Advertisement

ಓವರ್ ಲೋಡ್ ಆಗಿ ಹಿಮ್ಮುಖವಾಗಿ ಚಲಿಸಿದ ಟ್ರ್ಯಾಕ್ಟರ್ ಪಲ್ಟಿ!

03:57 PM Aug 22, 2021 | Team Udayavani |

ಚಿಕ್ಕಮಗಳೂರು: ಓವರ್ ಲೋಡ್ ಆಗಿ ಟ್ರ್ಯಾಕ್ಟರೊಂದು ಹಿಮ್ಮುಖವಾಗಿ ಪಲ್ಟಿಯಾದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಬಳಿ ನಡೆದಿದೆ.

Advertisement

ರಸ್ತೆಯ ಏರಿ ಹತ್ತುವ ವೇಳೆ ಚಕ್ರ ಪಂಕ್ಷರ್ ಆದ ಕಾರಣ ಟ್ರಾಕ್ಟರ್ ಹಿಮ್ಮುಖವಾಗಿ ಸಂಚರಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಆದರೆ ಅದೃಷ್ಟವಶಾತ್ ಟ್ರ್ಯಾಕ್ಟರ್‍ನಿಂದ ಜಿಗಿದು ಚಾಲಕ ಜೀವ ಉಳಿಸಿಕೊಂಡಿದ್ದಾನೆ.

ಇದನ್ನೂ ಓದಿ:ಅಫ್ಘಾನಿಸ್ತಾನದಲ್ಲಿ ಉಗ್ರರು ಯಾರು, ಜನಸಾಮಾನ್ಯರು ಯಾರೆಂದು ತಿಳಿಯುವುದೇ ಕಷ್ಟ

ಟ್ಯಾಕ್ಟರ್ ಮರದ ತುಂಡುಗಳನ್ನು ಹೇರಿಕೊಂಡು ಸಾಗುತ್ತಿತ್ತು. ಪಲ್ಟಿಯಾದ ಟ್ರ್ಯಾಕ್ಟರ್ ಸಂಪೂರ್ಣ ಜಖಂ ಆಗಿದೆ. ಟ್ರ್ಯಾಕ್ಟರ್ ಹಿಂದೆ ವಾಹನಗಳಿದ್ದಿದ್ದರೆ ಭಾರೀ ಅನಾಹುತ ನಡೆಯುತ್ತಿತ್ತು. ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ.

Advertisement

Udayavani is now on Telegram. Click here to join our channel and stay updated with the latest news.

Next