Advertisement

ವ್ಯಾಪಾರ ಪರವಾನಗಿ ಪಡೆಯಲು ಸೂಚನೆ

01:24 PM Mar 09, 2022 | Team Udayavani |

ಶಿಡ್ಲಘಟ್ಟ: ನಗರಸಭೆಯ ವ್ಯಾಪ್ತಿಯಲ್ಲಿರುವಅಂಗಡಿ ಮುಂಗಟ್ಟುಗಳು ಮತ್ತು ಉದ್ದಿಮೆಗಳು ಪರವಾನಿಗೆಯನ್ನು ಪಡೆದುಕೊಂಡುವ್ಯಾಪಾರ ವಹಿವಾಟು ನಡೆಸಬೇಕು ಇಲ್ಲದಿದ್ದ ಪಕ್ಷದಲ್ಲಿ ಪುರಸಭೆಯ ಕಾಯ್ದೆಯಡಿ ಸೂಕ್ತಕ್ರಮ ಜರುಗಿಸಲಾಗುವುದೆಂದು ನಗರಸಭೆ ಪೌರಾಯುಕ್ತ ಶ್ರೀಕಾಂತ್‌ ಎಚ್ಚರಿಸಿದ್ದಾರೆ.

Advertisement

ನಗರದ ವಿವಿಧಡೆ ನಗರಸಭೆ ಸಿಬ್ಬಂದಿ ಯೊಂದಿಗೆ ಟ್ರೇಡ್‌ ಲೈಸನ್ಸ್‌ ನೀಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರಸಭೆಯ ವ್ಯಾಪ್ತಿಯಲ್ಲಿ ಪುರಸಭೆ ಕಾಯ್ದೆಯಡಿ ಸಂಪನ್ಮೂಲ ಕ್ರೋಢೀಕರಣಕ್ಕೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ,ವಾಣಿಜ್ಯ ಮಳಿಗೆ ಮತ್ತು ಟ್ರೇಡ್‌ಲೈಸನ್ಸ್‌ ಸಹಿತ ಇನ್ನೂ ಹಲವಾರು ಮೂಲಗಳಿಂದ ಸಂಗ್ರಹಕಾರ್ಯ ನಡೆದಿದೆ. 6 ತಿಂಗಳಿಂದ ವರ್ತಕರಿಗೆಮಾಹಿತಿ ನೀಡಿ ನೋಟಿಸ್‌ ಸಹ ಜಾರಿಗೊಳಿಸಿದ್ದೇವೆ ಕಾಲಾವಧಿ ಮೀರಿದೆ ಇಂದಿನಿಂದ ನಗರದಲ್ಲಿ ಟ್ರೇಡ್‌ ಲೈಸನ್ಸ್‌ ಪಡೆಯಲು ಕಾರ್ಯಾಚರಣೆ ಮಾಡಿದ್ದೇವೆ ಸಹಕರಿಸಬೇಕೆಂದರು.

ಮುಂದುವರಿದು ನಗರದ ಎಲ್ಲಾ ವಾರ್ಡ್‌ಗಳಲ್ಲಿ ಇದೇ ರೀತಿಯ ಕಾರ್ಯಚರಣೆ ಮಾಡುತ್ತೇವೆ ನಿನ್ನೆಯಿಂದ ರೈಲ್ವೆ ಹಳಿಯಮೇಲ್ಭಾಗದಲ್ಲಿ ಕಂದಾಯ ವಸೂಲಿ ಮಾಡುವಕಾರ್ಯವನ್ನು ಆರಂಭಿಸಿದ್ದೇವೆ ಎಂದರು.

ನಗರಸಭೆಯ ವ್ಯವಸ್ಥಾಪಕ ಶಿವಶಂಕರ್‌,ಆರೋಗ್ಯ ನಿರೀಕ್ಷಕ ವಿಜಯಕುಮಾರ್‌,ರಾಜಸ್ವ ನಿರೀಕ್ಷಕ ಶ್ರೀಕಂಠಚಾರ್ಯ,ನೀರುಸರಬರಾಜು ವಿಭಾಗದ ಮುರಳಿ ಮತ್ತುಸಿಬ್ಬಂದಿ ಉಪಸ್ಥಿತರಿದ್ದರು.

ಅಂಗಡಿ ಮುಂದೆಯೇ ಧರಣಿ: ನಗರಸಭೆಯ ಪೌರಾಯುಕ್ತ ಮತ್ತು ಸಿಬ್ಬಂದಿ ಕಾರ್ಯಚರಣೆವೇಳೆಯಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದರಿಂದ ನಗರಸಭೆಯ ಸಿಬ್ಬಂದಿ ಅಂಗಡಿ ಮುಂದೆಯೇ ಧರಣಿ ಕುಳಿತರು.ನಂತರ ಟ್ರೇಡ್‌ ಲೈಸನ್ಸ್‌ ಪಡೆಯುವುದಾಗಿಹೇಳಿದ ನಂತರ ಧರಣಿ ವಾಪಸ್‌ ಪಡೆದು ಕಾರ್ಯಚರಣೆಯನ್ನು ಮುಂದುವರಿಸಿದರು.

Advertisement

ನಗರಸಭೆ ಸದಸ್ಯನ ವಿರುದ್ದ ಜಾತಿನಿಂದನೆ ಕೇಸ್‌ :

ನಗರಸಭೆಯಲ್ಲಿ ನನ್ನ ಮೇಲೆ ಜಾತಿನಿಂದನೆ ಕೇಸು ಹಾಕಿದ್ದ ಸಂದರ್ಭದಲ್ಲಿ ನಮ್ಮ ಬೆಂಬಲಕ್ಕೆ ತಾವು ಯಾಕೆ ಬಂದಿಲ್ಲವೆಂದು ನಗರಸಭೆಯ ಸದಸ್ಯ ಮಂಜುನಾಥ್‌ ಅಸಮಾಧಾನವ್ಯಕ್ತಪಡಿಸಿದರು. ನಾನು ಜಾತಿ ನಿಂದನೆ ಮಾಡಿರುವುದು ತೋರಿಸಲಿ ನೀವು (ನಗರಸಭೆಯಸಿಬ್ಬಂದಿ-ಅಧಿಕಾರಿಗಳು) ನನಗೆ ಬೆಂಬಲ ನೀಡಿದರೆ ನಾನು ವರ್ತಕರನ್ನು ಮನವೊಲಿಸಿ ಟ್ರೇಡ್‌ ಲೈಸನ್ಸ್‌ ಪಡೆಯುವಂತೆ ಮಾಡುತ್ತಿದ್ದೆ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next