Advertisement

ಗ್ರಹಣ ಪತ್ತೆಗೆ ಸಾಂಪ್ರದಾಯಿಕ ಪದ್ಧತಿ

12:11 PM Dec 27, 2019 | Suhan S |

ಕೊಳ್ಳೇಗಾಲ: ಕಂಕಣ ಗ್ರಹಣ ಹಿನ್ನೆಲೆಯಲ್ಲಿ ತಾಲೂಕಿನ ಉಗನಿಯ ಗ್ರಾಮದ ಕುಮಾರ್‌ ಅವರು ತಟ್ಟೆಗೆ ನೀರು ತುಂಬಿ ಒನೆಕೆವೊಂದನ್ನು ನೇರವಾಗಿ ನಿಲ್ಲಿಸಿ ಗ್ರಾಮಸ್ಥರಲ್ಲಿ ವಿಸ್ಮಯ ಉಂಟು ಮಾಡಿರುವ ಪ್ರಸಂಗ ಗುರುವಾರ ನಡೆದಿದೆ.

Advertisement

ಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಗ್ರಹಣ ಆರಂಭವಾಗುತ್ತಿದ್ದಂತೆ ನೀರು ತುಂಬಿದ ತಟ್ಟೆಯಲ್ಲಿ ಪೂಜೆ ಮಾಡಿದ ಒನಕೆಯನ್ನು ನೇರವಾಗಿ ನಿಲ್ಲಿಸುತ್ತಿದ್ದಂತೆ ಒನಕೆ ನಿಲ್ಲುತ್ತದೆ. ಸೂರ್ಯಗ್ರಹಣ ಬಿಟ್ಟ ಕೂಡಲೇ ಒನಕೆ ಭೂಮಿಯ ಮೇಲೆ ಬೀಳುತ್ತದೆ. ಇದರಿಂದ ಸೂರ್ಯನ ಗ್ರಹಣ ಹಿಡಿದಿದೆ ಎಂದು ತಲಾತಲಾರಂತರದಿಂದ ಕಂಡುಕೊಂಡಿರುವ ಹಳೆಯ ವಿಸ್ಮಯ ಎಂದಿದ್ದಾರೆ.

ವೈಜ್ಞಾನಿಕ ಯುಗದಲ್ಲಿ ಕಂಕಣ ಸೂರ್ಯಗ್ರಹಣವನ್ನು ವೀಕ್ಷಣೆ ಮಾಡಿದರೂ ಏನು ಆಗುವುದಿಲ್ಲ ಎಂದು ಎಷ್ಟೇ ಸಂದೇಶ ನೀಡಿದರೂ ಸಹ ಜನರು ಗ್ರಹಣಕ್ಕೆ ಹೆದರಿ ಮನೆಯಿಂದ ಈಚೆಗೆ ಬರದೆ ಮನೆಯಲ್ಲಿಯೇ ಟಿವಿ ವೀಕ್ಷಣೆ ಮಾಡಿ ಕುಳುತ್ತಿದ್ದರಿಂದ ನಗರ ಪ್ರದೇಶಗಳಲ್ಲಿರುವ ಅಂಗಡಿ ಮತ್ತು ಬಸ್‌ ನಿಲ್ದಾಣದಲ್ಲಿ ಜನಗಳ ದಟ್ಟಣೆ ಕಡಿಮೆಯಾಗಿತ್ತು.

ಸಾರ್ವಜನಿಕರು ಗ್ರಹಣಕ್ಕೆ ಹೆದರಿ ಗಂಟೆಗಟ್ಟಲೆ ಮನೆ ಸೇರಿ ನಂತರ ಮಡಿಮಾಡಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ನಂತರವೇ ಊಟ,ಉಪಚಾರಕ್ಕೆ ಮುಂದಾಗಿರುವುದು ವಿಜ್ಞಾನ ಇನ್ನು ಜನರಿಗೆ ಮನದಟ್ಟು ಆಗಿಲ್ಲದಂತೆ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next