Advertisement

ನೂರ್ತಾಡಿ ಯುವಕರಿಂದ ಸಾಂಪ್ರಾದಾಯಿಕ ಪದ್ಧತಿ ಬೇಸಾಯ

08:10 PM Jul 07, 2020 | sudhir |

ಪುಂಜಾಲಕಟ್ಟೆ : ಕೋವಿಡ್ ಮಹಾಮಾರಿಯ ತೊಂದರೆಗಳ ನಡುವೆ ಕೃಷಿ ಕಾರ್ಯಗಳು ಮುಂದುವರೆದಿದ್ದು, ಯುವಕರೂ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬಂಟ್ವಾಳ ತಾಲೂಕಿನ ದೇವಸ್ಯ ಪಡೂರು ಗ್ರಾಮದ ಅಲ್ಲಿಪಾದೆ ಸಮೀಪದ ನೂರ್ತಾಡಿಯ ಗದ್ದೆಯಲ್ಲಿ ಭತ್ತ ಕೃಷಿ ಮಾಡುವ ಮೂಲಕ ಯುವಕರು ಗಮನ ಸೆಳೆದಿದ್ದಾರೆ.

Advertisement

ಇಲ್ಲಿನ ಚಂದ್ರಹಾಸ ನೂರ್ತಾಡಿ ಅವರ ಕುಟುಂಬ ಸುಮಾರು ಕಾಲದಿಂದ ಸಾಗುವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಯುವಕರು ಉದ್ಯೋಗ ನಿಮಿತ್ತ ಪಟ್ಟಣ ಸೇರಿದ್ದಾರೆ. ಈ ಬಾರಿ ಕೋವಿಡ್ ಕಾರಣದಿಂದ ಯುವಕರೂ ಗದ್ದೆಗಿಳಿದು ಕೃಷಿಕಾರ್ಯದಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ. ಒಂದೆಡೆ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಬೇಸಾಯ ನಡೆಸಿದ್ದಾರೆ.

ವಿಶೇಷವೆಂದರೆ ಇವರು ಆಧುನಿಕ ಯಾಂತ್ರೀಕೃತ ಬೇಸಾಯ ಪದ್ಧತಿಯನ್ನು ಬಿಟ್ಟು ಅಪರೂಪವಾದ ಸಾಂಪ್ರದಾಯಿಕ ಪದ್ಧತಿಯಿಂದ ಕೃಷಿ ಕಾರ್ಯ ನಡೆಸಿದ್ದಾರೆ. ಸುಮಾರು ಮೂರೂವರೆ ಎಕರೆ ಗದ್ದೆಯನ್ನು ಕಂಬಳದ ಕೋಣಗಳನ್ನು ಬಳಸಿ ಉಳುಮೆ ಮಾಡಿದ್ದಾರೆ. ಬಳಿಕ ಊರ ಜನರ ಸಹಕಾರದಲ್ಲಿ ನಾಟಿ ಕಾರ್ಯ ನಡೆಸಲಾಗಿದೆ.

ಕೂಲಿಯಾಳುಗಳ ಸಮಸ್ಯೆ ನಡುವೆ ಕೃಷಿಯಿಂದ ಜೀವನ ಎಂದರಿತ ಯುವಕರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡದ್ದು ಸಹಕಾರಿಯಾಗಿದ್ದು, ಮೆಚ್ಚುಗೆ ಗಳಿಸಿದ್ದಾರೆ.

Advertisement

ಕೂಲಿಯಾಳುಗಳ ಸಮಸ್ಯೆಯಿಂದ ಬೇಸಾಯ ಕಷ್ಟಕರವಾಗಿದ್ದು, ಊರಿನ ಯುವಕರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಇಂತಹ ಮಾದರಿ ಕಾರ್ಯಕ್ಕೆ ಮುಂದಾಗಿರುವುದು ಇತರರಿಗೆ ಕೃಷಿಯಲ್ಲಿ ಆಸಕ್ತಿ ಮೂಡಿಸುವಂತಾಗಿದೆ.
-ಚಂದ್ರಹಾಸ ನೂರ್ತಾಡಿ, ಗದ್ದೆ ಮಾಲಕರು

Advertisement

Udayavani is now on Telegram. Click here to join our channel and stay updated with the latest news.

Next