ವಿಜಯಪುರ: ಸಂಬಂಧಿಯೋರ್ವರ ಅಂತ್ಯಕ್ರಿಯೆಗೆ ಹೊರಟಿದ್ದವರ ಡಬಲ್ ಟ್ರಾಲಿ ಟ್ಯಾಕ್ಟರ್ ಪಲ್ಟಿಯಾಗಿ 15 ಜನ ಗಂಭೀರ ಗಾಯಗೊಂಡಿರುವ ಘಟನೆ ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಳೆಮಸೂತಿ ಬಳಿ ಸಂಭವಿಸಿದೆ.
ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಟ್ರ್ಯಾಕ್ಟರ್ ಡಿಕ್ಕಿಯಾಗಿದ್ದು ಇದರ ರಭಸಕ್ಕೆ ಪಲ್ಟಿಯಾಗಿ, ಟ್ರ್ಯಾಕ್ಟರ್ ನಲ್ಲಿದ್ದ 15ಕ್ಕೂ ಹೆಚ್ಚು ಜನರಿಗೆ ಗಾಯವಾಗದೆ.
ಇಬ್ಬರಿಗೆ ವಿದ್ಯುತ್ ತಂತಿ ತಾಗಿ ಗಂಭೀರ ಗಾಯಗೊಂಡಿದ್ದಾರೆ. ಉಳಿದವರು ಟ್ರ್ಯಾಕ್ಟರ್ ಪಟ್ಟಿಯಿಂದ ಗಾಯ ಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ವಿಜಯಪುರ, ಬಾಗಲಕೋಟೆ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.
ಬೂದಿಹಾಳದಿಂದ ಸಿದ್ದಾಪುರಕ್ಕೆ ಅಂತ್ಯಕ್ರಿಯೆಗೆ ಹೊರಟಿದ್ದಾಗ ಈ ದುರ್ಘಟನೆ ಸಂಭಿಸಿದ್ದು, ಸಂಭಂದಿಯ ಅಂತ್ಯಕ್ರಿಯೆಗೆ ಹೊರಟಿದ್ದವರು ಆಸ್ಪತ್ರೆ ಸೇರುವಂತಾಗಿದೆ.
ಟ್ರ್ಯಾಕ್ಟರ್ ಡಿಕ್ಕಿ ಬಳಿಕ ವಿದ್ಯುತ್ ವೈರ್ ತುಂಡಾಗಿ ಸಂಪರ್ಕ ಕಡಿತವಾದ ಹಿನ್ನೆಲೆ ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ.