ಕಾಸರಗೋಡು: ನಗರದ ರಸ್ತೆಗಳಲ್ಲಿ ಅಲ್ಲಲ್ಲಿ ಕಂಡು ಬರುವ “ಯು’ ತಿರುವು ಹೊರತುಪಡಿಸಿ ಒಂದು ಕಿಲೋ ಮೀಟರ್ ಅಂತರದಲ್ಲಿ ಮಾತ್ರವೇ “ಯು’ ತಿರುವು ಗಳನ್ನು ಕೈಗೊಳ್ಳಬೇಕೆಂದೂ, ಕಾಸರಗೋಡು ನಗರದಲ್ಲಿ ಟ್ರಾಫಿಕ್ ಮಾಸ್ಟರ್ ಪ್ಲಾನ್ ಸಿದ್ಧಪಡಿಸಬೇಕೆಂದೂ ತಾಲೂಕು ಅಭಿ ವೃದ್ಧಿ ಸಮಿತಿ ನಿರ್ದೇಶಿಸಿದೆ.
ನಗರಸಭೆ ವ್ಯಾಪ್ತಿಯ ವ್ಯಾಪಾರ ಸಂಸ್ಥೆಗಳ ಪಾರ್ಕಿಂಗ್ ಸ್ಥಳವನ್ನು ವ್ಯಾಪಾರ ಅಗತ್ಯಕ್ಕಾಗಿ ಉಪ ಯೋಗಿಸುವುದರಿಂದಾಗಿ ವಾಹನ ಗಳನ್ನು ನಿಲ್ಲಿಸಲು, ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿರುವುದಾಗಿ ತಾಲೂಕು ಸಮಿತಿ ಸಭೆ ಆತಂಕ ವ್ಯಕ್ತಪಡಿಸಿದೆ.
ಆಟೋ ರಿಕ್ಷಾಗಳ ಅನಧಿಕೃತ ಪಾರ್ಕಿಂಗ್ ಹೊರತುಪಡಿಸುವುದಕ್ಕೆ ನಗರ ದಲ್ಲಿ ಸಂಚರಿಸುವ ಆಟೋ ರಿಕ್ಷಾಗಳಿಗೆ ಪ್ರತ್ಯೇಕ ನಂಬ್ರ ನೀಡಿ ಅದನ್ನು ರಿಕ್ಷಾದಲ್ಲಿ ಪ್ರದರ್ಶಿಸುವುದಕ್ಕೆ ಕ್ರಮ ಸ್ವೀಕರಿಸಬೇಕೆಂದು ನಗರಸಭೆಗೆ ಸಭೆಯಲ್ಲಿ ಆಗ್ರಹಿಸಿದೆ. ಹಳೆಯ ಪ್ರಸ್ ಕ್ಲಬ್ ಬಳಿ ಟ್ರಾಫಿಕ್ ಪೊಲೀಸರಿಗೆ ಟ್ರಾಫಿಕ್ ಕೇಂದ್ರ ಸ್ಥಾಪಿಸಬೇಕೆಂದು ಆಗ್ರಹಿಸಲಾಯಿತು. ತಾಲೂಕು ವ್ಯಾಪ್ತಿಯಲ್ಲಿ ಕಳೆದ ವರ್ಷ 180 ರಷ್ಟು ಮಂದಿಗೆ ಹಾವು ಕಚ್ಚಿರುವು ದಾಗಿಯೂ, ಈ ಹಿನ್ನೆಲೆಯಲ್ಲಿ ಸೆರೆ ಹಿಡಿದ ಹಾವುಗಳನ್ನು ಜನವಾಸ ಕೇಂದ್ರಗಳಲ್ಲಿ ಬಿಡಬಾರದೆಂದು ಅರಣ್ಯ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಆಗ್ರಹಿ ಸಿದೆ. ನಗರಸಭೆಯ ವ್ಯಾಪ್ತಿಯಲ್ಲಿ ಸಿನಿಮಾ ಪೋಸ್ಟರ್‌ಗಳನ್ನು ಪ್ರದರ್ಶಿಸುವ ಕ್ರಮ ಹೊರತುಪಡಿಸಬೇಕೆಂದು ನಗರ ಸಭೆಯ ಮುದ್ರೆಯಿರುವ ಪೋಸ್ಟರ್‌ಗಳನ್ನು ಮಾತ್ರವೇ ನಿಶ್ಚಿತ ಸ್ಥಳದಲ್ಲಿ ಪ್ರದರ್ಶಿಸಬೇಕೆಂದು ಸಭೆ ನಿರ್ದೇಶಿಸಿದೆ. ಆಹಾರ ಸಾಮಗ್ರಿಗಳಿಗೆ ತೋಚಿದಂತೆ ಅಪರಿಮಿತ ಬೆಲೆ ವಸೂಲು ಮಾಡುವ ಹೊಟೇಲ್‌ಗಳ ವಿರುದ್ಧವೂ, ದರ ಪಟ್ಟಿ ಪ್ರದರ್ಶಿಸಲು ಹಿಂದೇಟು ಹಾಕುವವರ ವಿರುದ್ಧವೂ ಕಠಿಣ ಕ್ರಮ ಸ್ವೀಕರಿಸಬೇಕೆಂದು, ಈ ರೀತಿಯ ಹೊಟೇಲ್‌ಗಳಿಗೆ ಪದೆ ಪದೆ ದಾಳಿ ನಡೆಸಿ ಕಾನೂನು ಪ್ರಕಾರವಾಗಿ ಕಾರ್ಯಾಚರಿಸುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
ನೀರ್ಚಾಲು – ಸಾಯಿ ಮಂದಿರ – ಮುಗು ರಸ್ತೆಯನ್ನು ಈ ಆರ್ಥಿಕ ವರ್ಷದ ಬಜೆಟ್‌ನಲ್ಲಿ 1,45,60,000 ರೂ. ಮೀಸಲಿಡಲಾಗಿದೆಯೆಂದು ಇನ್ನಷ್ಟು ಮೊತ್ತ ಈ ರಸ್ತೆಗೆ ಮಂಜೂರು ಮಾಡುವುದಕ್ಕಾಗಿ ಪ್ರೊಫೋಸಲ್ ನೀಡಲಾಗಿದೆಯೆಂದು ಶಾಸಕ ಎನ್.ಎ.ನೆಲ್ಲಿಕುನ್ನು ಸಭೆಯಲ್ಲಿ ತಿಳಿಸಿದರು. ಪ್ರಸ್ ಕ್ಲಬ್ ಜಂಕ್ಷನ್‌ನಲ್ಲಿ ದಾರಿ ಸೂಚಕ, ರಿಪ್ಲಕ್ಟರ್‌ಗಳನ್ನು ಸ್ಥಾಪಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆಯೆಂದು ಸಭೆಯಲ್ಲಿ ನಗರಸಭಾ ಅಧಿಕಾರಿಗಳು ತಿಳಿಸಿದರು.
ತಾಲೂಕು ಕಾನ್ಫರೆನ್ಸ್ ಸಭಾಂಗಣ ದಲ್ಲಿ ನಡೆದ ಸಭೆಯಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ತಹಶೀಲ್ದಾರ್ ಎ.ವಿ. ರಾಜನ್, ವಾರಿಜಾಕ್ಷನ್, ಇಲಾಖೆಯ ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದರು.
ಜನರಿಗೆ ಸಮಸ್ಯೆ
ಕಾಸರಗೋಡು ಮೀನು ಮಾರು ಕಟ್ಟೆಯ ಕಟ್ಟಡದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ನಡೆಸಿದ ಕಾರಣ ಮಲಿನ ಜಲ ಕಟ್ಟಿ ನಿಲ್ಲುತ್ತಿದ್ದು, ಮೀನು ಮಾರಾಟ ಮಾಡುವವರಿಗೆ, ಗ್ರಾಹಕರಿಗೆ ಸಮಸ್ಯೆ ಉಂಟಾಗುತ್ತಿದೆ. ಮೀನು ಮಾರುಕಟ್ಟೆಯಲ್ಲಿ ಸಾರ್ವಜ ನಿಕ ಸ್ಥಳವನ್ನು ಮಾರಾಟಕ್ಕಾಗಿ ಉಪಯೋಗಿಸುವುದ ರಿಂದ ಜನರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಟ್ಟಿದೆ.