Advertisement

Thiruvananthapuram ವಿಭಾಗದಲ್ಲಿ ಹಳಿ ನಿರ್ವಹಣೆ: ರೈಲು ಸೇವೆಯಲ್ಲಿ ವ್ಯತ್ಯಯ

12:19 AM Jan 07, 2024 | Team Udayavani |

ಮಂಗಳೂರು: ತಿರುವನಂತಪುರ ವಿಭಾಗದ ವಿವಿಧ ಪ್ರದೇಶಗಳಲ್ಲಿ ರೈಲ್ವೇ ಹಳಿ ನಿರ್ವಹಣ ಕಾಮಗಾರಿ ಹಿನ್ನೆಲೆಯಲ್ಲಿ ರೈಲು ಸಂಚಾರದ ಸಮಯದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ.

Advertisement

ನಂ. 16348 ಮಂಗಳೂರು ಸೆಂಟ್ರಲ್‌ – ತಿರುವನಂತಪುರಂ ಸೆಂಟ್ರಲ್‌ ಎಕ್ಸ್‌ಪ್ರೆಸ್‌ ಪ್ರಯಾಣವನ್ನು ಜ. 9, 10, 12, 13, 17, 19, 20, 21, 22, 28 ಮತ್ತು 31ರಂದು 1 ಗಂಟೆ ಮತ್ತು ಜ.15, 16 ಮತ್ತು 25ರಂದು 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ನಂ. 22654 ಹಜ್ರತ್‌ ನಿಜಾಮು ದ್ದೀನ್‌ ಜಂಕ್ಷನ್‌ – ತಿರುವನಂತಪುರ ಸೆಂಟ್ರಲ್‌ ಸಾಪ್ತಾಹಿಕ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲನ್ನು ಜ. 8ರಂದು 30 ನಿಮಿಷ ಮತ್ತು 15ರಂದು ಒಂದು ಗಂಟೆ ನಿಯಂತ್ರಿಸಲಾಗುತ್ತದೆ. ನಂ.22653 ತಿರುವನಂತಪುರ ಸೆಂಟ್ರಲ್‌ – ಹಜ್ರತ್‌ ನಿಜಾಮುದ್ದೀನ್‌ ಜಂಕ್ಷನ್‌ ಸಾಪ್ತಾಹಿಕ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲನ್ನು ಜ. 27ರಂದು 30 ನಿಮಿಷ ತಡೆಹಿಡಿಯಲಾಗುತ್ತದೆ.

ನಂ. 22656 ಹಜ್ರತ್‌ ನಿಜಾಮುದ್ದೀನ್‌ ಜಂಕ್ಷನ್‌- ಎರ್ನಾ ಕುಲಂ ಜಂಕ್ಷನ್‌ ಸಾಪ್ತಾಹಿಕ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲನ್ನು ಜ. 5, 12 ಮತ್ತು 19ರಂದು 50 ನಿಮಿಷ ತಡೆಹಿಡಿಯಲಾಗುತ್ತದೆ.

ನಂ. 19260 ಭಾವ್‌ನಗರ್‌ ಟರ್ಮಿನಸ್‌ – ಕೊಚ್ಚುವೇಲಿ ಸಾಪ್ತಾಹಿಕ ರೈಲು ಜ. 9,16 ಮತ್ತು 30ರಂದು 1 ಗಂ.10 ನಿಮಿಷ ತಡೆಹಿಡಿಯಲಾಗುತ್ತದೆ. ನಂ.16333 ವೇರವಲ್‌ -ತಿರುವನಂತಪುರ ಸೆಂಟ್ರಲ್‌ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ಜ.11 ಮತ್ತು 18ರಂದು 1 ಗಂ.10 ನಿಮಿಷ ತಡೆಹಿಡಿಯಲಾಗುತ್ತದೆ.

Advertisement

ನಂ. 16335 ಗಾಂಧಿಧಾಮ್‌ – ನಾಗರ್‌ ಕೋವಿಲ್‌ ಜಂಕ್ಷನ್‌ ವೀಕ್ಲಿ ಎಕ್ಸ್‌ಪ್ರೆಸ್‌ ರೈಲನ್ನು ಜ.12 ಮತ್ತು 19ರಂದು 1 ಗಂ.10 ನಿಮಿಷ ತಡೆ ಹಿಡಿಯಲಾಗುತ್ತದೆ. ನಂ. 16337 ಓಖಾ – ಎರ್ನಾಕುಲಂ ಜಂಕ್ಷನ್‌ ಬೈ ವೀಕ್ಲಿ ರೈಲನ್ನು ಜ. 15, 20 ಮತ್ತು 27ರಂದು 1 ಗಂಟೆ ತಡೆಹಿಡಿಯಲಾಗುತ್ತದೆ.

ನಂ. 22114 ಕೊಚ್ಚುವೇಲಿ – ಲೋಕಮಾನ್ಯತಿಲಕ್‌ ಟರ್ಮಿನಸ್‌ ಬೈ ವೀಕ್ಲಿ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು ಜ. 8 ಮತ್ತು 18 ರಂದು 40 ನಿಮಿಷ ತಡವಾಗುತ್ತದೆ. ನಂ. 22149 ಎರ್ನಾಕುಲಂ ಪುಣೆ ಜಂಕ್ಷನ್‌ ಬೈ ವೀಕ್ಲಿ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲನ್ನು ಜ.12 ಮತ್ತು 26ರಂದು 40 ನಿಮಿಷ ತಡೆ ಹಿಡಿಯಲಾಗುತ್ತದೆ. ನಂ.22655 ಎರ್ನಾಕುಲಂ ಜಂಕ್ಷನ್‌- ಹಜ್ರತ್‌ ನಿಜಾಮುದ್ದೀನ್‌ ಜಂಕ್ಷನ್‌ ವೀಕ್ಲಿ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲನ್ನು ಜ.17ರಂದು 40 ನಿಮಿಷ ತಡೆಹಿಡಿಯಲಾಗುತ್ತದೆ.

ಸಂಚಾರ ಮಾರ್ಗ ಬದಲಾವಣೆ
ನಂ. 16345 ಲೋಕಮಾನ್ಯ ತಿಲಕ್‌ ಟರ್ಮಿನಸ್‌ – ತಿರುವನಂತಪುರ ಸೆಂಟ್ರಲ್‌ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲನ್ನು ಜ. 7-12ರ ವರೆಗೆ ಎರ್ನಾಕುಲಂನಿಂದ ವಯಾ ಕೊಟ್ಟಾಯಂ ಮೂಲಕ ಸಂಚಾರಕ್ಕೆ ಅವಕಾಶ ನೀಡಿ ಹೆಚ್ಚುವರಿ ನಿಲುಗಡೆಗೆ ಅವಕಾಶ ಮಾಡಲಾಗಿದೆ. ನಂ.16346 ತಿರುವನಂತಪುರ ಸೆಂಟ್ರಲ್‌ – ಲೋಕಮಾನ್ಯ ತಿಲಕ್‌ ಟರ್ಮಿನಸ್‌ ನೇತ್ರಾವತಿ ಎಕ್ಸ್‌ಪ್ರೆಸ್‌ ಜ. 7ರಿಂದ 13ರ ವರೆಗೆ ಹೆಚ್ಚುವರಿ ನಿಲುಗಡೆಯೊಂದಿಗೆ ಕಾಯಂಕುಲಂನಿಂದ ವಯಾ ಕೊಟ್ಟಾಯಂ ಮೂಲಕ ಸಂಚರಿಸಲಿದೆ.

ನಂ. 20909 ಕೊಚ್ಚುವೇಲಿ- ಪೋರ್‌ಬಂದರ್‌ ಸಾಪ್ತಾಹಿಕ ಸೂಪರ್‌ಫಾಸ್ಟ್‌ ರೈಲು ಜ. 7ರಂದು ಕಾಯಂಕುಲಂನಿಂದ ವಯಾ ಕೊಟ್ಟಾಯಂ ಮೂಲಕ ಸಂಚರಿಸಲಿದೆ. ನಂ.19577 ತಿರುನಲ್ವೇಲಿ ಜಂಕ್ಷನ್‌- ಜಾಮ್‌ನಗರ್‌ ಬೈ ವೀಕ್ಲಿ
ಎಕ್ಸ್‌ಪ್ರೆಸ್‌ ರೈಲು ಜ. 8 ಮತ್ತು 9ರಂದು ಕಾಯಂಕುಲಂನಿಂದ ವಯಾ ಕೊಟ್ಟಾಯಂ ಮೂಲಕ ಸಂಚರಿಸಲಿದೆ. ನಂ.20923 ತಿರುನನ್ವೇಲಿ ಜಂಕ್ಷನ್‌- ಗಾಂಧಿಧಾಮ ಸಾಪ್ತಾಹಿಕ ಹಮ್‌ಸಫರ್‌ ಎಕ್ಸ್‌ಪ್ರೆಸ್‌ ರೈಲು ಜ. 11ರಂದು ಕಾಯಂಕುಲಂನಿಂದ ವಯಾ ಕೊಟ್ಟಾಯಂ ಮೂಲಕ ಸಂಚರಿಸಲಿದೆ. ನಂ.20931 ಕೊಚ್ಚುವೇಲಿ – ಇಂಧೋರ್‌ ಜಂಕ್ಷನ್‌ ಸಾಪ್ತಾಹಿಕ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು ಜ. 12ರಂದು ಕಾಯಂಕುಲಂನಿಂದ ವಯಾ ಕೊಟ್ಟಾಯಂ ಮೂಲಕ ಸಂಚರಿಸಲಿದೆ.

ನಂ.16348 ಮಂಗಳೂರು ಸೆಂಟ್ರಲ್‌-ತಿರುವನಂತಪುರ ಸೆಂಟ್ರಲ್‌ ಎಕ್ಸ್‌ಪ್ರೆಸ್‌ ರೈಲು ಜ.22ರಂದು ಎರ್ನಾಕುಲಂನಿಂದ ವಯಾ ಆಲಪ್ಪುಳ ಮೂಲಕ ಸಂಚರಿಸಲಿದೆ. ನಂ.16350 ನಿಲಂಬೂರು ರೋಡ್‌-ಕೊಚ್ಚುವೇಲಿ ರಾಜಾರಾಣಿ ಎಕ್ಸ್‌ಪ್ರೆಸ್‌ ರೈಲು ಜ. 22ರಂದು ಎರ್ನಾಕುಲಂನಿಂದ ವಯಾ ಆಲಪ್ಪುಳ ಮೂಲಕ ಸಂಚರಿಸಲಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next