Advertisement
ನಾಗರಪಂಚಮಿ, ವರಮಹಾಲಕ್ಷ್ಮೀ ಹಬ್ಬ ಕಳೆದು, ಇದೀಗ ಅಷ್ಟಮಿಗೆ ದಿನ ಗಣನೆ ಶುರುವಾಗಿದೆ. ಆ. 23ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿಗೆಂದು ನಗರದ ದೇವಸ್ಥಾನ, ಸಂಘ-ಸಂಸ್ಥೆಗಳಲ್ಲಿ ವಿಶೇಷ ಸಿದ್ಧತೆಗಳು ನಡೆಯುತ್ತಿವೆ.
Related Articles
ಘಾಟಿ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು, ಹಾಸನ, ಮೈಸೂರು ಕಡೆಯಿಂದ ನಗರಕ್ಕೆ ತರಕಾರಿ ತರಲು ಸಾಧ್ಯವಾಗದಿರುವುದರಿಂದ ತರಕಾರಿ ಬೆಲೆ ಏರಿಕೆಯಾಗಿದೆ. ಅಷ್ಟಮಿಯ ಅಡುಗೆಗೆ ತರಕಾರಿ ಬೆಲೆ ಒಂದಷ್ಟು ಶಾಕ್ ನೀಡಿದೆ. ಕೆಜಿಗೆ 100 ರೂ.ಗಳಿದ್ದ ಊರಿನ ಬೆಂಡೆಯ ಬೆಲೆ ಪ್ರಸ್ತುತ 240 ರೂ.ಆಗಿದೆ. 80 ರೂ.ಗಳಿದ್ದ ಹಾಗಲಕಾಯಿಗೆ 100 ರೂ., 50 ರೂ.ಗಳಿದ್ದ ಹೀರೆಕಾಯಿ ಬೆಲೆ 100 ರೂ.ಗಳಾಗಿವೆ. ಮಳೆಯಿಂದಾಗಿ ಬೆಳೆ ಹಾನಿಯಾದ ಹಿನ್ನೆಲೆಯಿಂದ ಬೆಲೆ ಏರಿಕೆ ಆಗಿದೆ ಎನ್ನುತ್ತಾರೆ ವ್ಯಾಪಾರಸ್ಥ ಡೇವಿಡ್. ತರಕಾರಿ ಬೆಲೆ ಏರಿಕೆಯಾದರೂ ಹಣ್ಣಿನ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ ಎಂದು ವ್ಯಾಪಾರಸ್ಥ ಬಶೀರ್ ತಿಳಿಸಿದ್ದಾರೆ.
Advertisement
ಮೂಡೆಅಷ್ಟಮಿಗೆ ಮೂಡೆ ತಯಾರಿಸುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಮೂಡೆ ಖರೀದಿಸುವವರ ಸಂಖ್ಯೆಯೂ ಹೆಚ್ಚಿರುತ್ತದೆ. ಅದಕ್ಕಾಗಿಯೇ ವ್ಯಾಪಾರಸ್ಥರು ಮೂಡೆ ಯನ್ನೂ ಮಾರಾಟಕ್ಕಿಟ್ಟಿದ್ದಾರೆ. ಪ್ರಸ್ತುತ ಮೂಡೆ ಖರೀ ದಿಗೆ ಜನ ಬರುತ್ತಿಲ್ಲ. ಗುರುವಾರ ಜನ ಖರೀದಿ ಮಾಡಬಹುದು ಎನ್ನುತ್ತಾರೆ ವ್ಯಾಪಾರಸ್ಥರು.