Advertisement

ಟ್ರಾಫಿಕ್‌ ಸಮಸ್ಯೆಗೆ ಪರಿಹಾರ ಯಾವಾಗ?

02:30 PM Sep 20, 2021 | Team Udayavani |

ಸಕಲೇಶಪುರ: ಪಟ್ಟಣ ವ್ಯಾಪ್ತಿಯ ಟ್ರಾμಕ್‌ ಸಮಸ್ಯೆತಾತ್ಕಾಲಿಕವಾಗಿ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಪಟ್ಟಣದ ಮುಖ್ಯ ರಸ್ತೆ ಸೇರಿದಂತೆಕೆಲವು ಒಳ ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆನಿಷೇಧ ಹೇರಿದ್ದು, ಆದರೆ ಇದನ್ನುಅನುಷ್ಠಾನಗೊಳಿಸಲು ಪುರಸಭೆ ಹಾಗೂ ಪೋಲಿಸ್‌ಇಲಾಖೆ ಮುಂದಾಗದ ಕಾರಣ ಟ್ರಾμಕ್‌ ಕಿರಿಕಿರಿಎಂದಿನಂತೆ ಮುಂದುವರಿದಿದೆ.

Advertisement

ಬೆಂಗಳೂರು-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75 ಪಟ್ಟಣದ ಹೃದಯ ಭಾಗದಲ್ಲಿಹಾದುಹೋಗಿದ್ದು ದಿನನಿತ್ಯ ಸಾವಿರಾರುವಾಹನಗಳು ಈ ರಸ್ತೆಯಲ್ಲಿ ಸಂಚರಿಸುವುದು ಸಾಮಾನ್ಯವಾಗಿದೆ.ಕಿರಿದಾದ ಮುಖ್ಯ ರಸ್ತೆಯ ಒಂದುಭಾಗದಲ್ಲಿ ವಾಹನಗಳ ನಿಲುಗಡೆಮಾಡುವುದು ಸಾಮಾನ್ಯವಾಗಿದ್ದು, ಇದರಿಂದಪಟ್ಟಣದಲ್ಲಿ ಟ್ರಾಫಿಕ್‌ಕಿರಿಕಿರಿಯಾಗುತ್ತಿತ್ತು.

ಈಹಿನ್ನೆಲೆಯಲ್ಲಿ ಹಾಸನದ ಜಿಲ್ಲಾಧಿಕಾರಿ ಗಿರೀಶ್‌ ರವರು ಆ.31 ಹೊರಡಿಸಿ ಎನ್‌.ಎಚ್‌ 75ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ರೀತಿಯವಾಹನ ನಿಲುಗಡೆ ನಿಷೇಧಿಸಿದ್ದರು. ಅಲ್ಲದೆ ಪಟ್ಟಣದಹಳೆ ಸಂತೇವೇರಿ ಕ್ರಾಸ್‌ನಿಂದ ಪಶು ಆಸ್ಪತ್ರೆ ಕ್ರಾಸ್‌ವರೆಗೆ ರಸ್ತೆಯ ಬಲಭಾಗದಲ್ಲಿ ನಾಲ್ಕು ಚಕ್ರದವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿದ್ದು, ಹಳೆಬಸ್‌ ನಿಲ್ದಾಣದ ಬಳಿ ನಿರ್ಮಾಣ ಹಂತದಲ್ಲಿರುವಪುರಸಭೆಯ ಕಟ್ಟಡದ ನೆಲಮಾಳಿಗೆಯ ಖಾಲಿಜಾಗದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶಕಲ್ಪಿಸುವುದು ಹಾಗೂ ಈ ಕಟ್ಟಡದ ಪಕ್ಕದಲ್ಲಿರುವಪುರಸಭೆಗೆ ಸೇರಿದ ಖಾಲಿ ಜಾಗದಲ್ಲಿತಾತ್ಕಾಲಿಕವಾಗಿ ನಾಲ್ಕು ಚಕ್ರದ ವಾಹನಗಳನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು.

ಅಶೋಕ ರಸ್ತೆಯ ಮೆಗಾ ಟವರ್ಸ್‌ನಿಂದ ಬಿ.ಎನ್‌.ಆರ್‌ ಕಾಂಪ್ಲೆಕÕ…ವರೆಗೆ ಭಾನುವಾರ, ಮಂಗಳವಾರ,ಗುರುವಾರ ರಸ್ತೆಯ ಎಡಬದಿಯಲ್ಲಿ ದ್ವಿಚಕ್ರವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿದರೆ,ಸೋಮವಾರ, ಬುಧವಾರ ಹಾಗೂ ಶನಿವಾರದಂದುರಸ್ತೆಯ ಬಲಭಾಗದಲ್ಲಿ ದ್ವಿಚಕ್ರವಾಹನಗಳ ನಿಲುಗಡೆಗೆಅವಕಾಶ ಕಲ್ಪಿಸಲಾಗಿದ್ದು, ಬಿ.ಎನ್‌.ಆರ್‌ ಕಾಂಪ್ಲೆಕÕ…ನಿಂದ ಎಸ್‌.ಎಂ ಟವರ್ಸ್‌ವರೆಗೆ ರಸ್ತೆಯ ಎರಡೂಬದಿಗಳಲ್ಲಿ ಪೂರ್ಣವಾಗಿ ಎಲ್ಲಾ ರೀತಿಯ ವಾಹನಸಂಚಾರ ನಿಷೇಧಿಸಲಾಗಿತ್ತು. ಜೇನು ಸೊಸೈಟಿಕಟ್ಟಡದಿಂದ ಕುಶಾಲನಗರಕ್ಕೆ ಹೋಗುವ ರಸ್ತೆಯಲ್ಲಿಮಂಜ್ರಾಬಾದ್‌ ಕ್ಲಬ್‌ ಕ್ರಾಸ್‌ವರೆಗೆ ರಸ್ತೆಯಬಲಬದಿಯಲ್ಲಿ ಚತುತ್ಛಕ್ರ ವಾಹನಗಳ ನಿಲುಗಡೆಗೆಅವಕಾಶ ಕಲ್ಪಿಸಲಾದರೆ ಎಡಭಾಗದಲ್ಲಿ ಎಲ್ಲಾ ರೀತಿಯವಾಹನ ಸಂಚಾರ ನಿಷೇಧಿಸಲಾಗಿತ್ತು.

ಎಸ್‌.ಎಂ ಟವರ್ಸ್‌ನ ವೃತ್ತದಿಂದ ಕಾಸ್ಮೋಪಾಲಿಟನ್‌ ಕ್ಲಬ್‌ವರೆಗೆ ರಸ್ತೆಯ ಎಡಬದಿಯಲ್ಲಿನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅವಕಾಶಕಲ್ಪಿಸಲಾಗಿದ್ದು, ಬಲಭಾಗದಲ್ಲಿ ಸಂಪೂರ್ಣವಾಗಿ ಎಲ್ಲಾ ರೀತಿಯ ವಾಹನ ಸಂಚಾರ ನಿಷೇದಿಸಲಾಗಿತ್ತು.ಕುಶಾಲನಗರ ರಸ್ತೆಯಲ್ಲಿರುವ ಓಂ ಶಕ್ತಿ ಬಾಳೆಹಣ್ಣುಅಂಗಡಿಯಿಂದ ಬಿ.ಎಂ ರಸ್ತೆ ರಾಷ್ಟ್ರೀಯ ಹೆ¨ªಾರಿಸಂಪರ್ಕಿಸುವ ರಸ್ತೆಯ ರಾಜಲಕ್ಷ್ಮೀ ಟ್ರೇಡಸ್‌ìನವರೆಗೆ ರಸ್ತೆಯ ಪೂರ್ವಭಾಗದಲ್ಲಿ ದ್ವಿಚಕ್ರ ವಾಹನನಿಲುಗಡೆ, ಎಸ್‌ಎಂ ಟವರ್ಸ್‌ ನಿಂದ ಹಳೇ ಬಸ್‌ನಿಲ್ದಾಣದ ಪುರಸಭೆ ನಿರ್ಮಾಣ ಹಂತದಲ್ಲಿರುವಕಟ್ಟಡದ ಪಕ್ಕದ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ರೀತಿಯ ವಾಹನಗಳ ಪಾರ್ಕಿಂಗ್‌ ನಿಷೇಧಿಸಲಾಗಿತ್ತು.

Advertisement

ಆಜಾದ್‌ ರಸ್ತೆಯ ಭುವನೇಶ್ವರಿ ವೃತ್ತದಿಂದ ಬಿ.ಎಂರಸ್ತೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಯಪೂರ್ವ ಭಾಗದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆಅವಕಾಶ ಕಲ್ಪಿಸಲು ಆದೇಶದಲ್ಲಿ ಡೀಸಿ ತಿಳಿಸಿದ್ದರು.ಮೆಗಾ ಟವರ್ಸ್‌ನಿಂದ ಶಾಪ್‌ ಸಿದ್ದೇಗೌಡ ಶಾಲೆಮುಖಾಂತರ ರಾಷ್ಟ್ರೀಯ ಹೆದ್ದಾರೆ ಸಂಪರ್ಕಿಸುವರಸ್ತೆಯ ಪೂರ್ವ ಭಾಗದಲ್ಲಿ ನಾಲ್ಕು ಚಕ್ರದ ವಾಹನನಿಲುಗಡೆಗೆ ಅವಕಾಶ ಕಲ್ಪಿಸಲಾಗಿದ್ದು, ಇದನ್ನು ಗೌರಿಗಣೇಶ ಹಬ್ಬದ ನಂತರ ಅನುಷ್ಠಾನಕ್ಕೆತರಲಾಗುತ್ತದೆಂದು ಹೇಳಲಾಗಿತ್ತು. ಇದೀಗ ಗೌರಿಗಣೇಶ ಹಬ್ಬ ಮುಗಿದು ಹಲವು ದಿನ ಕಳೆದರೂ ಸಹ ಜಿಲ್ಲಾಧಿಕಾರಿಗಳ ಆದೇಶವನ್ನು ಅನುಷ್ಠಾನಗೊಳಿಸಲುಪುರಸಭೆ ಹಾಗೂ ಪೋಲಿಸ್‌ ಇಲಾಖೆ ಮುಂದಾಗದಕಾರಣ ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.2 ವಾರಗಳ ಹಿಂದೆ ಜಿಲ್ಲಾಧಿಕಾರಿಗಳು ಹೊರಡಿಸಿದ್ದವೀಕೆಂಡ್‌ ಕರ್ಫ್ಯೂ ಆದೇಶವನ್ನು ಅನುಷ್ಠಾನಗೊಳಿಸಲುತಾಲೂಕು ಆಡಳಿತ ವಿಫ‌ಲವಾಗಿತ್ತು. ಈ ಹಿನ್ನೆಲೆಯಲ್ಲಿತಾಲೂಕು ಆಡಳಿತ ಕೂಡಲೆ ಎಚ್ಚೆತ್ತು ಜಿಲ್ಲಾಧಿಕಾರಿಗಳ ಪಾಲನೆ ಮಾಡಲುಮುಂದಾಗಬೇಕಾಗಿದೆ ಎಂದು ಸಾರ್ವಜನಿಕರ ಒತ್ತಾಯವಾಗಿದೆ.

ಸುಧೀರ್‌ ಎಸ್‌.ಎಲ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next