Advertisement
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಯುವಕರಲ್ಲಿ ಸಂಚಾರ ನಿಯಮ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 18ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರು ವಾಹನ ಚಾಲನೆ ಮಾಡುವುದು, ರಸ್ತೆಯಲ್ಲಿ ಉದ್ದೇಶಪೂರ್ವಕವಾಗಿ ಅಪಘಾತ ಮಾಡುವುದು ಶಿಕ್ಷಾರ್ಹ ಅಪರಾಧ, ಇದರಿಂದ ಭವಿಷ್ಯದಲ್ಲಿ ಯಾವುದೇ ಸರ್ಕಾರಿ ಉದ್ಯೋಗ ಸೇರಿದಂತೆ ಜೀವನದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆ ನೀಡಿದರು.
Related Articles
Advertisement
ಯುವಕ ಯುವತಿಯರಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಆಗಬೇಕು ಎಂದು ಹೇಳಿದರು. ಕಿರುಪುಸ್ತಕ ವಿತರಣೆ: ವಿದ್ಯಾರ್ಥಿಗಳಿಗೆ ಟ್ರಾದ್ದಾಕ್ ನಿಯಮಗಳ ಕಿರುಪುಸ್ತಕ ವಿತರಣೆ ಮಾಡಲಾಯಿತು. ಸಂಚಾರ ಠಾಣೆಯ ಸಿಬ್ಬಂದಿ ಪೂಜಾರ, ಪ್ರಾಂಶುಪಾಲ ಶಿವಶಂಕರ್ ಕೆ.ಎಸ್, ನಿಕಟಪೂರ್ವ ಅಧ್ಯಕ್ಷ ಆನಂದ್.ಎಸ್.ವಿ, ಕಾರ್ಯದರ್ಶಿ ವಾಸುದೇವ್, ಉಪಾಧ್ಯಕ್ಷ ವೇಣುಗೋಪಾಲ್ ,ಯೋಜನಾ ನಿರ್ದೇಶಕ ಗೋಪಾಲ್ , ಸದಸ್ಯರಾದ ಗಿರೀಶ್, ಎಚ್. ಪಿ.ಪ್ರಕಾಶ್ , ಮಂಜುನಾಥ್, ಎಸ್.ವಿ.ಅರವಿಂದ್, ಬಾಬು ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸಿ: ಲಕ್ಷ್ಮಣ್ ನಾಯಕ್ ಸಂಚಾರ ಕಾನೂನುಗಳು ಕ್ರಿಮಿನಲ್ ಕಾನೂನುಗಳಷ್ಟೇ ಬಲಿಷ್ಠವಾಗಿದೆ. ಸಂಚಾರ ಕಾನೂನುಗಳ ಉಲ್ಲಂಘನೆ ಶಿಕ್ಷಾರ್ಹ ಅಪರಾಧ. ವಾಹನಗಳನ್ನು ಸಂಚಾರ ಮಾಡುವಾಗ ಅನಾಹುತ ಸಂಭವಿಸದಂತೆ ವಹಿಸುವ ಮುನ್ನೆಚ್ಚರಿಕೆ ಕ್ರಮಗಳು ನಿಯಮಗಳಾಗಿವೆ. ಪ್ರತಿಯೊಬ್ಬರೂ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಪಘಾತಗಳು ನಡೆಯದಂತೆ ಸಂಚಾರ ನಡೆಸಿ ಜನರ ಜೀವಗಳನ್ನು ಉಳಿಸಬೇಕು ಎಂದು ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಲಕ್ಷ್ಮಣ್ ನಾಯಕ್ ಹೇಳಿದರು.