Advertisement

ವಾಯುನೆಲೆ ಹಾದಿಯಲ್ಲಿ ಸಂಚಾರ ದಟ್ಟಣೆ

06:30 AM Feb 25, 2019 | Team Udayavani |

ಬೆಂಗಳೂರು: ಯಲಹಂಕ ವಾಯುನೆಲೆ ಆವರಣದಲ್ಲಿ ವಿಮಾನಗಳ ಮೇಳ ನಡೆದರೆ, ವಾಯುನೆಲೆ ಸೇರುವ ರಾಷ್ಟ್ರೀಯ ಹೆದ್ದಾರಿ-17ರ ಉದ್ದಕ್ಕೂ ವಾಹನಗಳ ಜಾತ್ರೆ ನಡೆದಿತ್ತು!

Advertisement

ಇದು “ಏರೋ ಇಂಡಿಯಾ-2019’ರ ಕೊನೆಯ ದಿನದ ಎಫೆಕ್ಟ್. ಸೂರ್ಯಕಿರಣ ವಿಮಾನ ಪತನ, ನೂರಾರು ಕಾರುಗಳಿಗೆ ಬೆಂಕಿಯಂತಹ ಅಹಿತಕರ ಘಟನೆಗಳ ನಡುವೆಯೂ ಸಹಸ್ರಾರು ಸಂಖ್ಯೆಯಲ್ಲಿ ಜನ ಹರಿದುಬಂದರು. ಎರಡು ವರ್ಷಕ್ಕೊಮ್ಮೆ ನಡೆಯುವ ಈ ವೈಮಾನಿಕ ಪ್ರದರ್ಶನಕ್ಕೆ ಸಾಕ್ಷಿಯಾದರು. ಕೊನೆಯ ದಿನ ಅದರಲ್ಲೂ ರಜೆ ದಿನವಾಗಿದ್ದರಿಂದ ಈ ಉತ್ಸಾಹ ಇಮ್ಮಡಿಗೊಂಡಿತ್ತು.

ಬೆಳಿಗ್ಗೆ 7ರಿಂದ ಸಂಜೆ 6ರವರೆಗೂ ಕಣ್ಣು ಹಾಯಿಸಿದೆಡೆ ಜನಸಾಗರ ಇತ್ತು. ಪರಿಣಾಮ ಸಂಚಾರದಟ್ಟಣೆ ಉಂಟಾಗಿತ್ತು. ಹೆಜ್ಜೆ-ಹೆಜ್ಜೆಗೂ ವಾಹನಗಳು ಕುಂಟುತ್ತಾ ಸಾಗುತ್ತಿದ್ದವು. ಪ್ರವೇಶದಿಂದ ವಂಚಿತರಾದವರು ಮರಗಳು, ಮನೆ-ಕಟ್ಟಡಗಳ ಮಾಳಿಗೆಗಳನ್ನು ಏರಿ ಲೋಹದ ಹಕ್ಕಿಗಳ ಹಾರಾಟವನ್ನು ಕಣ್ತುಂಬಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next