Advertisement
ವಿಧಾನಸೌಧದ ಸಮಿತಿ ಕೊಠಡಿ ಯಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ “ಪುನೀತ ಯಾತ್ರೆ’ಗೆ ಚಾಲನೆ ನೀಡಿ ಶುಭ ಹಾರೈಸಿ ಮಾತನಾಡಿದ ಸಿಎಂ, “ಈ ಯೋಜನೆ ರಾಜ್ಯದ ಜನತೆಗೆ ಸರ್ಕಾರದ ದಸರಾ ಹಬ್ಬದ ಕೊಡುಗೆ. ರಾಜ್ಯ ಮತ್ತು ಹೊರ ರಾಜ್ಯದ ಧಾರ್ಮಿಕ, ಪಾರಂಪರಿಕ ಮತ್ತು ಐತಿಹಾಸಿಕ ಸ್ಥಳಗಳಿಗೆ ರಿಯಾಯತಿ ದರದಲ್ಲಿ ರಾಜ್ಯದ ಜನರನ್ನು ಕರೆದುಕೊಂಡು ಹೋಗು ವುದು ಪುನೀತ ಯಾತ್ರೆಯ ಉದ್ದೇಶ. ಈಗಾಗಲೇ ಪ್ರವಾಸೋದ್ಯಮ ಇಲಾಖೆ 21 ಮಾರ್ಗಗಳನ್ನು ಗುರುತಿಸಿದೆ. ಈ ವರ್ಷ 1.38 ಲಕ್ಷ ಪ್ರವಾಸಿಗರನ್ನು ಪುನೀತ ಯಾತ್ರೆಗೆ ಕರೆದೊಯ್ಯುವ ಗುರಿ ಇಟ್ಟುಕೊಳ್ಳಲಾಗಿದೆ. ಪ್ರತಿ ಯೊಬ್ಬರಿಗೆ ಸರ್ಕಾರ 2,844 ರೂ. ನೆರವು ನೀಡಲಿದ್ದು, ಉಳಿದ ವೆಚ್ಚವನ್ನು ಪ್ರವಾಸಿಗರು ಭರಿಸಿಕೊಳ್ಳಬೇಕು’ ಎಂದರು. ಇದೇ ವೇಳೆ ಪುನೀತ ಯಾತ್ರೆಯ ಕೈಪಿಡಿಯನ್ನು ಅವರು ಬಿಡುಗಡೆಗೊಳಿಸಿದರು.
ದರದಲ್ಲಿ ಪುನೀತ ಯಾತ್ರೆಯ ಅಡಿಯಲ್ಲಿ ಧಾರ್ಮಿಕ, ಪಾರಂಪರಿಕ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ಪ್ರಯಾಣ ಮತ್ತು ವಸತಿ ಸೌಲಭ್ಯವನ್ನು ಇಲಾಖೆ ವ್ಯವಸ್ಥೆ ಮಾಡಲಿದ್ದು, ಊಟದ ವ್ಯವಸ್ಥೆಯನ್ನು ಪ್ರವಾಸಿಗರು ಮಾಡಿ ಕೊಳ್ಳಬೇಕು. ವಿವಿಧ ಧರ್ಮಗಳ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದಾಗ ಶೀಘ್ರ ದರ್ಶನ ವ್ಯವಸ್ಥೆ ಮಾಡಿಸಲಾ ಗುವುದು. 21 ತಾಣಗಳ ಪೈಕಿ ಇಂದಿನಿಂದ 9 ತಾಣಗಳಿಗೆ ಪುನೀತ ಯಾತ್ರೆ ಆರಂಭವಾಗಿದ್ದು, 2ನೇ ಹಂತದಲ್ಲಿ 12 ತಾಣಗಳಿಗೆ ಪ್ರವಾಸ ಏರ್ಪಡಿಸ ಲಾಗುವುದು. ಈ ಪೈಕಿ 8 ಹೊರ ರಾಜ್ಯಗಳ ತಾಣಗಳಾಗಿದ್ದು, ಬೆಂಗಳೂರು ಮತ್ತು ಕಲಬುರಗಿಯಿಂದ ಪ್ರವಾಸಿಗರನ್ನು ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ’ ಎಂದರು. ಎಲ್ಲೆಲ್ಲಿಗೆ ಪ್ರವಾಸ ಪ್ಯಾಕೇಜ್?
ಮೊದಲ ಹಂತದಲ್ಲಿ ಬೇಲೂರು-ಹಳೇ ಬೀಡು, ಶ್ರವಣಬೆಳಗೂಳ, ಉತ್ತರ ಕರ್ನಾಟಕದ ಕ್ಷೇತ್ರಗಳಲ್ಲದೇ ತಿರುಪತಿ, ಕಾಳಹಸ್ತಿ, ಮಂತ್ರಾಲಯ ಮತ್ತು ಶಿರಡಿ ಪ್ರವಾಸದ ಪ್ಯಾಕೇಜ್ ಇದೆ. ಅ.15ರಿಂದ ಎರಡನೇ ಹಂತದಲ್ಲಿ ರಾಜ್ಯದ ಇತಿಹಾಸ ಪ್ರಸಿದ್ಧ ದೇವಾಲಯ, ಚರ್ಚ್, ಮಸೀದಿಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ಗಾಣಗಾಪುರ, ದತ್ತಾತ್ರೇಯ ಮಳಖೇಡ ರಾಘ ವೇಂದ್ರ, ಸನ್ನತಿ ಚಂದ್ರಲಾಂಬಮ್ಮ, ಸವದತ್ತಿ ಯಲ್ಲಮ್ಮ, ಶರಣಬಸವರ ಪವಿತ್ರ ಸ್ಥಳಗಳ ದರ್ಶನ ಇರಲಿದೆ. ನಂಜನಗೂಡು, ಬಾಬುಡನ್‌ಗಿರಿ, ಆದಿಚುಂಚನಗಿರಿ, ಗೋಕರ್ಣ, ಶಿರಸಿ ಮಾರಿಕಾಂಬೆ, ಶಿರಡಿ, ಶಬರಿಮಲೆ, ಮಧುರೆಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
Related Articles
Advertisement
ಸಿದ್ದರಾಮಯ್ಯ, ಮುಖ್ಯಮಂತ್ರಿ