Advertisement

Toxic Movie: ಮುಂಬೈನತ್ತ ಯಶ್‌ ಟಾಕ್ಸಿಕ್‌ ಪಯಣ

06:47 PM Oct 09, 2024 | Team Udayavani |

ರಾಕಿಂಗ್‌ ಸ್ಟಾರ್‌ ಯಶ್‌ ಅವರ ಮುಂಬರುವ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್‌. ಕೆಜಿಎಫ್ 2 ದೊಡ್ಡ ಬ್ರೇಕ್‌ ನೀಡಿದ ನಂತರ ಯಶ್‌ ಅಭಿನಯಿಸುತ್ತಿರುವ ಸಿನಿಮಾವಿದು.

Advertisement

ಸದ್ಯ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಇಡೀ ಚಿತ್ರತಂಡ ಮುಂಬೈಗೆ ತೆರಳಿದೆ. ಕೆಲ ವಾರಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಚಿತ್ರದ ಮುಹೂರ್ತ ನೆರವೇರಿ, ಚಿತ್ರೀಕರಣವೂ ಆರಂಭವಾಗಿತ್ತು. ಬೆಂಗಳೂರಿನ ಸೆಟ್‌ನಲ್ಲಿ ನಡೆದ ಮೊದಲ ಹಂತದ ಚಿತ್ರೀಕರಣದಲ್ಲಿ ಖ್ಯಾತ ನಟಿ ನಯನತಾರಾ, ಬಾಲಿವುಡ್‌ ಹಾಗೂ ಹಾಲಿವುಡ್‌ ಕಲಾವಿದರು ಬಂದು ಭಾಗವಹಿಸಿದ್ದರು.

ಸದ್ಯ ಮುಂಬೈಗೆ ತೆರಳಿರುವ ಟಾಕ್ಸಿಕ್‌ ಚಿತ್ರತಂಡ ಅಲ್ಲಿ ವಿಎಫ್ಎಕ್ಸ್‌ ಭಾಗ ಹಾಗೂ ಇತರ ಸನ್ನಿವೇಶಗಳ ಚಿತ್ರೀಕರಣ ನಡೆಸಲಿದೆ. ಇದಕ್ಕಾಗಿ ಚಿತ್ರತಂಡ 45 ದಿನಗಳ ಕಾಲ ಮುಂಬೈನಲ್ಲಿ ಇರಲಿದೆ. ಇದೇ ಸಮಯದಲ್ಲಿ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

ಮಲಯಾಳಿ ನಿರ್ದೇಶಕ ಗೀತು ಮೋಹನ್‌ ದಾಸ್‌ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಟಾಕ್ಸಿಕ್‌ ಸಿನಿಮಾಗೆ ಕೆವಿಎನ್‌ ಪ್ರೊಡಕ್ಷನ್ಸ್‌ ಸಂಸ್ಥೆಯ ನಿರ್ಮಾಣವಿದೆ.

ಯಶ್‌, ನಯನತಾರಾ, ಕಿಯಾರಾ ಅಡ್ವಾಣಿ, ಅಕ್ಷಯ್‌ ಒಬೆರಾಯ್‌, ವಿದೇಶಿ ಕಲಾವಿದರಾದ ಬೆನಡಿಕ್ಟ್ ಗ್ಯಾರೆಟ್‌, ಕೈಲಿ ಪೌಲ್‌ ಮತ್ತಿತರರು ತಾರಾಗಣದಲ್ಲಿದ್ದಾರೆ. ಕೆಲವು ವಿದೇಶಿ ತಂತ್ರಜ್ಞರು ಚಿತ್ರದ ಭಾಗವಾಗಿರುವುದು ಮತ್ತೂಂದು ವಿಶೇಷ.

Advertisement
Advertisement

Udayavani is now on Telegram. Click here to join our channel and stay updated with the latest news.

Next