Advertisement
ಅಂದರೆ, ಬೋರಿಕ್ ಆ್ಯಸಿಡ್, ಅವರೆ (ಲೆಂಟಿಲ್) ಸಹಿತ 30 ವಸ್ತುಗಳ ಪಟ್ಟಿಯನ್ನು ವಿಶ್ವ ವ್ಯಾಪಾರ ಸಂಸ್ಥೆಗೆ ಕಳುಹಿಸಿಕೊಟ್ಟಿದೆ. ಯಾವ ಪದಾರ್ಥಕ್ಕೆ ಎಷ್ಟು ತೆರಿಗೆ ಹಾಕುತ್ತೇವೆ ಎಂದು ಈ ಪಟ್ಟಿಯಲ್ಲಿ ಮಾಹಿತಿ ನೀಡಲಾಗಿದ್ದು, ಈ ಸಂಬಂಧ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಸಿಗಡಿ ಮೇಲಿನ ತೆರಿಗೆಯನ್ನು ಶೇ.30ಕ್ಕೇರಿಸಲಾಗಿದ್ದರೆ, ಕಡಲೆ, ಕಡಲೆ ಬೇಳೆ, ತೊಗರಿ ಬೇಳೆಯ ಮೇಲಿನ ತೆರಿಗೆ ಶೇ.70ಕ್ಕೆ ಏರಿಸಲಾಗಿದೆ. ಇದರ ಜತೆಯಲ್ಲಿ ಸೇಬು, ಬಾದಾಮಿ ಮೇಲೂ ಹೆಚ್ಚುವರಿ ತೆರಿಗೆ ವಿಧಿಸಲಾಗಿದೆ.
ಅಮೆರಿಕ ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ದರ ಏರಿಕೆ ಮಾಡಿದ್ದನ್ನು ವಿರೋಧಿಸಿ ಈಗಾಗಲೇ ವಿಶ್ವ ವ್ಯಾಪಾರ ಸಂಸ್ಥೆಗೆ ದೂರು ನೀಡಿರುವ ಭಾರತ, ತಾನೂ ಅಮೆರಿಕದಿಂದ ಆಮದಾಗುವ ನಟ್, ಬೋಲ್ಟ್, ಸ್ಕ್ರ್ಯು ಸಹಿತ ಹಲವಾರು ವಸ್ತುಗಳ ಮೇಲೆ ಇನ್ನಷ್ಟು ಆಮದು ಸುಂಕ ವಿಧಿಸಿದೆ.ಅಮೆರಿಕವು ತಾನು ಆಮದು ಮಾಡಿಕೊಳ್ಳುತ್ತಿರುವ ಸರಕುಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಮೂಲಕ ಈ ವ್ಯಾಪಾರ ಸಮರಕ್ಕೆ ನಾಂದಿ ಹಾಡಿತ್ತು. ತದನಂತರ ಐರೋಪ್ಯ ಒಕ್ಕೂಟ ಹಾಗೂ ಚೀನ ಕೂಡ ತಿರುಗೇಟು ನೀಡಿ ಅಮೆರಿಕದ ಉತ್ಪನ್ನಗಳಿಗೆ ಆಮದು ಸುಂಕ ಹೆಚ್ಚಳ ಮಾಡಿದ್ದವು.