Advertisement

ಸಂಚಾರ ಪೊಲೀಸರಿಂದ ದೌರ್ಜನ್ಯ

12:01 PM Aug 21, 2018 | Team Udayavani |

ಬೆಂಗಳೂರು: ಹಿಂಬದಿ ಸವಾರನೊಬ್ಬ ಹೆಲ್ಮೆಟ್‌ ಧರಿಸಿಲ್ಲ ಎಂಬ ಕಾರಣಕ್ಕೆ ಸಂಚಾರಿ ಪೊಲೀಸ್‌ ಸಿಬ್ಬಂದಿಯೊಬ್ಬರು ಆತನ ಶರ್ಟ್‌ ಕಾಲರ್‌ ಹಿಡಿದು ನಡು ರಸ್ತೆಯಲ್ಲೇ ಎಳೆದಾಡಿರುವ ಘಟನೆ ಜೆ.ಪಿ.ನಗರದಲ್ಲಿ ನಡೆದಿದೆ.

Advertisement

ಜೆ.ಪಿ.ನಗರದ 14ನೇ ಬ್ಲಾಕ್‌ನಲ್ಲಿ ಇಬ್ಬರು ಯುವಕರು  ಬೈಕ್‌ ಸವಾರಿ ಮಾಡುತ್ತಿದ್ದು, ಹಿಂಬದಿ ಸವಾರ ಹೆಲ್ಮೆಟ್‌ ಧರಿಸಿರಲಿಲ್ಲ. ಇದನ್ನು ಗಮನಿಸಿದ ಇಬ್ಬರು ಸಂಚಾರ ಪೊಲೀಸರು ದ್ವಿಚಕ್ರ ವಾಹನವನ್ನು ಅಡ್ಡ ಹಾಕಿ ನಿಲ್ಲಿಸಿದ್ದರೆ. ಬಳಿಕ ಹೆಲ್ಮೆಟ್‌ ಧರಿಸದೇ ಇರುವುದಕ್ಕೆ  ದಂಡ ವಿಧಿಸುವ ಬದಲಿಗೆ ಹಿಂಬದಿ ಸವಾರನ ಕೊರಳ ಪಟ್ಟಿ ಹಿಡಿದು ನಡು ರಸ್ತೆಯಲ್ಲಿ ಎಳೆದಾಡಿದ್ದಾರೆ. ಇದನ್ನು ಪ್ರಶ್ನಿಸಿದ ಮತ್ತೂಬ್ಬನ ಯುವಕ ಮೇಲೂ  ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

ಇದನ್ನು ಕಂಡ ಕೆಲ ಸ್ಥಳೀಯರು ಸಂಚಾರ ಪೊಲೀಸ್‌ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. “ಸಂಚಾರ ನಿಯಮ ಉಲ್ಲಂ ಸಿದರೆ ದಂಡ ವಿಧಿಸಲು ಮಾತ್ರ ನಿಮಗೆ ಅಧಿಕಾರವಿದೆ. ಸವಾರನ ಮೇಲೆ ಹಲ್ಲೆ ನಡೆಸುವಂತಿಲ್ಲ,’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್‌ ಸಿಬ್ಬಂದಿಯ ದೌರ್ಜನ್ಯದ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಈ ವಿಡಿಯೋವನ್ನು ಬೆಂಗಳೂರು ಸಂಚಾರ ಪೊಲೀಸರ ಫೇಸ್‌ಬುಕ್‌ ಖಾತೆಗೆ ಟ್ಯಾಗ್‌ ಮಾಡಿ ಆ ಸಿಬ್ಬಂದಿಯನ್ನು ಅಮಾನತು ಮಾಡುವಂತೆ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next