ಬಾಗಲಕೋಟೆ: ಟ್ಯಾಕ್ಟರ್ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತ ಪಟ್ಟಿರುವ ಘಟನೆ ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ತುಂಬ ಗ್ರಾಮದ ಬಳಿ ಸೋಮವಾರ ನಡೆದಿದೆ.
ಮೃತಪಟ್ಟವರನ್ನು ಶಿವಕುಮಾರ್ ಲಿಂಗಪ್ಪ ಕಿಡದೂರು (30 ವ) ಹಾಗೂ ಪ್ರಭುಸ್ವಾಮಿ ಶಿವಲಿಂಗಯ್ಯ ಹೊಸಮಠ (40 ವ) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ತಲಪಾಡಿಯಲ್ಲಿ ಮರಳು ಸಾಗಾಟದ ಟಿಪ್ಪರ್ ಪಲ್ಟಿ: ಪವಾಡಸದೃಶ ರೀತಿಯಲ್ಲಿ ಪಾರಾದ ಪಾದಚಾರಿ ಮಹಿಳೆ
ಸಿಂಧನೂರಿನಿಂದ ಬೀಳಗಿ ತಾಲ್ಲೂಕಿನ ಬಾಡಗಂಡಿ ಶುಗರ್ ಫ್ಯಾಕ್ಟರಿಗೆ ಸಿಮೆಂಟ್ ಕಂಬಗಳನ್ನು ತೆಗೆದುಕೊಂಡು ಹೋಗುತ್ತಿರುವಾಗ ತುಂಬ ಕ್ರಾಸ್ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ.
ಸ್ಥಳಕ್ಕೆ ಇಳಕಲ್ ಗ್ರಾಮೀಣ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ,ಪರಿಶೀಲನೆ ನಡೆಸಿದ್ದಾರೆ.