Advertisement

ದಂಡ ವಿಧಿಸಿದರೂನಿಯಂತ್ರಣಕ್ಕೆ ಬರುತ್ತಿಲ್ಲಟ್ರಾಫಿ ಕ್‌ ಜಾಮ್‌

04:09 PM Nov 10, 2017 | |

ಪುತ್ತೂರು: ಪುತ್ತೂರು ನಗರದಲ್ಲಿ ನಿಯಮ ಉಲ್ಲಂ ಸಿದ ವಾಹನ ಚಾಲನೆಯಿಂದ ಪ್ರತಿ ತಿಂಗಳು ಸುಮಾರು 3 ಲಕ್ಷ
ರೂ.ಗೆ ಕಡಿಮೆಯಾಗದಂತೆ ದಂಡ ಸಂಗ್ರಹವಾಗುತ್ತಿದೆಯಲ್ಲದೆ ಅದು ಏರುಗತಿಯಲ್ಲೇ ಸಾಗುತ್ತಿದೆ.

Advertisement

ಶಾಲೆ ಬಿಡುವ ವೇಳೆ, ಸಂತೆ ದಿನ, ಹಬ್ಬ ಮೊದಲಾದ ಸೀಸನ್‌ ಸಂದರ್ಭ ಪುತ್ತೂರು ಪೇಟೆಗೆ ಕಾಲಿಡುವು ದೆಂದರೆ ಪ್ರಯಾಸ. ಕಾರಣ ಇಲ್ಲಿನ ದಟ್ಟಣೆ. ಅಥವಾ ಜನ ಹಾಗೂ ವಾಹನ ದಟ್ಟಣೆಗೆ ತಕ್ಕಂತೆ ಪೇಟೆಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯದೇ ಇರುವುದು.

ಪುತ್ತೂರನ್ನು ಗ್ರಾಮಾಂತರ ಜಿಲ್ಲೆಯಾಗಿ ಘೋಷಿಸಬೇಕು ಎಂದು ಶಾಸಕರಾದಿಯಾಗಿ ಎಲ್ಲರೂ ಒತ್ತಾಯಿಸುತ್ತಿದ್ದಾರೆ. ಆದರೆ ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಬಗ್ಗೆ ಯಾರೂ ಗಮನ ಹರಿಸಿಲ್ಲ. ರಸ್ತೆ, ಚರಂಡಿ ಇವಿಷ್ಟೇ ಅಭಿವೃದ್ಧಿ ಎಂಬಂತಾಗಿದೆ. ರಸ್ತೆ ಅಗಲೀಕರಣ, ಪಾರ್ಕಿಂಗ್‌ ವ್ಯವಸ್ಥೆ ಕಡೆ ಆಸ್ಥೆ ವಹಿಸಿಲ್ಲ. ಕನಿಷ್ಠ ಪಕ್ಷ ನೋ ಪಾರ್ಕಿಂಗ್‌ ಫ‌ಲಕ, ಸಂಚಾರ ನಿಯಂತ್ರಣಕ್ಕೆ ಕ್ರಮ, ಇರುವ ಸಣ್ಣ ಪುಟ್ಟ ಜಾಗಗಳನ್ನಾದರೂ ಪಾರ್ಕಿಂಗ್‌ಗೆ ಗುತ್ತಿಗೆ ನೀಡುವುದು ಇಂತಹ ಯಾವುದೇ ಉಪಕ್ರಮಗಳನ್ನು ಅನುಸರಿಸಿಯೇ ಇಲ್ಲ. ಇದರಿಂದಾಗಿ ಮಿತಿಮೀರಿ ಹೆಚ್ಚುತ್ತಿರುವ ವಾಹನ, ಜನ ದಟ್ಟಣೆಗೆ ಪುತ್ತೂರು ನಗರ ಹೈರಾಣಾಗಿದೆ. ಬೆಳಗ್ಗೆ- ಮಧ್ಯಾಹ್ನ- ಸಂಜೆ ಪೇಟೆಗೆ ಹೋಗುವುದೆಂದರೆ ತಲೆ ನೋವು.

ಇಷ್ಟಕ್ಕೂ ಮೀರಿ ಹೋಗಿದ್ದೇ ಆದರೆ, ಪೊಲೀಸರ ಕೈಗೆ ಸಿಕ್ಕಿ ಬೀಳುವುದಂತೂ ಶತಸ್ಸಿದ್ಧ. ಒಂದಿಲ್ಲೊಂದು ಕಾರಣಕ್ಕೆ ದಂಡ ಕಟ್ಟಲೇ ಬೇಕಾದ ಪ್ರಮೇಯ. ಪುತ್ತೂರು ನಗರದ ಹೆಚ್ಚಿನ ಎಲ್ಲ ರಸ್ತೆಗಳು ಒನ್‌ ವೇ. ಬೊಳುವಾರಿನಿಂದ ದರ್ಬೆ ನಡುವಿನ ಮುಖ್ಯರಸ್ತೆಯಲ್ಲಿ ಎಲ್ಲಿಯೂ ವಾಹನ ನಿಲ್ಲಿಸುವಲಂತಿಲ್ಲ. ಎಲ್ಲಿಯೂ ಸೂಚನಾ ಫ‌ಲಕಗಳಿಲ್ಲದಿದ್ದರೂ ಪೊಲೀಸರು ದಂಡ ವಿಧಿಸುವುದನ್ನು ಬಿಟ್ಟಿಲ್ಲ. ಅಮಾಯಕರು ವೃಥಾ ದಂಡ ತೆರಬೇಕಾಗುತ್ತಿದೆ. ಇತ್ತೀಚಿನ ಕೆಲವು ತಿಂಗಳಿಂದ ವಾಹನಗಳ ಮೇಲೆ ಹೆಚ್ಚು ನಿಗಾ ವಹಿಸಿದ್ದರಿಂದ ಸಂಗ್ರಹವಾಗುವ ದಂಡದ ಪ್ರಮಾಣವೂ ಹೆಚ್ಚುತ್ತಿದೆ.

ಹೆಚ್ಚಿದ ದಂಡ
ಆಗಸ್ಟ್‌ ತಿಂಗಳಲ್ಲಿ 2,380 ಪ್ರಕರಣ ದಾಖಲಾಗಿದ್ದು, 3,08,900 ರೂ. ದಂಡ ಸಂಗ್ರಹವಾಗಿದೆ. ಸೆಪ್ಟಂಬರ್‌ ತಿಂಗಳಿನಲ್ಲಿ 3,531 ಪ್ರಕರಣಗಳಿಂದ 4.38 ಲಕ್ಷ ರೂ. ದಂಡ ಸಂಗ್ರಹವಾಯಿತು. ಅಕ್ಟೋಬರ್‌ನಲ್ಲಿ ಸಂಖ್ಯೆ ಇನ್ನೂ ಹೆಚ್ಚಾಯಿತು. 4,561 ಪ್ರಕರಣ ಹಾಗೂ 6,34,800 ರೂ. ದಂಡ ಸಂಗ್ರಹವಾಯಿತು. ವಾಹನ ದಟ್ಟಣೆ ಮೇಲೆ ನಿಯಂತ್ರಣ ಹೇರಿದಷ್ಟು ದಂಡ ಸಂಗ್ರಹ ಹೆಚ್ಚಳವಾಗಿದ್ದು ಬಿಟ್ಟರೆ, ಪರಿಸ್ಥಿತಿ ಸುಧಾರಿಸಿಲ್ಲ. ಪೊಲೀಸರಿಗೆ ಜನಸಾಮಾನ್ಯರು ಹಿಡಿಶಾಪ ಹಾಕುವುದು ತಪ್ಪಿಲ್ಲ. ಆದರೆ ಇದಕ್ಕೆ ಶಾಶ್ವತ ಪರಿಹಾರ ನೀಡಬೇಕಾದ ನಗರಸಭೆ ಮೌನವಾಗಿದೆ.

Advertisement

ಚರ್ಚಿಸಿ ಸೂಕ್ತ ಕ್ರಮ
ಹಿಂದಿನ ಆದೇಶದಲ್ಲಿ ತಿಳಿಸಿದ ರಸ್ತೆಗಳಲ್ಲಿ ಬಸ್‌ಗಳು ಸಂಚರಿಸುತ್ತಿವೆ. ಉಳಿದ ವಾಹನಗಳು ಸಂಚಾರ ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪೊಲೀಸ್‌ ಇಲಾಖೆ ಜತೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಸೂಚನೆ ನೀಡಲಾಗುವುದು. 
–  ರಘುನಂದನ ಮೂರ್ತಿ,
   ಸಹಾಯಕ ಆಯುಕ್ತ

ನಿಯಮಮೀರಿದರೆ ಕ್ರಮ
ರಿಕ್ಷಾಗಳದ್ದೇ ದೊಡ್ಡ ಸಮಸ್ಯೆ. ಗ್ರಾಮಾಂತರ ಹಾಗೂ ಪೇಟೆ ಎಂದು ಇಬ್ಭಾಗಿಸುವುದು ಅಥವಾ ಪರವಾನಗಿ ನೀಡುವುದನ್ನು ನಿಲ್ಲಿಸುವುದು ಮಾತ್ರ ಇದಕ್ಕಿರುವ ದಾರಿ. ಪಾರ್ಕಿಂಗ್‌ ಸ್ಥಳವನ್ನು ಗೊತ್ತುಪಡಿಸುವ ಕೆಲಸ ಆಗಬೇಕಿದೆ. ಸದ್ಯಕ್ಕೆ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ನಿಗಾ ಇರಿಸಲಾಗಿದೆ. ಸವಾರ ಅಥವಾ ಚಾಲಕ ಮನೆಗೆ ಕೊಂಡೊಯ್ಯಬೇಕಾದ ಸಣ್ಣ ಮೊತ್ತವನ್ನೂ ದಂಡದ ರೂಪದಲ್ಲಿ ಪಾವತಿಸಬೇಕಾದ ಸ್ಥಿತಿ ಎದುರಾಗಿದೆ.
–  ಮಹೇಶ್‌ ಪ್ರಸಾದ್‌,
   ಪೊಲೀಸ್‌ ನಿರೀಕ್ಷಕ, ಪುತ್ತೂರು ನಗರ ಠಾಣೆ

  ಗಣೇಶ್‌ ಎನ್‌.ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next