ನವದೆಹಲಿ: ಆಟೋಮೊಬೈಲ್ ಕ್ಷೇತ್ರದ ಟೊಯೋಟ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆಯ ಬಹುನಿರೀಕ್ಷಿತ “ಯಾರಿಸ್’ ವಿಶಿಷ್ಟ ಸೆಡಾನ್ ಕಾರು ದೇಶಾದ್ಯಂತ ರಸ್ತೆಗಳಲ್ಲಿ ಸಂಚರಿಸಲಿದೆ.
ಆಧುನಿಕ ತಂತ್ರಜ್ಞಾದ ಭಾವನಾತ್ಮಕ ವಿನ್ಯಾಸವುಳ್ಳ ಯಾರಿಸ್ ಕಾರು ಆರಾಮದಾಯಕ, ಸುರಕ್ಷಿತ ಹಾಗೂ ಕ್ವಾಲಿಟಿ ರೈಡ್‌ಗಾಗಿ ನಿರ್ಮಿಸಿದ ವಾಹನ. ಈ ಕ್ರಿಯಾತ್ಮಕ ಹಾಗೂ ದಕ್ಷತೆಯುಳ್ಳ ಐಷಾರಾಮಿ ಕಾರಿನ ಡೆಲಿವರಿ ಆರಂಭವಾಗಿದೆ. “ಒಂದು ರಾಷ್ಟ್ರ ಒಂದು ಮಾರಾಟ ದರ’ ತಂತ್ರದ ಆಧಾರದಲ್ಲಿ ಒಂದೇ ಬೆಲೆಯಲ್ಲಿ ದೇಶದ ಎಲ್ಲ ಡೀಲರ್‌ಗಳಲ್ಲಿ “ಟೊಯೋಟ ಯಾರಿಸ್’ ದೊರೆಯಲಿದೆ ಎಂದು ಟಿಕೆಎಂ ವ್ಯವಸ್ಥಾಪಕ ನಿರ್ದೇಶಕ ಅಕಿಟೊ ಟಚಿಬನ ತಿಳಿಸಿದ್ದಾರೆ.
2018ರ ಇಂಡಿಯಾ ಆಟೋದಲ್ಲಿ ಪ್ರದರ್ಶನಗೊಂಡ ಯಾರಿಸ್ ಸೆಡಾನ್ ಸರಣಿ ಕಾರಿನ ಎಕ್ಸ್‌ಶೋರೂಂ ಬೆಲೆ 8,75,000 ದಿಂದ 14,07,000 ಆಗಿದ್ದು, ಈ ನೂತನ ವಾಹನ, ನಾಲ್ಕು ಗ್ರೇಡ್‌ನೊಂದಿಗೆ 7 ಸೀ³ಡ್ ಸಿವಿಟಿ ಅಥವಾ 6 ಸೀ³ಡ್ ಎಂಟಿ ಎಂಜಿನ್‌ನಲ್ಲಿ ಲಭ್ಯವಿದೆ.
ಟೊಯೋಟ ಕ್ಯೂಡಿಆರ್ ತತ್ವದಡಿ ನಿರ್ಮಾಣ ಮಾಡಲಾಗಿರುವ ಯಾರಿಸ್‌ನಲ್ಲಿ ಪವರ್ ಡ್ರೈವರ್ ಸೀಟ್, 7ಎಸ್‌ಆರ್‌ಎಸ್ ಏರ್‌ಬ್ಯಾಗ್‌ಗಳು, ಮೊಣಕಾಲಿನ ಏರ್‌ಬ್ಯಾಗ್, ರೂಫ್ ಮೌಂಟೆಡ್ ಏರ್‌ವೆಂಟ್ಸ್, ಟೈರ್ ಪ್ರಷರ್ ಮಾನಿಟರಿಂಗ್ ಸಿಸ್ಟಂ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್‌ಗಳು, ಸಿವಿಟಿಯ ಎಲ್ಲ ಶ್ರೇಣಿಗಳನ್ನು ಮತ್ತು ಇತರ 11 ಇನ್‌ಸೆಗೆ¾ಂಟ್ ವೈಶಿಷ್ಟಗಳು ಒಳಗೊಂಡಿವೆ.
ಮುಖ್ಯವಾಗಿ ಸುರಕ್ಷತೆ, ಗುಣಮಟ್ಟ, ಬಾಳಿಕೆ ಹಾಗೂ ವಿಶ್ವಾಸಾರ್ಹತೆಯಲ್ಲಿ ಅಗ್ರಸ್ಥಾನದಲ್ಲಿರುವ ಯಾರಿಸ್, ಟೊಯೋಟ ಸಂಸ್ಥೆಯ ಅತ್ಯುತ್ತಮ ಕಾರುಗಳ ಸಾಲಿನಲ್ಲಿದೆ. ಭಾರತೀಯ ಕಾರು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿದ್ದು, ಬದಲಾಗುತ್ತಿರುವ ಗ್ರಾಹಕರ ಆದ್ಯತೆಗಳಿಗೆ ಅನುಸಾರವಾಗಿ ಸಂಸ್ಥೆ ಜಾಗತಿಕ ಉತ್ಪನ್ನಗಳಿಗೆ ಮಾನ್ಯತೆ ನೀಡಿದೆ. ಆದ್ದರಿಂದ ಪ್ರಸಿದ್ಧ ಸೆಡಾನ್ ಕಾರುಗಳ ವಿಭಾಗದಲ್ಲಿ ಏರಿಸ್ ಹಲವು ವಿಶಿಷ್ಟಗಳನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಟಿಕೆಎಂನ ಉಪ ವ್ಯವಸ್ಥಾಪಕ ನಿರ್ದೇಶಕ ಎನ್. ರಾಜಾ ಮಾತನಾಡಿ, ಯಾರಿಸ್ ಸೆಡಾನ್‌ಗೆ ನಿರೀಕ್ಷೆಗೆಗಿಂತ ಹೆಚ್ಚಿನ ಬೇಡಿಕೆ ಹಾಗೂ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ದೇಶದ ಎಲ್ಲ ಅಧಿಕೃತ ಟೊಯೋಟ ಮಾರಾಟಗಾರರಲ್ಲಿ ಕಾರಿನ ವಿತರಣೆ ಆರಂಭವಾಗಿದೆ ಎಂದು ತಿಳಿಸಿದರು.