ನವದೆಹಲಿ: ಆಟೋಮೊಬೈಲ್ ಕ್ಷೇತ್ರದ ಟೊಯೋಟ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ)ನಿಂದ ಮುಂದಿನ ಪೀಳಿಗೆಯ ಅತ್ಯುತ್ತಮ ಪ್ರದರ್ಶನ ನೀಡುವ ಆಲ್ ನ್ಯೂ ಕ್ಯಾಮ್ರಿ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ಸಂದರ್ಭದಲ್ಲಿ ಕ್ಯಾಮ್ರಿ ಟೊಯೋಟ ಮೋಟಾರ್ ಕಾರ್ಪೊರೇಷನ್ ಚೀಫ್ ಇಂಜಿನಿಯರ್ ಮಸಾಟೊ ಕಟ್ಸುಮಾಟ ಅವರು ಮಾತನಾಡಿ, ಆಲ್ ನ್ಯೂ ಕ್ಯಾಮ್ರಿ ಹೈಬ್ರಿಡ್ ಎಲೆಕ್ಟ್ರಿಕ್ ವಾಹನ ಗಮನಾರ್ಹವಾದ ಅತ್ಯುತ್ತಮ ವಾಹನವಾಗಿರುವುದಲ್ಲದೆ, ಪ್ರಗತಿಯ ಒಂದು ವ್ಯಾಖ್ಯಾನ ಎನ್ನಬಹುದು.
ವಿಶಿಷ್ಟ, ಅತ್ಯಾಧುನಿಕ ನೋಟ, ಸುಂದರ ಒಳಾಂಗಣ ಮತ್ತು ಆಧುನಿಕ ಸೌಲಭ್ಯಗಳುಳ್ಳ ಕ್ಯಾಮ್ರಿ ವಾಹನ ಪ್ರಸ್ತುತ ಪೀಳಿಗೆಯ ಆರಾಮ ಸವಾರಿ ವಾಹನವಾಗಿದೆ. ವಾಹನ ಪ್ರಿಯರ ನಿರೀಕ್ಷೆಗೆ ಮೀರುವ ಕ್ರಿಯಾತ್ಮಕ ಸೆಡಾನ್ ಅನ್ನು ಸೃಷ್ಟಿಸುವುದು ನಮ್ಮ ಆದ್ಯತೆಯಾಗಿದೆ.
ಅದರ ಪ್ರಕಾರ ಈ ವಾಹನ 2.5 ಲೀಟರ್, 4-ಸಿಲಿಂಡರ್ ಗ್ಯಾಸೊಲೈನ್ ಹೈಬ್ರಿಡ್ ಡೈನಾಮಿಕ್ ಫೋರ್ಸ್ ಎಂಜಿನ್ 5700 ಆರ್‌ಪಿಎಂನ 131ಕೆಡಬ್ಲೂ ಮ್ಯಾಕ್ಸ್ ಔಟು³ಟ್ ಮತ್ತು 3600-5200 ಆರ್‌ಪಿಎಂನ 221ಎನ್‌ಎಂ ಮ್ಯಾಕ್ಸ್ ಟಾರ್ಕ್ ನೀಡುತ್ತದೆ. ಇದರ ಹೈಬ್ರಿಡ್ ಸಿಸ್ಟಮ್ ಜನರೇಟರ್ 88ಕೆಡಬ್ಲೂನ ಮ್ಯಾಕ್ಸ್ ಔಟು³ಟ್ ಮತ್ತು 204.1ಎನ್‌ಎಂನ ಮ್ಯಾಕ್ಸ್‌ಟಾರ್ಕ್ ಒದಗಿಸುತ್ತದೆ ಎಂದರು.
ಟಿಕೆಎಂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಸಕಾಝು ಯೊಶಿಮುರ ಅವರು ಟೊಯೋಟ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್ (ಟಿಎನ್‌ಜಿಎ) ನಿಂದ ಸ್ಫೂರ್ತಿ ಪಡೆದ ಶಕ್ತಿಯುತ ನ್ಯೂ ಕ್ಯಾಮ್ರಿ ಸ್ವಯಂ ಚಾರ್ಜಿಂಗ್ ವಿದ್ಯುತ್ ವಾಹನ ಇದಾಗಿದೆ. ನಿರ್ವಹಣೆಗೆ ಅನುಕೂಲಕರ ಹಾಗೂ ಸ್ಥಿರವಾದ ಸವಾರಿ ಒದಗಿಸಲು ನಿರ್ಮಿಸಿರುವ ನ್ಯೂ ಕ್ಯಾಮರಿ ಸಾಟಿಯಿಲ್ಲದ ಇಂಜಿನಿಯರಿಂಗ್, ಹಸಿರು ಪರಿಹಾರ, ಉನ್ನತ ತಂತ್ರಜ್ಞಾನ, ವಿನ್ಯಾಸ ಹಾಗೂ ಕಾರ್ಯಕ್ಷಮತೆ ಹೊಂದಿದೆ. 9ಎಸ್‌ಆರ್‌ಎಸ್ ಏರ್ ಬ್ಯಾಗ್ ಸುರಕ್ಷತೆ ಕೂಡ ಇದಕ್ಕಿದೆ.
ಆಲ್ ಕ್ಯಾಮ್ರಿ ಹೈಬ್ರಿಡ್ ಆಗ್ನೇಯ ಏಷ್ಯಾ ದೇಶಗಳ ಹೊಸ ಕಾರ್ ಅಸೆಸೆಂಟ್ ಪ್ರೋಗ್ರಾಂನಿಂದ 5 ಸ್ಟಾರ್ ಸುರಕ್ಷತೆ ರೇಟಿಂಗ್ ಪಡೆದಿರುವ ನ್ಯೂ ಕ್ಯಾಮ್ರಿ ಪ್ಲಾಟಿನಂ ವೈಟ್ ಪರ್ಲ್, ಗ್ರಾಫೈಟ್ ಮೆಟಾಲಿಕ್, ರೆಡ್ ಮಿಕಾ ಮತ್ತು ಬರ್ನಿಂಗ್ ಬ್ಲಾಕ್ ಹಾಗೂ ಬೇಜ್ ಬಣ್ಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಆರಂಭಿಕ ವಿಶೇಷ ಬೆಲೆ 36,95,000 ರೂ. (ಎಕ್ಸ್‌ಶೋ ರೂಮ್)ನಲ್ಲಿ ಲಭ್ಯವಿದೆ ಎಂದರು.