Advertisement
ರಾ. ಹೆದ್ದಾರಿ 66ರ ಉಡುಪಿ- ಮಂಗಳೂರು (ಪೂರ್ವ ಪಾರ್ಶ್ವ), ಮಂಗಳೂರು-ಉಡುಪಿ ಪಶ್ಚಿಮ ಪಾರ್ಶ್ವ, ಇಕ್ಕೆಲಗಳಲ್ಲಿನ ಸರ್ವೀಸ್ ರಸ್ತೆಗಳು, ಶಿರ್ವ-ಕಟಪಾಡಿ, ಮಣಿಪುರ- ಕಟಪಾಡಿ, ಕೋಟೆ ಮಟ್ಟು-ಕಟಪಾಡಿ ಪ್ರದೇಶಗಳಿಂದ ಆಗಮಿಸುವ ವಾಹನ ಗಳು, ಜನಸಂಚಾರದಿಂದ ಕಟಪಾಡಿ ಜಂಕ್ಷನ್ ಟೆನ್ಷನ್‌ಮಯವಾಗಿದೆ.
Related Articles
Advertisement
ವ್ಯಾಪಾರ, ವಹಿವಾಟು, ಸದಾ ಜನದಟ್ಟಣೆ, ವಾಹನ ದಟ್ಟನೆಯಿಂದ ಕೂಡಿದ ಕಟಪಾಡಿ ಹೆದ್ದಾರಿಯಲ್ಲಿ ‘ಯು’ ಟರ್ನ್ ಇಲ್ಲ. ಒಂದೋ ಉದ್ಯಾವರಕ್ಕೆ ತೆರಳಿ ‘ಯು’-ಟರ್ನ್ ಹೊಡೆದು ಬರಬೇಕು. ಮತ್ತೂಂದೆಡೆ ಪಾಂಗಾಳಕ್ಕೆ ತೆರಳಿ ಯು-ಟರ್ನ್ ಹೊಡೆದು ಬರಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಕಟಪಾಡಿ ಪೇಟೆ ಯಲ್ಲಿನ ಜಂಕ್ಷನನ್ನೇ ವಾಹನಗಳು, ಜನರು ಬಳಸಬೇಕಾದ ಅನಿವಾರ್ಯತೆ ಇದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಮುತುವರ್ಜಿಯಿಂದ ಗಮನ ಹರಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಗಳ ಸುಗಮ ಸಂಚಾರಕ್ಕೆ ಸೂಕ್ತ ಅವಕಾಶವನ್ನು ಕಲ್ಪಿಸಬೇಕಿದೆ ಎಂದು ವಾಹನ ಸವಾರರು, ಸ್ಥಳೀಯರು, ಟೂರಿಸ್ಟ್ ವಾಹನದವರು, ಪಾದ ಚಾರಿಗಳು, ವ್ಯಾಪಾರಿಗಳು, ಸಾರ್ವ ಜನಿಕರು ಆಗ್ರಹಿಸಿದ್ದಾರೆ.
ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ
ಸ್ಥಳೀಯಾಡಳಿತದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಸಾಧ್ಯ. ಈ ಮೊದಲೇ ಸಮಸ್ಯೆ ನಿವಾರಣೆಗಾಗಿ ಹೆದ್ದಾರಿ ಇಲಾಖೆಯ ಗಮನಕ್ಕೆ ತರಲಾಗಿದೆ. ವಯೋವೃದ್ಧರು, ಶಾಲಾ ಮಕ್ಕಳು ಸರ್ವೀಸ್ ರಸ್ತೆ – ಪೂರ್ವ ಮತ್ತು ಪಶ್ಚಿಮ ಪಾರ್ಶ್ವಗಳ ರಾ.ಹೆದ್ದಾರಿಯನ್ನು ಬಳಸಿಕೊಂಡು ರಸ್ತೆಯನ್ನು ದಾಟ ಬೇಕಾದಂತಹ ಸಂಕಷ್ಟದ ಅನಿವಾರ್ಯ ಪರಿಸ್ಥಿತಿಯೂ ಇದೆ -ಇಂದಿರಾ ಎಸ್. ಆಚಾರ್ಯ, ಅಧ್ಯಕ್ಷರು, ಕಟಪಾಡಿ ಗ್ರಾ.ಪಂ.
ಪಾದಚಾರಿಗಳ ಸಹಿತ ವಾಹನಗಳಿಗೂ ಸಮಸ್ಯೆ
ಅಂಡರ್‌ಪಾಸ್-ಮೇಲ್ಸೇತುವೆ ನಿರ್ಮಾಣವೇ ಪರಿಣಾಮಕಾರಿ ಬಹುತೇಕ ಸಂದರ್ಭದಲ್ಲಿ ಪಾದಚಾರಿಗಳ ಸಹಿತ ವಾಹನಗಳೂ ಸಮಸ್ಯೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಎಂಜಿನಿಯರ್‌ಗಳು ಸಮಸ್ಯೆ ಪರಿಹರಿಸಲು ಸೂಕ್ತ ಯೋಜನೆ ರೂಪಿಸಬೇಕಾಗಿದೆ. – ಮಮತಾ ವೈ. ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಟಪಾಡಿ ಗ್ರಾ.ಪಂ. ಕಟಪಾಡಿ
ಜಂಕ್ಷನ್‌ನಲ್ಲಿ ಸಮಸ್ಯೆ ನಿವಾರಣೆಗಾಗಿ ಅಂಡರ್ ಪಾಸ್ (ಕಿನ್ನಿಮೂಲ್ಕಿ ಮಾದರಿ) ಅಥವಾ ಮೇಲ್ಸೇತುವೆ (ಕಾಪು ಮಾದರಿ) ನಿರ್ಮಾಣವೇ ಪರಿಣಾಮಕಾರಿ. -ದಯಾನಂದ, ಎ.ಎಸ್.ಐ. , ಕಾಪು ಪೊಲೀಸ್ ಠಾಣೆ.
– ವಿಜಯ ಆಚಾರ್ಯ ಕಟಪಾಡಿ