Advertisement

ಟ್ರಾಫಿಕ್‌ ಪೊಲೀಸ್‌ ಆದ ಶಾಲಾ ವಿದ್ಯಾರ್ಥಿಗಳು!

07:13 PM Dec 13, 2021 | Team Udayavani |

ಕಾರ್ಕಳ: ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌, ರಾಜ್ಯ ಸಂಸ್ಥೆ ಕರ್ನಾಟಕ, ಜಿಲ್ಲಾ ಸಂಸ್ಥೆ ಉಡುಪಿ, ಸ್ಥಳೀಯ ಸಂಸ್ಥೆ ಕಾರ್ಕಳ ಇವುಗ ಳ ವತಿಯಿಂದ ಕಾರ್ಕಳ ತಾಲೂಕಿನ ವಿವಿಧ ಶಾಲೆಯ ಸ್ಕೌಟ್ಸ್‌ ಗೈಡ್ಸ್‌ ವಿದ್ಯಾರ್ಥಿಗಳಿಗೆ ಟ್ರಾಫಿಕ್‌ ಪೊಲೀಸ್‌ ಸಿಗ್ನಲ್‌ಗ‌ಳ ಅರಿವು ಕಾರ್ಯಕ್ರಮ ನಗರದಲ್ಲಿ ನಡೆಯಿತು.

Advertisement

ರಸ್ತೆ ಸಂಚಾರ ನಿಯಮ, ವಾಹನಗಳು ದಟ್ಟಣೆಯಾಗದಂತೆ ಹೇಗೆ ಟ್ರಾಫಿಕ್‌ ಸಿಗ್ನಲ್‌ಗ‌ಳನ್ನು ನಿಭಾಯಿಸು ವುದು ಎನ್ನುವುದರ ಅರಿವು ನೀಡುವು ದರ ಮೂಲಕ ವಿದ್ಯಾರ್ಥಿಗಳೇ ಕರ್ತವ್ಯ ಸಾಂದರ್ಭಿಕವಾಗಿ ಹೇಗೆ ನಿರ್ವಹಿಸ ಬಹುದು ಎಂಬುವುದನ್ನು ನಗರ ಠಾಣೆಯ ಕ್ರೈಂ ವಿಭಾಗದ ಅಧಿಕಾರಿ ದಾಮೋದರ, ಹೆಡ್‌ ಕಾನ್‌ಸ್ಟೆಬಲ್‌ ರವೀಂದ್ರ ಮಕ್ಕಳಿಗೆ ತಿಳಿಸಿಕೊಟ್ಟರು.

ಭುವನೇಂದ್ರ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವೃಂದಾ ಶೆಣೈ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಎಸ್‌ ವಿಟಿ
ಶಾಲಾ ಗೈಡ್‌ ಶಿಕ್ಷಕಿ ಪ್ರಭಾ, ಭುವನೇಂದ್ರ ಸಂಸ್ಥೆಯ ಪ್ರಾಥಮಿಕ ಶಾಲಾ ಗೈಡ್‌ ಶಿಕ್ಷಕಿ ಸೀಮಾ ಕಾಮತ್‌, ಜಿಲ್ಲಾ ಗೈಡ್‌ ಕಮಿಷನರ್‌ ಜ್ಯೋತಿ ಜೆ. ಪೈ, ಕಾರ್ಕಳ ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಜಗದೀಶ್‌ ಹೆಗ್ಡೆ, ಉಪಸ್ಥಿತರಿದ್ದರು.

ಇದನ್ನೂ ಓದಿ:ಆದಿವಾಸಿ ಕ್ರೀಡಾಕೂಟವನ್ನು ಪ್ರೋತ್ಸಹಿಸಿ: ಮಧು ಕುಮಾರ್

ಕಾರ್ಕಳ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್‌ ಜಿ. ನಾಯಕ್‌, ಉಡುಪಿ ಜಿಲ್ಲಾ. ಗೈಡ್‌ ತರಬೇತಿ ಕಮಿಷನರ್‌ ಸಾವಿತ್ರಿ ಮನೋಹರ್‌, ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಂ.ಕೆ. ವಿಜಯಕುಮಾರ್‌ ಶುಭ ಹಾರೈಸಿದರು. ಸ್ಥಳಿಯ ಸಂಸ್ಥೆ ಕಾರ್ಯ ದರ್ಶಿ ಭುವನೇಂದ್ರ, ಪ್ರೌಢಶಾಲಾ ಸ್ಕೌಟ್‌ ಶಿಕ್ಷಕ ಗಣೇಶ್‌ ಜಾಲೂÕರು ನಿರೂಪಿಸಿದರು. ಭುವನೇಂದ್ರ ಪ್ರೌಢ
ಶಾಲಾ ಗೈಡ್‌ ಶಿಕ್ಷಕಿ ಇಂದಿರಾ ಪಿ. ನಾಯಕ್‌ ವಂದಿಸಿದರು. ಸ್ಕೌಟ್ಸ್‌ ಗೈಡ್ಸ್‌ ವಿದ್ಯಾರ್ಥಿಗಳು ಕೆಲವು ಹೊತ್ತು ಸಿಗ್ನಲ್‌ ಪೊಲೀಸ್‌ ಆಗುವ ಅನುಭವ ಪಡೆದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next