Advertisement
ಹಾಗಿದ್ದರೆ “ದಿಲ್ಲಿ’ ಯಾರದ್ದು?ಎಲ್ಲಾ ಮಹಾನಗರಗಳಂತೆ ದಿಲ್ಲಿ ಶಹರವೂ ಕೂಡ ಎಲ್ಲರಿಗೆ ಸೇರಿಯೂ, ಯಾರಿಗೂ ಸೇರದ್ದು ! ಶಹರದಲ್ಲೊಮ್ಮೆ ಸುಮ್ಮನೆ ನಡೆದಾಡಿದರೆ ಸಾಕು. ಜಗತ್ತಿನ ಮತ್ತು ದೇಶದ ಮೂಲೆಮೂಲೆಗಳಿಂದ ಅದೆಷ್ಟು ಮಂದಿ ಈ ದಿಲ್ಲಿಯೆಂಬ ಶಹರದಲ್ಲಿ ತಮ್ಮ ಬದುಕನ್ನು ಕಂಡುಕೊಂಡಿದ್ದಾರೆ ಎಂಬುದು ಅಚ್ಚರಿಯಾಗುತ್ತದೆ. ಕಟ್ಟಡ ಕಾಮಗಾರಿಗಳ ಸೈಟುಗಳಲ್ಲಿ ದುಡಿಯುತ್ತಿರುವ ಬಿಹಾರ, ಉತ್ತರಪ್ರದೇಶ ಮೂಲದ ಕೂಲಿಕಾರ್ಮಿಕರು, ಮೋಮೋ ಸ್ಟಾಲುಗಳನ್ನು ಹಾಕಿರುವ ನೇಪಾಲಿ ಮೂಲದವರು, ಮನೆಕೆಲಸಗಳಲ್ಲಿ ತೊಡಗಿಕೊಂಡಿರುವ ಜಾರ್ಖಂಡ್-ಛತ್ತೀಸ್‌ಗಢ ಮೂಲದ ಹೆಂಗಸರು, ಉದ್ಯಮಗಳಲ್ಲಿ ವ್ಯಸ್ತರಾಗಿರುವ ಗುಜರಾತಿಗಳು, ಚಿಕ್ಕಪುಟ್ಟ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಈಶಾನ್ಯ ಭಾಗದವರು, ಹೊಟೇಲುಗಳಲ್ಲಿ ಕಾಣಿಸಿಕೊಳ್ಳುವ ದಕ್ಷಿಣಭಾಗದವರು… ಹೀಗೆ ದಿಲ್ಲಿ ಶಹರವೆಂಬುದು ಒಂದು ರೀತಿಯಲ್ಲಿ ಮಿನಿ ಭಾರತವೇ. ಇಡೀ ದೇಶವನ್ನೇ ತನ್ನೊಡಲಿನಲ್ಲಿ ಹುದುಗಿಸಿಕೊಂಡ ಪುಟ್ಟ ಭೂಭಾಗ.
ಸದ್ಯ ದಿಲ್ಲಿಯು ದೇಶದ ಬಹುಭಾಗಗಳಿಂದ ವಲಸೆ ಬರುತ್ತಿರುವ ಜನರ ನೆಚ್ಚಿನ ತಾಣಗಳಲ್ಲೊಂದಾಗಿದೆ ಎಂದರೆ ತಪ್ಪಲ್ಲ. 2016ರ ನಂತರ ದಿಲ್ಲಿಯಲ್ಲಿ ದಿನನಿತ್ಯವೂ ಏರಿಕೆಯಾಗುತ್ತಿದ್ದ ಪ್ರತೀ ಸಾವಿರದ ಸಂಖ್ಯೆಯಲ್ಲಿ ಮುನ್ನೂರರಷ್ಟು ವಲಸಿಗರದ್ದೇ ಪ್ರಾಬಲ್ಯ. ಶಹರದ ಒಟ್ಟು ಜನಸಂಖ್ಯೆಯಲ್ಲಿ ವಲಸಿಗರ ಪಾಲು ಮೂವತ್ತು ಪ್ರತಿಶತಕ್ಕೂ ಹೆಚ್ಚಿದೆ ಎಂದರೆ ದೇಶದೊಳಗೇ ದಿಲ್ಲಿಯಂಥ ಮಹಾನಗರಿಗಳತ್ತ ನಡೆಯುತ್ತಿರುವ ಆಂತರಿಕ ವಲಸೆಯ ಮಟ್ಟವನ್ನು ಲೆಕ್ಕಹಾಕಬಹುದು. ಅಕ್ಷಯಪಾತ್ರೆಯಂತಿರುವ ಆರ್ಥಿಕತೆ ಮತ್ತು ನಮ್ಮ ರಾಜ್ಯಗಳಲ್ಲೇ ಉತ್ತಮ ಎನಿಸುವಷ್ಟು ಪರ್‌ಕ್ಯಾಪಿಟಾ ಆದಾಯವನ್ನು ಹೊಂದಿರುವ ಅಂಶಗಳು ವಲಸಿಗರನ್ನು ದಿಲ್ಲಿಯತ್ತ ಇನ್ನಿಲ್ಲದಂತೆ ಆಕರ್ಷಿಸುತ್ತಿದೆಯಂತೆ. 2018ರಲ್ಲಿ ವಿಶ್ವ ಸಂಪತ್ತು ವರದಿಯು ದಿಲ್ಲಿಯನ್ನು ಭಾರತದ ಎರಡನೆಯ ಸಂಪದ್ಭರಿತ ಪ್ರದೇಶವೆಂದು ಉಲ್ಲೇಖೀಸಿತ್ತು.
Related Articles
Advertisement
ಎಲ್ಲ ರಸ್ತೆಗಳು ದಿಲ್ಲಿಯತ್ತ !ಅಷ್ಟಕ್ಕೂ ದಿಲ್ಲಿಯ ಆಡಳಿತ ವ್ಯವಸ್ಥೆಯು ಇದನ್ನು ನಿರೀಕ್ಷಿಸದ್ದೇನೂ ಇರಲಿಲ್ಲ. ದೇಶದ ಬಹುತೇಕ ಮೂಲೆಗಳಿಂದ ಹೊಸ ಅವಕಾಶಗಳನ್ನು ಅರಸುತ್ತ¤ ಬರುವ ಜನಜಂಗುಳಿಯು ದಿಲ್ಲಿಯನ್ನಷ್ಟೇ ತಲುಪಿದರೆ ಶಹರದ ಜನಸಂಖ್ಯೆಯು ಮಿತಿಮೀರಿಹೋಗಲಿರುವ ಅಂದಾಜು ಎಂಬತ್ತರ ದಶಕದ ಮಧ್ಯಭಾಗದಲ್ಲೇ ಬಂದಿತ್ತು. ಈ ವಲಸೆಯನ್ನು ಕೊಂಚ ಚದುರಿಸುವ ಉದ್ದೇಶದಲ್ಲೇ ಹುಟ್ಟಿಕೊಂಡಿದ್ದು ನ್ಯಾಷನಲ್ ಕ್ಯಾಪಿಟಲ್ ರೀಜನ್ (ಎನ್‌ಸಿಆರ್) ಅನ್ನು ಅಭಿವೃದ್ಧಿಗೊಳಿಸುವ ಕಲ್ಪನೆ. ಈ ಕನಸಿನ ಕೂಸೇ 1985ರಲ್ಲಿ ಆರಂಭವಾಗಿದ್ದ ನ್ಯಾಷನಲ್ ಕ್ಯಾಪಿಟಲ್ ರೀಜನ್ ಪ್ಲಾನಿಂಗ್ ಬೋರ್ಡ್ (ಎನ್‌ಸಿಆರ್‌ಪಿಬಿ). ಕೇಂದ್ರ ನಗರಾಭಿವೃದ್ಧಿ ಮಂತ್ರಾಲಯದಡಿಯಲ್ಲಿ ಆರಂಭವಾಗಿದ್ದ ಎನ್.ಸಿ.ಆರ್.ಪಿ.ಬಿ. ಮಾಡಿದ ಮೊದಲ ಕೆಲಸವೆಂದರೆ ಉದ್ಯೋಗಾವಕಾಶಗಳು ಮತ್ತು ಸಂಬಂಧಿ ವಲಸೆಯ ಒಳಹರಿವನ್ನು ದಿಲ್ಲಿಗಷ್ಟೇ ಸೀಮಿತಗೊಳಿಸದೆ ಆಸುಪಾಸಿನ ನಾಲ್ಕು ರಾಜ್ಯಗಳ ಆಯ್ದ ಭಾಗಗಳಿಗೂ ವಿಸ್ತರಿಸಿದ್ದು. ಇನ್ನು ಇವುಗಳನ್ನು ಹೊರತುಪಡಿಸಿ ಕೌಂಟರ್ ಮ್ಯಾಗ್ನೆಟ್ ಏರಿಯಾಗಳ ಪರಿಕಲ್ಪನೆಯತ್ತಲೂ ಗಮನಹರಿಸಿದ ಸಮಿತಿಯು ಅಂಬಾಲಾ, ಪಟಿಯಾಲಾ, ಬರೇಲಿ, ಹಿಸ್ಸಾರ್ ಗಳನ್ನೂ ಕೂಡ ಇಂಥಾ ತಾಣಗಳಾಗಿ ಪರಿವರ್ತಿಸುವ ಬಗ್ಗೆ ಚಿಂತಿಸತೊಡಗಿತು. ಫೋಬ್ಸ್ì ಇಂಡಿಯಾದಂಥಾ ಮಾಧ್ಯಮಗಳು ಎನ್.ಸಿ.ಆರ್.ಪಿ.ಬಿಯಲ್ಲಿರುವ ಲೋಪದೋಷಗಳನ್ನು ಎತ್ತಿತೋರಿಸಿರುವುದು ಸತ್ಯವಾದರೂ ಇಂಥಾ ಪ್ರಯತ್ನಗಳು ವಲಸಿಗರ ಒಳಹರಿವನ್ನು ತಕ್ಕಮಟ್ಟಿಗಾದರೂ ಸಹನೀಯಗೊಳಿಸಿದ್ದರಲ್ಲಿ ಸಂದೇಹವೇನಿಲ್ಲ. ದಿಲ್ಲಿಯು ಮಹಾನಗರಿಯ ವೇಗಕ್ಕೆ ತಕ್ಕಂತೆ ಬೆಳೆಯುತ್ತಲೇ ಇದೆ. ಹಲವು ಕನಸು, ನಿರೀಕ್ಷೆಗಳನ್ನು ಹೊತ್ತು ದಿಲ್ಲಿಯತ್ತ ಬರುತ್ತಿರುವ ವಲಸಿಗರು ಹೆಚ್ಚುತ್ತಲೇ ಇದ್ದಾರೆ. ಇತ್ತ ಜನಸಂಖ್ಯೆ ಹೆಚ್ಚುತ್ತ ಹೋದಂತೆ ಸಂಪನ್ಮೂಲಗಳ ಬೇಡಿಕೆಯೂ ಹೆಚ್ಚಾಗಿದೆ. ಸ್ಲಮ್ಮುಗಳು ಲೆಕ್ಕವಿಲ್ಲದಷ್ಟಾಗಿವೆ. ನಗರೀಕರಣದ ಭರದಲ್ಲಿ ಶಹರವು ಮತ್ತಷ್ಟು ಫ್ಲೈ-ಓವರುಗಳನ್ನು, ಸಬ್-ವೇಗಳನ್ನು ವಿಧಿಯಿಲ್ಲವೆಂಬಂತೆ ನಿರ್ಮಿಸುತ್ತಲೂ ಇದೆ. ರೋಪ್‌ವೇಗಳು ಭಾರತದ ಸಾರಿಗೆ ವ್ಯವಸ್ಥೆಯ ಹೊಸ ಭರವಸೆಯೆಂಬ ಚರ್ಚೆಗಳು ಈಚೆಗೆ ದೊಡ್ಡಮಟ್ಟಿನಲ್ಲಿ ಶುರುವಾಗಿದ್ದಲ್ಲದೆ ದೇಶದ ಕೆಲ ಭಾಗಗಳಲ್ಲಿ ಕಾಮಗಾರಿಗಳನ್ನಾರಂಭಿಸುವ ಪ್ರಯತ್ನಗಳೂ ನಡೆದಿವೆ. ಟ್ರಾಫಿಕ್ ಜಾಮ್‌ಗಳು ಇನ್ನು ಆಗಸದಲ್ಲೂ ಆದರೆ ಅಚ್ಚರಿಯಿಲ್ಲವೇನೋ! ಪ್ರಸಾದ್ ನಾೖಕ್