Advertisement
ಈಗಾಗಲೇ ಪೂರ್ವ ಸಂಚಾರ ವಿಭಾಗದಲ್ಲಿ 11 ಕಡೆಗಳಲ್ಲಿ ಜೀರೋ ಟಾಲೆರೆನ್ಸ್ ಜಂಕ್ಷನ್‌ಗಳನ್ನು ರೂಪಿಸಲಾಗಿದ್ದು, ನಿತ್ಯ ಒಂದೂವರೆ ಸಾವಿರದಂತೆ ಇದುವರೆಗೂ (ಜನವರಿಯಿಂದ) ಸಂಚಾರ ನಿಯಮ ಉಲ್ಲಂ ಸಿದ 75 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಹಾಗೆಯೇ ಪಶ್ಚಿಮ ಸಂಚಾರ ವಿಭಾಗದಲ್ಲಿ 10 ಮತ್ತು ಮತ್ತು ಉತ್ತರ ಸಂಚಾರ ವಿಭಾಗದಲ್ಲಿ 5 ಜಂಕ್ಷನ್‌ಗಳನ್ನು ಗುರುತಿಸಲಾಗಿದ್ದು, ಇದಕ್ಕಾಗಿ ಕಾಮಗಾರಿ ಕೂಡ ನಡೆಯುತ್ತಿದೆ.
Related Articles
Advertisement
ನಿಯಮ ಉಲ್ಲಂ ಸುವವರನ್ನು ಹಿಡಿಯಲೆಂದೇ ಪ್ರತಿ ಜೀರೋ ಟಾಲರೆನ್ಸ್ ಜಂಕ್ಷನ್‌ಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದ್ದು, ಸಂಚಾರ ನಿಯಮ ಉಲ್ಲಂ ಸಿದ ವಾಹನಗಳ ವಿರುದ್ಧ ದಂಡ ವಿಧಿಸಲಿದ್ದಾರೆ. ಅಷ್ಟೇ ಅಲ್ಲ ಈ ದೃಶ್ಯ ಅಲ್ಲಿನ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗುತ್ತದೆ.
ಎಲ್ಲೆಲ್ಲಿ ಜೀರೋ ಟಾಲರೆನ್ಸ್ ?ಕೆ.ಆರ್.ರಸ್ತೆ, ಕಬ್ಬನ್ ರಸ್ತೆ, 110 ಅಡಿ ರಸ್ತೆ , ಹಳೇ ಮದ್ರಾಸ್ ರಸ್ತೆ, ಟ್ರಿನಿಟಿ ಜಂಕ್ಷನ್, ಬಸವೇಶ್ವರ ವೃತ್ತ, ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿ, ಶಿವಾನಂದ ವೃತ್ತ, ಎನ್.ಆರ್.ಜಂಕ್ಷನ್, ಕಾವೇರಿ ಆರ್ಟ್ಸ್ ಮತ್ತು ಕ್ರಾಫ್ಟ್ ಜಂಕ್ಷನ್, ಊರ್ವಶಿ ಜಂಕ್ಷನ್, ಸೋನಿ ವರ್ಲ, ಇಸ್ರೋ ಜಂಕ್ಷನ್. ಮೈಸೂರು ಬ್ಯಾಂಕ್ ವೃತ್ತ, ಸುಮ್ಮನಹಳ್ಳಿ, ಯಶವಂತಪುರ, ತುಮಕೂರು ರಸ್ತೆ, ಆರ್.ಟಿ.ನಗರ ಠಾಣೆ, ಹೆಬ್ಟಾಳ ವೃತ್ತ, ಯಲಹಂಕ ಠಾಣೆ, ಚಿಕ್ಕಜಾಲ ನಾರಾಯಣಪುರ ವೃತ್ತ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ವಿಜಯಪುರ ಜಂಕ್ಷನ್. ಹೀಗೆ ಪ್ರತಿ ಜಂಕ್ಷನ್ ನಿರ್ಮಿಸಲು 1 ಲಕ್ಷಕ್ಕೂ ಅಧಿಕ ವೆಚ್ಚ ವ್ಯಯಿಸಲಾಗುತ್ತಿದೆ. ಪೂರ್ವ ವಲಯದ 11 ಜಂಕ್ಷನ್‌ಗಳಿಗೆ 18 ಲಕ್ಷ ವೆಚ್ಚವಾಗಿದೆ ಎಂದು ಸಂಚಾರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ವಿಶೇಷ ತಂಡ
ಸದ್ಯ ಪೂರ್ವ ವಲಯ ಸಂಚಾರ ವಿಭಾಗದ 11 ಜಂಕ್ಷನ್‌ಗಳಲ್ಲಿಯೂ ವಿಶೇಷ ತಂಡ ಕಾರ್ಯಾಚರಣೆ ನಡೆಸುತ್ತಿದ್ದು, ಈ ತಂಡವನ್ನು ಬೇರೆ ಯಾವುದೇ ಕೆಲಸಕ್ಕೆ ನಿಯೋಜಿಸುವುದಿಲ್ಲ. ಒಬ್ಬ ಎಎಸ್‌ಐ, ಪಿಎಸ್‌ಐ ಮತ್ತು ಕಾನ್‌ಸ್ಟೆàಬಲ್ ಸೇರಿ ಒಟ್ಟು ಮೂರು ಮಂದಿ ತಂಡದಲ್ಲಿದ್ದಾರೆ. ಈ ತಂಡ ಖಾಯಂ ಆಗಿ ನಿಗದಿತ ಜಂಕ್ಷನ್‌ಲ್ಲಿ ಕರ್ತವ್ಯ ನಿರ್ವಹಿಸಬೇಕು. ಸಂಚಾರ ನಿಯಮ ಉಲ್ಲಂ ಸಿದ ವಾಹನಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಜೀರೋ ಟಾಲರೆನ್ಸ್ ಜಂಕ್ಷನ್ ನಿರ್ಮಿಸುವುದರಿಂದ ವಾಹನ ಸವಾರರಲ್ಲಿ ಜಾಗೃತಿ ಮೂಡುತ್ತದೆ. ಜತೆಗೆ ನಗರದ ಸಂಚಾರ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಬಿಂಬಿಸುವ ಉದ್ದೇಶ ಹೊಂದಿದ್ದೇವೆ. ಸದ್ಯ ಮೂರು ವಲಯಗಳ ಕೆಲವೆಡೆ ಮಾತ್ರ ಜಂಕ್ಷನ್ ನಿರ್ಮಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಪ್ರಮುಖ ವೃತ್ತಗಳಲ್ಲೂ ಈ ವ್ಯವಸ್ಥೆ ಬರಲಿದೆ.
– ಹಿತೇಂದ್ರ, ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ ವಿಭಾಗ)