ಬೆಂಗಳೂರು: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಸೇರಿದಂತೆ, ಹಲವು ಸಂಘ ಸಂಸ್ಥೆಗಳು ಇಂದು ಬೆಂಗಳೂರಿನಲ್ಲಿ ಟ್ರಾಕ್ಟರ್ ಪರೇಡ್ ನಡೆಸಲಿದೆ.
ರಾಜ್ಯ ವಿವಿಧ ಭಾಗದಿಂದ ರಾಜಧಾನಿ ಬೆಂಗಳೂರಿಗೆ ರೈತರು ಆಗಮಿಸಿದ್ದು, ಸಾವಿರಾರು ರೈತರು ಸೇರಿ ಪ್ರತಿಭಟನೆ ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ಬಿಗಿ ಭದ್ರತೆ ಮಾಡಲಾಗಿದೆ.
ಇದನ್ನೂ ಓದಿ:LIVE ದೇಶದಲ್ಲಿಂದು 72ನೇ ಗಣರಾಜ್ಯೋತ್ಸವ ಸಂಭ್ರಮ; ಶುಭ ಹಾರೈಸಿದ ರಾಷ್ಟ್ರಪತಿ, ಪ್ರಧಾನಿ
ರೈತರ ರಾಲಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಟ್ರಾಕ್ಟರ್ ಗಳು ಜಿಲ್ಲಾ ಗಡಿ ದಾಟದಂತೆ ತಡೆಯಲು ಸೂಚಿಸಲಾಗಿದೆ. ದಿಲ್ಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ಗೆ ಅನುಮತಿ ನೀಡಲಾಗಿದೆ, ನಮ್ಮಲ್ಲಿ ಯಾಕಿಲ್ಲ ಎಂದು ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಬೆಂಗಳೂರಿನ ಹೊರವಲಯದ ನೈಸ್ ಜಂಕ್ಷನ್ ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ಮಾಡಲು ರೈತರು ನಿರ್ಧರಿಸಿದ್ದಾರೆ. ಒಂದು ವೇಳೆ ಪೊಲೀಸರು ರೈತರನ್ನು ತಡೆದರೆ ಸತ್ಯಾಗ್ರಹ ನಡೆಸಲು ರೈತರು ತೀರ್ಮಾನ ಮಾಡಿದ್ದಾರೆ.
ಇದನ್ನೂ ಓದಿ: ಸಾಧನೆಯ ವೈದ್ಯ ಡಾ| ಬಿ.ಎಂ. ಹೆಗ್ಡೆ
ಟ್ರ್ಯಾಕ್ಟರ್ ಜಪ್ತಿ ಮಾಡಿದರೆ ಅದನ್ನು ನಾವೇ ಬಿಡಿಸಿಕೊಡಲು ಹೋಗುತ್ತೇವೆ. ಕೇಸ್ ಹಾಕಿದರೆ, ಜೈಲ್ ಭರೋ ಚಳುವಳಿ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.