Advertisement

7,066 ಜನರ ಮೇಲೆ ನಿಗಾ

06:52 AM Jun 15, 2020 | Suhan S |

ಗದಗ: ಜಿಲ್ಲೆಯಲ್ಲಿ ಕೋವಿಡ್ ನಿಗಾಕ್ಕೆ ಒಳಗಾದವರ ಸಂಖ್ಯೆ 7,066ಕ್ಕೆ ಏರಿಕೆಯಾಗಿದೆ. ಆದರೆ, ಕೋವಿಡ್ ಗೆ ಸಂಬಂಧಿಸಿ ಪ್ರಯೋಗಾಲಯದ ಯಾವುದೇ ವರದಿ ಬರಲು ಬಾಕಿ ಇಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

Advertisement

ಈ ಪೈಕಿ 19 ಜನರು ವೈದ್ಯಕೀಯ ಸೌಲಭ್ಯದೊಂದಿಗೆ ಕೋವಿಡ್‌ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆ. ಕೋವಿಡ್ ಪರೀಕ್ಷೆಗಾಗಿ 7,585 ಜನರಿಂದ ಗಂಟಲಿನ ಮಾದರಿಯನ್ನು ಸಂಗ್ರಹಿಸಲಾಗಿದೆ. ಅದರಲ್ಲಿ 7,536 ಜನರ ವರದಿಗಳು ನಕಾರಾತ್ಮಕವಾಗಿದ್ದು, 49 ವರದಿಗಳು ದೃಢಪಟ್ಟಿವೆ. ಪಾಸಿಟಿವ್‌ ಪ್ರಕರಣಗಳಲ್ಲಿ ಪಿ-166 ಹಾಗೂ ಪಿ-4082 ಮೃತಪಟ್ಟಿದ್ದಾರೆ. ಸೋಂಕಿಗೆ ಒಳಗಾದವರಲ್ಲಿ 39 ಜನರು ಗುಣಮುಖರಾಗಿದ್ದು, 8 ಜನರು ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next