Advertisement
ಇದು ಸಾಧ್ಯವಾಗಿದ್ದು ಬಿ.ಸಿ.ರೋಡಿನ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಮಾಡಿದ ಮಾದರಿ ಕಾರ್ಯದಿಂದಾಗಿ.
Related Articles
Advertisement
ಹೆದ್ದಾರಿ ಹೊಂಡಗಳಿಂದಾಗ ಬಿಸಿರೋಡಿನಿಂದ ಮಾಣಿವರೆಗಿನ ರಸ್ತೆಯಲ್ಲಿ ನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ. ಇದೇ ಪರಿಸ್ಥಿತಿ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯ ಎದುರುಗಡೆಯೂ ಪ್ರತೀನಿತ್ಯ ಎಂಬಂತೆ ಅಗುತ್ತಿತ್ತು.
ಟ್ರಾಫಿಕ್ ಪೋಲೀಸ್ ಠಾಣೆಯ ಮುಂಭಾಗದಲ್ಲಿ ಹೊಂಡಗುಂಡಿಗಳಿಂದ ಕೂಡಿದ್ದು ದ್ವಿಚಕ್ರವಾಹನ ಸವಾರರು ಗುಂಡಿಗೆ ಬಿದ್ದು ಗಾಯಗೊಂಡ ಘಟನೆಗಳೂ ಸಹ ನಡೆದಿವೆ.
ಜೊತೆಗೆ ಈ ಹೊಂಡಗಳ ಸಮಸ್ಯೆಯಿಂದ ಇಲ್ಲಿ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗುತ್ತವೆ.
ಈ ದಿನನಿತ್ಯದ ಸಮಸ್ಯೆಯ ಬಗ್ಗೆ ಅರಿತುಕೊಂಡ ಟ್ರಾಫಿಕ್ ಪೋಲೀಸರು ಇಂದು ಸ್ವತಃ ಕೈಯಲ್ಲಿ ಹಾರೆ, ಬುಟ್ಟಿ ಹಿಡಿದು ಗುಂಡಿ ಮುಚ್ಚುವ ಕೆಲಸ ಮಾಡಿ ಇಲಾಖೆಯನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.
ಚರಂಡಿ ವ್ಯವಸ್ಥೆ ಇಲ್ಲ
ಚತುಷ್ಪತ ಕಾಮಗಾರಿಯ ಹಿನ್ನೆಲೆಯಲ್ಲಿ ರಸ್ತೆಯನ್ನು ಅಲ್ಲಲ್ಲಿ ಕಡಿದು ಅರ್ಧಕ್ಕೆ ನಿಲ್ಲಿಸಿದ ಹೋದ ಕಂಪೆನಿಯಿಂದ ಕಳೆದ ಎರಡು ವರ್ಷಗಳಿಂದ ವಾಹನ ಸವಾರರು ನರಕ ಯಾತನೆ ಅನುಭವಿಸುವಂತಾಗಿದೆ.
ರಸ್ತೆಯ ಬದಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಹೆದ್ದಾರಿ ಮಧ್ಯೆಯೇ ಹರಿದು ಹೋಗುತ್ತಿದೆ ಮತ್ತು ಇವುಗಳಿಂದಾಗಿ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಉಂಟಾಗಿದ್ದು ವಾಹನ ಸವಾರರಿಗೆ ಕಂಟಕಪ್ರಾಯವಾಗಿವೆ.