Advertisement

Maski ಟ್ರ್ಯಾಕ್ಟರ್ ಚಾಲಕನ ಮೇಲೆ ಹಲ್ಲೆ‌ ಪ್ರಕರಣ: ಪಿಎಸ್ ಐ ಮಣಿಕಂಠ ಅಮಾನತು

10:42 PM Sep 26, 2023 | Team Udayavani |

ಮಸ್ಕಿ: ಟ್ರ್ಯಾಕ್ಟರ್ ಚಾಲಕ ನಿರುಪಾದಿ ಎನ್ನುವ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪಿಎಸೈ ಮಣಿಕಂಠ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

Advertisement

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಸಿಂಧನೂರಿನಿಂದ ಮಸ್ಕಿಗೆ ವರ್ಗಾವಣೆ ಆಗಿ ಕಾನೂನು ಸುವ್ಯವಸ್ಥೆ ಪಿಎಸೈ ಆಗಿ ಅಧಿಕಾರ ಸ್ವೀಕರಿಸಿದ್ದ ಮಣಿಕಂಠ ಹಲವರ ಜತೆ ಅನುಚಿತವಾಗಿ ವರ್ತಿಸಿದ್ದರು ಎನ್ನುವ ಆಪಾದನೆಗಳು ಇದ್ದವು. ಇದಕ್ಕೆ ಸಾಕ್ಷಿಯಾಗಿ ಮಣ್ಣು ಸಾಗಿಸುತ್ತಿದ್ದ ರಾಮಲದಿನ್ನಿ ಗ್ರಾಮದ ನಿರುಪಾದಿ ಎನ್ನುವವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ವಿಡಿಯೋಗಳು ವೈರಲ್‌ ಆಗಿದ್ದವು. ಅಲ್ಲದೇ ವಾಲ್ಮೀಕಿ ಸಮಾಜದಿಂದ ತೀವ್ರ ಹೋರಾಟಗಳು ನಡೆದಿದ್ದವು. ಕೂಡಲೇ ಪಿಎಸೈ ಅವರನ್ನು ಅಮಾನತು ಮಾಡಬೇಕು ಎಂದು ನಿರಂತರ ಎರಡು ದಿನ ಪ್ರತಿಭಟನೆ ನಡೆಸಿದ್ದರು.

ಅಲ್ಲದೇ ಪಿಎಸೈ ಮಣಿಕಂಠ ವಿರುದ್ಧ ನಿರುಪಾದಿ ಪತ್ನಿ ನೀಡಿದ ದೂರಿನನ್ವಯ ಜಾತಿ ನಿಂದನೆ, ಕೊಲೆ ಬೆದರಿಕೆ ಆರೋಪದಡಿ ಕೇಸ್‌ ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ರಾಯಚೂರು ಎಸ್ಪಿ ನಿಖೀಲ್‌ ಬಿ. ಶಿಫಾರಸು ಮೇಲೆ ಪಿಎಸೈ ಮಣಿಕಂಟ ಅವರನ್ನು ಅಮಾನತು ಮಾಡಿ ಬಳ್ಳಾರಿ ವಲಯ ಐಜಿಪಿ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next