Advertisement

ಪಟ್ಟಣದಲ್ಲಿ ಶೀಘ್ರ ಟ್ರಾಫಿಕ್‌ ಪೊಲೀಸ್‌ ಠಾಣೆ

09:09 PM Jul 15, 2019 | Team Udayavani |

ಕೊಳ್ಳೇಗಾಲ: ಜಿಲ್ಲೆಗೆ ನೂತನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ನೇಮಕಗೊಂಡ ಅಧಿಕಾರ ಸ್ವೀಕರಿಸಿದ್ದು, ಬೇರೆಡೆಗೆ ವರ್ಗಾವಣೆ ಆಗುವುದರ ಒಳಗಾಗಿ ಪಟ್ಟಣ ಠಾಣೆಗೆ ಟ್ರಾಫಿಕ್‌ ಪೊಲೀಸ್‌ ಠಾಣೆಯೊಂದನ್ನು ಆರಂಭಿಸಿ ತೆರಳುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ. ಆನಂದ್‌ಕುಮಾರ್‌ ಹೇಳಿದರು.

Advertisement

ನೂತನ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಪಟ್ಟಣ ಠಾಣೆಗೆ ದಿಢೀರ್‌ ಭೇಟಿ ನೀಡಿದ ಅವರು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಂಚಾರಿ ಪೊಲೀಸ್‌ ಠಾಣೆ ತೆರೆದು ಪಟ್ಟಣ ಠಾಣೆಯ ಸುಗಮ ಸಂಚಾರಕ್ಕೆ ಸಂಪೂರ್ಣ ಅವಕಾಶ ಕಲ್ಪಿಸಿಕೊಡುವ ವಿಶ್ವಾಸ ವ್ಯಕ್ತಪಡಿಸಿದರು.

ಗಾಂಜಾ ಬೆಳೆಯುವವರ ವಿರುದ್ಧ ಕ್ರಮ: ಈಗಾಗಲೇ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿ ಸಾಕಷ್ಟು ಅನುಭವ ಹೊಂದಿದ್ದು, ಹನೂರು ತಾಲೂಕಿನ ರಾಮಾಪುರ ಮತ್ತು ಇನ್ನಿತರ ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮ ಗಾಂಜಾ ಬೆಳೆಯುವುದು ಮತ್ತು ಮಾರಾಟ ಮಾಡುವುದು ಹೆಚ್ಚಾಗಿದೆ ಎಂದು ಮಾಹಿತಿ ಬಂದಿದ್ದು, ಕೂಡಲೇ ಬೆಳೆಯಲು ಮತ್ತು ಮಾರಾಟ ಮಾಡುವವರ ವಿರು ದ್ಧ ಕಠಿಣ ಕ್ರಮಕೈಗೊಂಡು, ಅಕ್ರಮ ಗಾಂಜಾಕ್ಕೆ ಕಡಿವಾಣ ಹಾಕುವುದಾಗಿ ಹೇಳಿದರು.

ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ: ಈಗಾಗಲೇ ಟ್ರಾಫಿಕ್‌ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಅದರಲ್ಲಿ 11 ಜನರ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ. ಈ ರೀತಿಯ ಅಪಘಾತಗಳನ್ನು ತಡೆಯುವ ಸಲುವಾಗಿ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕಡ್ಡಾಯ ಹೆಲ್ಮೆಟ್‌ ಮಾಡಿದ್ದು, ಪ್ರತಿಯೊಬ್ಬ ಬೈಕ್‌ ಸವಾರರು ಕಡ್ಡಾಯವಾಗಿ ಬಳಸಿ ಪೊಲೀಸ್‌ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಠಿಣ ಕಾನೂನು ಕ್ರಮ: ಮಾನವೀಯತೆಯ ಮೇರೆಗೆ ಕೆಲವರಿಗೆ ತುರ್ತಾಗಿ ತೆರಳುವವರಿಗೆ ಮತ್ತು ಅನಾರೋಗ್ಯದಿಂದ ಬಳಲುವ ಸವಾರರಿಗೆ ತಾತ್ಕಾಲಿಕವಾಗಿ ಹೆಲ್ಮೆಟ್‌ ಧರಿಸದ ಚಾಲಕರಿಗೆ ಅವಕಾಶ ನೀಡಲಾಗುವುದು. ಮೋಟಾರ್‌ ಚಾಲಕರು ಇದರ ದುರ್ಬಳಕೆ ಮಾಡಿಕೊಂಡ ಪಕ್ಷದಲ್ಲಿ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ವ್ಹೀಲಿಂಗ್‌ ಬ್ರೇಕ್‌: ಪಟ್ಟಣದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಬೈಕ್‌ ಮತ್ತು ಸೈಕಲ್‌ಗ‌ಳ ಮೂಲಕ ವ್ಹೀಲಿಂಗ್‌ ಮಾಡುವುದು. ತ್ರಿಬಲ್‌ ರೈಡಿಂಗ್‌ ಮಾಡುವುದು ಮತ್ತು ಬೀದಿ ಕಾಮಣ್ಣರ ಕಾಟ ಹೆಚ್ಚಾಗಿದೆ ಎಂದು ಸಾರ್ವಜನಿಕ ವಲಯದಿಂದ ಮಾಹಿತಿ ಬಂದಿದ್ದು, ಅಂತಹವರ ಮೇಲೆ ಪೊಲೀಸ್‌ ಇಲಾಖೆ ಕಣಿ¾ಡಲಾಗಿದ್ದು, ಅಂತಹವರ ಮೇಲೆ ಕೂಡಲೇ ತಪಾಸಣೆ ಮಾಡಿ ದೂರು ದಾಖಲಿಸಿ ಕ್ರಮಕೈಗೊಳ್ಳುವ ಮೂಲಕ ಈ ರೀತಿಯ ಚಾಲನೆಯನ್ನು ನಿಲುಗಡೆ ಮಾಡಲಾಗುವುದು ಎಂದರು.

ಎನ್‌.ಎಚ್‌.ಡಿ.ರಸ್ತೆ ಪೂರ್ಣಗೊಳಿಸಲು ಸೂಚನೆ: ಈಗಾಗಲೇ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿ ಚುರುಕಾಗದೆ ಅವ್ಯವಸ್ಥೆಯಿಂದ ಕೂಡಿರುವುದರಿಂದ ರಸ್ತೆಗಳಲ್ಲಿ ಹಲವಾರು ರೀತಿಯ ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ಅಪಘಾತಗಳನ್ನು ನಿಯಂತ್ರಣ ಮಾಡುವ ಸಲುವಾಗಿ ಸಂಬಂಧಿಸಿದ ಎಂಜಿನಿಯರ್‌ ಅವರನ್ನು ನನ್ನ ಭೇಟಿ ಮಾಡುವಂತೆ ಸ್ಥಳೀಯ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದು,

ಎಂಜಿನಿಯರ್‌ ಭೇಟಿಯಾದ ಕೂಡಲೇ ಅಪಘಾತ ತಡೆಯಲು ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಸಲಹೆ ನೀಡಲಾಗುವುದು. ಇದಕ್ಕೆ ಬಗ್ಗದ ಸಂದರ್ಭದಲ್ಲಿ ಅಪಘಾತಗಳ ಪ್ರಕರಣಗಳಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಒಳಪಡಿಸಿ ಮೃತರ ಕುಟುಂಬಗಳಿಗೆ ಸೂಕ್ತ ದೊರಕಿಸಲಾಗುವುದು ಎಂದರು.

ಅಮಾನವೀಯ ಘಟನೆ: ಗುಂಡ್ಲುಪೇಟೆಯಲ್ಲಿ ಇತ್ತೀಚಿಗೆ ದಲಿತ ಯುವಕನ ಮೇಲೆ ಬೆತ್ತಲೆ ಮೆರವಣಿಗೆ ಮಾಡಿರುವುದು ಅಮಾನವೀಯತೆ ಉಂಟಾಗಿದ್ದು, ಪ್ರಕರಣ ಡಿವೈಎಸ್ಪಿ ಹಂತದಲ್ಲಿ ನಡೆಯುತ್ತಿದ್ದು, ಪ್ರಕರಣವನ್ನು ಪರಿಶೀಲಿಸಿ ಬೆತ್ತಲೆ ಮೆರವಣಿಗೆಗೆ ಒಳಗಾದ ವ್ಯಕ್ತಿಗೆ ನ್ಯಾಯ ದೊರಕಿಸಿಕೊಡುವ ವಿಶ್ವಾಸ ವ್ಯಕ್ತಪಡಿಸಿದರು.

ಐಎಂಎ ಜುವೆಲ್ಲರಿ: ಬೆಂಗಳೂರಿನ ಐಎಂಎ ಜುವೆಲ್ಲರಿನಲ್ಲಿ ಹಣ ನಿಯೋಜನೆ ಮಾಡಿರುವ ಬಗ್ಗೆ ಜಿಲ್ಲೆಯಲ್ಲಿ ಯಾರೂ ಸಹ ದೂರುಗಳನ್ನು ನೀಡಲು ಮುಂದೆ ಬಂದಿಲ್ಲ. ದೂರುಗಳು ಬಂದ ಪಕ್ಷದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಹೇಳಿದರು. ಸರ್ಕಲ್‌ ಇನ್ಸ್‌ಪೆಕ್ಟರ್‌ ಕೆ.ಶ್ರೀಕಾಂತ್‌, ಪಟ್ಟಣ ಠಾಣೆ ಎಸ್‌ ಐ ರಾಜೇಂದ್ರ, ಗ್ರಾಮಾಂತರ ಪೊಲೀಸ್‌ ಠಾಣೆಯ ಎಸ್‌ ಐ ವಿ.ಸಿ.ಅಶೋಕ್‌ ಹಾಗೂ ಸಿಬ್ಬಂದಿವರ್ಗ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next