Advertisement

ಟೊಯಟಾದಿಂದ ವಿದ್ಯುತ್‌ ಚಾಲಿತ ಕಾರು

09:38 AM Oct 24, 2019 | Hari Prasad |

ಹೊಸದಿಲ್ಲಿ: ಭಾರತದಲ್ಲಿ ಈಗ ಅಭಿವೃದ್ಧಿ ಹೊಂದುತ್ತಿರುವ ವಿದ್ಯುತ್‌ ಚಾಲಿತ ವಾಹನಗಳ ಮಾರುಕಟ್ಟೆಗೆ ತಾನೂ ಪ್ರವೇಶಿಸಲು ಟೊಯಟಾ ಮೋಟಾರ್ಸ್‌ ಕಾರ್ಪೊರೇಷನ್‌ ಸಂಸ್ಥೆ (ಟಿಎಂಸಿ) ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ, 2020ರಲ್ಲಿ ಹೊಸ ಶ್ರೇಣಿಯ ಟೊಯಟಾ ಎಲೆಕ್ಟ್ರಿಕ್‌ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಿದೆ.

Advertisement

ಅಂದಹಾಗೆ, ಹೊಸ ಎಲೆಕ್ಟ್ರಿಕ್‌ ಕಾರುಗಳು, ಜಪಾನ್‌ನ ಮತ್ತೂಂದು ದೈತ್ಯ ವಾಹನ ತಯಾರಿಕಾ ಸಂಸ್ಥೆಯಾದ ಸುಜುಕಿಯ ಸಹಯೋಗದೊಂದಿಗೆ ಹೊರಬರಲಿವೆ. 2017ರಲ್ಲಿ ಎರಡೂ ಸಂಸ್ಥೆಗಳು ಕೆಲವಾರು ಬ್ರಾಂಡ್‌ಗಳ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿದ್ದವು. ಹಾಗಾಗಿ, ಹೊಸ ಎಲೆಕ್ಟ್ರಿಕ್‌ ಕಾರುಗಳು ಅದೇ ಒಪ್ಪಂದದಡಿ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಎಂದು ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next