Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 20ರಿಂದ ಲಾರಿಗಳ ಸಂಚಾರ ಬಂದ್‌: ಸೈಪುಲ್ಲ

03:49 PM Jul 13, 2018 | Team Udayavani |

ದಾವಣಗೆರೆ: ಜಿಎಸ್‌ಟಿ ವ್ಯಾಪ್ತಿಗೆ ಡೀಸೆಲ್‌, ಪೆಟ್ರೋಲ್‌ ಸೇರ್ಪಡೆ, ದರ ಇಳಿಕೆ, ಏಕರೂಪ ದರ ನಿಗದಿ, ಥರ್ಡ್‌ ಪಾರ್ಟಿ ವಿಮಾ ಪಾಲಿಸಿ ಮೊತ್ತ ಕಡಿತ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜು. 20ರಿಂದ ದೇಶವ್ಯಾಪಿ ಅನಿರ್ದಿಷ್ಟಾವಧಿ ವಾಣಿಜ್ಯ ವಾಹನಗಳ ಮುಷ್ಕರ ಕೈಗೊಳ್ಳಲಾಗುವುದು ಎಂದು ದಾವಣಗೆರೆ ಜಿಲ್ಲಾ ಲಾರಿ ಮಾಲಿಕರ ಮತ್ತು ಟ್ರಾನ್ಸ್‌ಪೊರ್ಟ್‌ ಏಜೆಂಟರ ಸಂಘದ ಅಧ್ಯಕ್ಷ ಸೈಯದ್‌ ಸೈಪುಲ್ಲಾ ತಿಳಿಸಿದ್ದಾರೆ.

Advertisement

ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ಜು. 14ರಂದು ಶನಿವಾರ ಬೆಳಗ್ಗೆ 10.30ಕ್ಕೆ ರೋಟರಿ ಬಾಲಭವನದಲ್ಲಿ ಸಂಘದ ರಾಜ್ಯ ಅಧ್ಯಕ್ಷ ಜೆ.ಆರ್‌. ಷಣ್ಮುಖಪ್ಪ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ಲಾರಿ, ಬಸ್‌, ಮಿನಿಗೂಡ್ಸ್‌, 3 ಮತ್ತು 4 ಚಕ್ರಗಳ ವಾಹನ, ಟ್ಯಾಕ್ಸಿ ಮಾಲಿಕರು ಸಭೆಯಲ್ಲಿ ಭಾಗವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಪ್ರತಿ ದಿನ ಡೀಸೆಲ್‌ ಬೆಲೆಯಲ್ಲಿ ಏರಿಳಿತದ ಪರಿಣಾಮ ಬಾಡಿಗೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಿಎಸ್‌ಟಿಯಡಿ ಡೀಸೆಲ್‌, ಪೆಟ್ರೋಲ್‌ ಸೇರಿಸಿ, ಪ್ರತಿ 3 ತಿಂಗಳಿಗೊಮ್ಮೆ ದರ ಪರಿಶೀಲನಾ ಪದ್ಧತಿ ಜಾರಿಗೊಳಿಸಬೇಕು.

ದೇಶದ್ಯಾಂತ ಇರುವ 427 ಟೋಲ್‌ಗ‌ಳಲ್ಲಿ 67 ಖಾಸಗಿ ಕಂಪನಿಗಳ, 360 ಸರ್ಕಾರದ ಅಧೀನದಲ್ಲಿವೆ. ವರ್ಷಕ್ಕೆ 427 ಟೋಲ್‌ಗ‌ಳಿಂದ 17 ಸಾವಿರ ಕೋಟಿ ಶುಲ್ಕ ವಸೂಲಾಗುತ್ತದೆ. ನಮ್ಮ ರಾಷ್ಟ್ರೀಯ ಸಂಘದಿಂದಲೇ ವರ್ಷಕ್ಕೆ 20 ಸಾವಿರ ಕೋಟಿ ಟೋಲ್‌ ಶುಲ್ಕ ಪಾವತಿಸುತ್ತೇವೆ. ಬಸ್‌, ಲಾರಿ, ಕಾರು ಎಲ್ಲ ವಾಹನಗಳಿಂದ ಟೋಲ್‌
ಸಂಗ್ರಹ ನಿಲ್ಲಿಸುವ ಮೂಲಕ ಟೋಲ್‌ವುುಕ್ತ ಭಾರತ ಮಾಡಬೇಕು ಎಂಬುದು ಮುಷ್ಕರದ ಪ್ರಮುಖ ಬೇಡಿಕೆ ಎಂದು ತಿಳಿಸಿದರು.

ಥರ್ಡ್‌ ಪಾರ್ಟಿ ವಿಮಾ ಪಾಲಿಸಿ ಆತಿ ಹೆಚ್ಚಾಗಿದೆ. ವಿಮಾ ಮೊತ್ತದ ಹೆಚ್ಚಳಕ್ಕೆ ಕಾರಣ ಕೇಳಿದರೆ ನಷ್ಟದ ಬಗ್ಗೆ ಹೇಳುತ್ತಾರೆ. ವಿಮಾ ಕ್ಷೇತ್ರವೇ ನಷ್ಟದಲ್ಲಿರುವಾಗ ಹೊಸ ಕಂಪನಿಗಳು ಬರುವುದ ನೋಡಿದರೆ ವಿಮಾ
ಕಂಪನಿಗಳ ಲಾಬಿ ಗೊತ್ತಾಗುತ್ತದೆ. ಲಾರಿಗಳಿಗೆ ನೀಡಿರುವಂತೆಯೇ ಪ್ರವಾಸಿ ಬಸ್‌ಗಳಿಗೂ ರಾಷ್ಟ್ರೀಯ ಪರವಾನಿಗೆ ನೀಡಬೇಕು. ಟಿಡಿಎಸ್‌ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

Advertisement

ಪೂರ್ವಭಾವಿ ಆದಾಯ (ಆದಾಯ ತೆರಿಗೆ ನಿಯಮ-44) ಕಾಯ್ದೆ ಪರಿವರ್ತನೆ, ಈ-ವೇ ಬಿಲ್‌ ಸಮಸ್ಯೆ ನಿವಾರಣೆ, ಮುಂಬೈನ ಜವಾಹರ್‌ ಲಾಲ್‌ ನೆಹರು ಪೋರ್ಟ್‌ ಟ್ರಸ್ಟ್‌ ನೂತನವಾಗಿ ಪ್ರಕಟಿಸಿರುವ ನೇರ ಪೋರ್ಟ್‌ ಡೆಲಿವಿರಿ ಪದ್ಧತಿ ರದ್ದು ಮತ್ತು ಬಂದರುಗಳಲ್ಲಿ ಆಗುತ್ತಿರುವ ವಾಹನ ದಟ್ಟಣೆ ಕಡಿಮೆ ಮಾಡುವುದು ಒಳಗೊಂಡಂತೆ
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದೇಶವ್ಯಾಪಿ ಅನಿರ್ದಿಷ್ಟಾವಧಿ ವಾಣಿಜ್ಯ ವಾಹನಗಳ ಮುಷ್ಕರ
ಆರಂಭಿಸಲಾಗುವುದು ಎಂದು ತಿಳಿಸಿದರು. ಸಂಘ ಗೌರವಾಧ್ಯಕ್ಷ ಜಿ. ನಾಗೋಜಿರಾವ್‌, ಉಪಾಧ್ಯಕ್ಷ ಮಹಾಂತೇಶ್‌ ಒಣರೊಟ್ಟಿ, ಖಜಾಂಚಿ ಭೀಮಪ್ಪ, ಸೋಗಿ ಮಹಾಂತೇಶ್‌, ಇಮಾಂ, ಸ್ವಾಮಿ, ಸಿದ್ದೇಶ್‌, ಮಹಾಂತೇಶ್‌, ಜಯಣ್ಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next