Advertisement

ಅಡ್ಡ ಹೆಸರು ಮನೆತನದ ಜಾನಪದ ಕುರುಹುಗಳು

01:02 PM Mar 19, 2017 | |

ಧಾರವಾಡ: ವ್ಯಕ್ತಿ ಮತ್ತು ಮನೆತನಗಳಿಗೆ ಇರುವ ಅಡ್ಡ ಹೆಸರುಗಳು ಆಯಾ ಕುಟುಂಬಗಳ ಇತಿಹಾಸ ಸಾರುವ ಜಾನಪದ ಕುರುಹುಗಳಾಗಿವೆ ಎಂದು ಕವಿವಿ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ|ಧನವಂತ ಹಾಜವಗೋಳ ಅಭಿಪ್ರಾಯಪಟ್ಟರು. 

Advertisement

ಶನಿವಾರ ಇಲ್ಲಿನ ಕೆ.ಇ.ಬೋರ್ಡ್‌ ಕಾಲೇಜಿನಲ್ಲಿ ನಡೆಯುತ್ತಿರುವ ಅಖೀಲ ಭಾರತ ಜಾನಪದ ಸಮ್ಮೇಳನದಲ್ಲಿ “ಅಡ್ಡ ಹೆಸರಿನ ವೈವಿಧ್ಯತೆ ಮತ್ತು ಅನನ್ಯತೆ’ ಚರ್ಚಾ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೆಸರು ಮತ್ತು ಅಡ್ಡ ಹೆಸರುಗಳು ಆಯಾ ಕಾಲಘಟ್ಟ ಮತ್ತು ಕುಲ ಕಸಬು, ಜಾತಿ, ಪ್ರಾದೇಶಿಕತೆ, ಮನೆತನಗಳು ಇರುವ ಸ್ಥಳ ಇತ್ಯಾದಿಗಳನ್ನು ಒಳಗೊಂಡಿರುತ್ತವೆ. 

ಮನೆಯ ಮುಂದಿ ಬೇವಿನ ಗಿಡವಿದ್ದರೆ ಅವರನ್ನು ಬೇವಿನಗಿಡದ ಎಂದು ಕರೆಯುತ್ತಾರೆ. ಅವರ ಮನೆತನಗಳಲ್ಲಿ ಇರುವ ವಿಭಿನ್ನತೆಯನ್ನೂ ಕೆಲವು ಅಡ್ಡಹೆಸರುಗಳು ಒಳಗೊಂಡಿರುತ್ತವೆ. ಇದಕ್ಕೆ ಉತ್ತರ ಕರ್ನಾಟಕ ಭಾಗವು  ಹೆಚ್ಚು ಜಾನಪದೀಯ ಅಂಶಗಳನ್ನು ಒಳಗೊಂಡಿದ್ದು ಗೋಚರವಾಗುತ್ತದೆ ಎಂದರು. 

ವಿಷಯ ಮಂಡಿಸಿದ ಡಾ|ಮಹೇಶ ಚಿಂತಾಮಣಿ, ಅಡ್ಡ ಹೆಸರಿನ ಕುರಿತು 19ನೇ ಶತಮಾನದಿಂದಲೂ ಅಧ್ಯಯನಗಳು ನಡೆದಿವೆ. ಕರ್ನಾಟಕದ ಸಂದರ್ಭದಲ್ಲಿ ಡಾ|ಚಿದಾನಂದಮೂರ್ತಿ, ಡಾ|ಎಂ.ಎಂ. ಕಲಬುರ್ಗಿ ಸೇರಿದಂತೆ ಹಿರಿಯ ಸಂಶೋಧಕರು  ಈ ಅಡ್ಡ ಹೆಸರುಗಳ ಬಗ್ಗೆ ಸಾಕಷ್ಟು ಚಿಂತನ ಮಂಥನ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅಡ್ಡಹೆಸರಿಗೆ ಇರುವ ಮಹತ್ವವನ್ನು ಜಾನಪದೀಯವಾಗಿ ಅಧ್ಯಯನ ಮಾಡಿದರೆ  ಅಷ್ಟೇ ಗೊತ್ತಾಗುತ್ತದೆ ಎಂದರು. 

ಗೋಷ್ಠಿಯಲ್ಲಿ ಜಾನಪದ ವಿವಿ ಸಹಾಯಕ ಪ್ರಾಧ್ಯಾಪಕ ಡಾ|ವೃಷಭಕುಮಾರ್‌, ಬುಡಕಟ್ಟುಗಳಲ್ಲಿನ ಅಡ್ಡಹೆಸರುಗಳ ಬಗ್ಗೆ ಮಾತನಾಡಿದರು.  ಡಾ|ಮಂಜುಳಾ ಭಂಡಾರಿ, ಡಾ|ಚಂದ್ರಶೇಖರ ರೊಟ್ಟಿಗವಾಡ, ಡಾ|ಎಸ್‌.ಐ.ಮೈತ್ರಿ, ಬಸವರಾಜ ಹೊಂಗಲ್‌, ಶಂಕರ ಬೈಚವಾಡ ಅಡ್ಡ ಹೆಸರುಗಳು ವಿವಿಧ ಕ್ಷೇತ್ರಗಳಲ್ಲಿ ಹೇಗೆ ಕೆಲಸ ಮಾಡಿವೆ ಎನ್ನುವ ಕುರಿತು ಪ್ರಬಂಧ ಮಂಡಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next