Advertisement
ದಿಢೀರ್ ಮಳೆಯಿಂದ ಕಾರು ಮತ್ತು ಬೈಕ್ ಸವಾರರು ಮತ್ತು ಬಸ್ ಪ್ರಯಾಣಿಕರಿಗೆ ಸಂಚಾರದಟ್ಟಣೆ ಬಿಸಿ ತಟ್ಟಿತು. ಆದರೆ, ಬಿಸಿಲಿನ ಝಳದಿಂದ ಕಂಗೆಟ್ಟಿದ್ದ ಜನರಿಗೆ ಸಂಜೆ ಮಳೆ ತಂಪೆರೆಯಿತು. ನಗರದ ಕನಿಷ್ಠ ಉಷ್ಣಾಂಶ ಒಂದೇ ದಿನದಲ್ಲಿ 3ರಿಂದ 4 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಿದ್ದು ಕಂಡುಬಂತು.
Related Articles
Advertisement
ಗಾಳಿಸಹಿತ ಮಳೆಗೆ ಇಂದಿರಾನಗರ 100 ಅಡಿ ರಸ್ತೆ, ಮಲ್ಲೇಶ್ವರ, ರಾಜರಾಜೇಶ್ವರಿ ನಗರ, ವಿಜಯನಗರ, ಹಲಸೂರಿನಲ್ಲಿ ಮರಗಳು ಧರೆಗುರುಳಿದವು. ಇದರಿಂದ ಆ ಭಾಗದಲ್ಲಿ ಸಂಚಾರ ಮಂದಗತಿಯಲ್ಲಿತ್ತು. ನಗರದ ಬಸವನಗುಡಿಯಲ್ಲಿ 20 ಮಿ.ಮೀ., ಕುಮಾರಸ್ವಾಮಿ ಲೇಔಟ್ 16.5, ಹೆಮ್ಮಿಗೆಪುರ 18, ನಾಗರಬಾವಿ 14, ಲಾಲ್‌ಬಾಗ್ 16, ಸಾರಕ್ಕಿ 12, ಕೆಂಗೇರಿ 12, ಎಚ್‌ಎಸ್‌ಆರ್ ಲೇಔಟ್ 10, ಕೊಡಿಗೇಹಳ್ಳಿ 13.5 ಮಿ.ಮೀ. ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.
ಇನ್ನೂ ಎರಡು ದಿನ ಮಳೆ?: ನಗರದಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಧ್ಯಪ್ರದೇಶ-ತೆಲಂಗಾಣ ಮತ್ತು ರಾಜ್ಯದ ಒಳನಾಡಿನ ನಡುವೆ ಕಡಿಮೆ ಒತ್ತಡದ ತಗ್ಗು (ಟ್ರಫ್) ಉಂಟಾಗಿದೆ. ಇದರಿಂದ ಮಳೆಯಾಗುತ್ತಿದ್ದು, ನಗರ ಸೇರಿದಂತೆ ಒಳನಾಡಿನಲ್ಲಿ ಇನ್ನೂ ಎರಡು ದಿನ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.