Advertisement

Maroli ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚಾರ; ಅಪಾಯಕ್ಕೆ ಆಹ್ವಾನ

03:12 PM Aug 18, 2024 | Team Udayavani |

ಮರೋಳಿ: ರಾಷ್ಟ್ರೀಯ ಹೆದ್ದಾರಿ 73ರ ಬಿಕರ್ನಕಟ್ಟೆ, ಮರೋಳಿ, ಪಡೀಲ್‌ ವರೆಗಿನ ರಸ್ತೆ ಅಪಘಾತಗಳ “ಹಾಟ್‌ಸ್ಪಾಟ್‌’ ಆಗಿದ್ದು, ಪ್ರತಿ ನಿತ್ಯ ಒಂದಲ್ಲೊಂದು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಈಗಾಗಲೇ ಸಾಕಷ್ಟು ಮಂದಿ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಆದರೂ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

Advertisement

ಮರೋಳಿ ಸೂರ್ಯ ನಾರಾಯಣ ದೇವಸ್ಥಾನ ಕ್ರಾಸ್‌ ಕಡೆಯಿಂದ ಬರುವ ವಾಹನಗಳು ನಿಡ್ಡೇಲ್‌ ರಸ್ತೆಗೆ ಸಾಗಬೇಕಾದರೆ ಹೆದ್ದಾರಿಯಲ್ಲಿ ಕೆನರಾ ವರ್ಕ್‌ಶಾಪ್‌ ವರೆಗೆ ಸಾಗಿ ಯು-ಟರ್ನ್ ಮಾಡಿ ನಿಡ್ಡೇಲ್‌ರಸ್ತೆ ಸೇರಬೇಕು. ಆದರೆ ವಾಹನ ಚಾಲಕರು/ಸವಾರರು ಸುಲಭವಾಗಿ ಹೋಗಬೇಕು ಎಂದು, ಮರೋಳಿ ಕ್ರಾಸ್‌ನಿಂದ ನೇರವಾಗಿ ಹೆದ್ದಾರಿ ದಾಟಿ ಮೆಸ್ಕಾಂ ಮುಂಭಾಗದಲ್ಲಿ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಾಗಿ ನಿಡ್ಡೇಲ್‌ ರಸ್ತೆಯನ್ನು ಸೇರುತ್ತಾರೆ. ಬಿಕರ್ನಕಟ್ಟೆ ಕಡೆಯಿಂದ ಟ್ಯಾಂಕರ್‌, ಬೃಹತ್‌ ಟ್ರಕ್‌ ಸಹಿತ ಘನ ವಾಹನಗಳು ವೇಗವಾಗಿ ಸಾಗಿ ಬರುವಾಗ ಈ ರೀತಿ ವಿರುದ್ಧ ದಿಕ್ಕಿನಲ್ಲಿ ಸಾಗುವುದು ಅಪಾಯಕಾರಿಯಾಗಿದೆ.

ಮುಖ್ಯವಾಗಿ ಕಾರು, ಆಟೋ, ದ್ವಿಚಕ್ರ ವಾಹನಗಳು ಅತೀ ಹೆಚ್ಚಿನ ಸಂಖ್ಯೆಯಯಲ್ಲಿ ಇಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತವೆ.ಬೆಳಗ್ಗೆನಿಂದ ರಾತ್ರಿ ವರೆಗೂ ಒಂದೇ ರೀತಿಯ ಚಿತ್ರಣ ಕಂಡು ಬರುತ್ತದೆ. ಕೆಲವೊಮ್ಮೆ ಪೊಲೀಸರು ಸ್ಥಳದಲ್ಲಿದ್ದರೆ ಮಾತ್ರ ಸಂಚಾರ ನಿಯಮ ಪಾಲಿಸುತ್ತಾರೆ. ವಾಹನ ಸವಾರರು ತಾವೇ ಈ ರೀತಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಿಕೊಂಡು ಹೋಗುವ ಮೂಲಕ ಅಪಾಯಕ್ಕೆ ಆಹ್ವಾನ ತಂದುಕೊಳ್ಳುವ ಬಗ್ಗೆ ಪ್ರಜ್ಞಾವಂತ ನಾಗರಿಕರು ಆತಂಕ ವ್ಯಕ್ತಪಡಿಸಿದ್ದು, ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಸುರಕ್ಷಿತವಾಗಿ ವಾಹನ ಚಲಾಯಿಸುವಂತೆ ಪೊಲೀಸ್‌ ಇಲಾಖೆ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next