Advertisement

Charmady ಘಾಟಿಯಲ್ಲಿ ಕೆಟ್ಟು ನಿಂತ 16 ಚಕ್ರದ ಲಾರಿ… ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್

09:47 AM Mar 18, 2024 | Team Udayavani |

ಚಿಕ್ಕಮಗಳೂರು: ಸಿಮೆಂಟ್ ಹೇರಿಕೊಂಡು ಹೋಗುತಿದ್ದ 16 ಚಕ್ರದ ಲಾರಿಯೊಂದು ಚಾರ್ಮಾಡಿ ಘಾಟಿಯ ಹತ್ತನೇ ತಿರುವಿನಲ್ಲಿ ಕೆಟ್ಟು ನಿಂತ ಘಟನೆಯೊಂದು ನಡೆದಿದೆ.

Advertisement

ಹುಬ್ಬಳ್ಳಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಸಿಮೆಂಟ್ ಲಾರಿಯೊಂದು ಚಾರ್ಮಾಡಿ ಘಾಟಿಯ ಹತ್ತನೇ ತಿರುವಿನಲ್ಲಿ ಕೆಟ್ಟು ನಿಂತ ಪರಿಣಾಮ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.

ಅನುಮತಿ ಇಲ್ಲ:
ಚಾರ್ಮಾಡಿ ಘಾಟಿಯಲ್ಲಿ 10 ಚಕ್ರದ ವಾಹನಕ್ಕಿಂತ ದೊಡ್ಡ ವಾಹನಗಳು ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವಂತಿಲ್ಲ, ಆದರೂ ವಾಹನ ಸವಾರ ಗೊತ್ತಿದ್ದೋ ಗೊತ್ತಿಲ್ಲದೆಯೋ ಬಂದಿದ್ದಾನೆ ಈ ವೇಳೆ ಹತ್ತನೇ ತಿರುವಿನಲ್ಲಿ ಹಿಂದೆಯೂ ಹೋಗಲಾಗದೆ, ಮುಂದೆಯೂ ಹೋಗಲಾಗದೆ ಸಿಲುಕಿಕೊಂಡಿದೆ. ಈ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ಇತರ ವಾಹನಗಳು ತಿರುವಿನಲ್ಲಿ ಸಂಚರಿಸಲಾಗದೆ ಸಾಲು ಗಟ್ಟಿ ನಿಂತಿರುವ ಚಿತ್ರಣ ಕಂಡು ಬಂದಿದೆ.

ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿ ಇದಾಗಿದ್ದು ಹೆಚ್ಚಿನ ವಾಹನಗಳು ಇದೆ ಮಾರ್ಗವನ್ನು ಅವಲಂಬಿಸುತ್ತವೆ ಹಾಗಾಗಿ ಈ ಮಾರ್ಗದಲ್ಲಿ ಹೆಚ್ಚಿನ ವಾಹನಗಳು ಸಂಚರಿಸುತ್ತಿರುವುದರಿಂದ ಕಿಲೋಮೀಟರ್ ಗಟ್ಟಲೆ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ.

ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಇದ್ರೂ ಲಾರಿಯನ್ನು ಸಂಚರಿಸಲು ಹೇಗೆ ಬಿಟ್ಟರು ಎಂಬುದು ಅಲ್ಲಿನ ಜನರ ಪ್ರಶ್ನೆಯಾಗಿದೆ, ಇದಲ್ಲದೆ ಸ್ಥಳೀಯರು ಪೊಲೀಸರ ವಿರುದ್ಧ ಅಸಮಾಧಾನಗೊಂಡಿದ್ದಾರೆ.

Advertisement

ಇದನ್ನೂ ಓದಿ: Train Derail: ಹಳಿತಪ್ಪಿದ ಸಾಬರಮತಿ-ಆಗ್ರಾ ಸೂಪರ್‌ಫಾಸ್ಟ್ ರೈಲು… ಸಂಚಾರ ವ್ಯತ್ಯಯ

Advertisement

Udayavani is now on Telegram. Click here to join our channel and stay updated with the latest news.

Next