಸದಸ್ಯ ಪ್ರೇಮೇಗೌಡ, ನಗರಸಭಾ ಸದಸ್ಯರಾದ ಕೃಷ್ಣರಾಜಗುಪ್ತ, ಶರವಣ, ಯೋಗಾನಂದ, ಶಿವಕುಮಾರ್‌, ಎಸ್‌ಐಗಳಾದ ಮಹೇಶ್‌, ಶಿವಪ್ರಕಾಶ್‌ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next