ಔರಾದ: ಸಾರಿಗೆ ಇಲಾಖೆ ನಿಯಮದ ಬಗ್ಗೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಇಲ್ಲಿನ ಪಪಂ ಇಲಾಖೆ ಅಧಿಕಾರಿಗಳು ಮಾತ್ರ ತಮ್ಮ ಕಚೇರಿಯಲ್ಲಿನ ಏಳು ವಾಹನಗಳ ನೋಂದಣಿ ಏಳು ವರ್ಷದಿಂದ ಮಾಡದೇ ಸರ್ಕಾರದ ನಿಯಮ ಗಾಳಿಗೆ ತುರಿದೆ.
ಪಪಂ ಕಚೇರಿಯಲ್ಲಿ ಇಲಾಖೆ ಸಿಬ್ಬಂದಿ ಹೇಳುವ ಪ್ರಕಾರ 11 ವಾಹನಗಳಿದ್ದು, ಈ ಪೈಕಿ ಐದು ವಾಹನಗಳು ನೋಂದಣಿ ಮಾಡಿಸಲಾಗಿದೆ. ಇನ್ನೂಳಿದ ಆರು ವಾಹನಗಳ ನೋಂದಣಿ ಇಂದಿಗೂ ನಡೆದಿಲ್ಲ. ಮೂರು ಕಸ ತೆಗೆದುಕೊಂಡು ಹೋಗುವ ಆಟೋ,ನಾಲ್ಕು ಟ್ರಾಕ್ಟರ್, ಒಂದು ಜೆಸಿಪಿ ಯಂತ್ರ ಕಳೆದ ಆರೇಳು ವರ್ಷದಿಂದ ನೋಂದಣಿ ಮಾಡಿಸದೆ ರಸ್ತೆಯಲ್ಲಿ ನಿತ್ಯ ಸಂಚಾರ ಮಾಡುತ್ತಿವೆ.
ನೋಂದಣಿ ಇಲ್ಲದಿರುವ ವಾಹನಗಳನ್ನು ತೆಗೆದುಕೊಂಡು ಹೋಗಲು ಚಾಲಕರು ಹೆದರುತ್ತಿದ್ದಾರೆ. ಈ ಬಗ್ಗೆ ಕಳೆದ ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪಪಂ ಸದಸ್ಯರ ಹಾಗೂ ಅಧಿಕಾರಿಗಳ ಸಭೆಯಲ್ಲಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಶಿಸ್ತಿನ ಪಾಠ ಹೇಳಬೇಕಾದ ಪಪಂ ಸರಕಾರದ ನಿಯಮ ಗಾಳಿಗೆ ತೂರಿದೆ. ಇನ್ನಾದರೂ ವಾಹನ ನೋಂದಣಿ ಮಾಡಿಸಬೇಕಿದೆ.
ನಾನೂ ಬಂದು ಮೂರು ವರ್ಷಗಳಾಗಿವೆ. ಇಲ್ಲಿ ತನಕ ಏಳು ವಾಹನಗಳ ನೋಂದಣಿ ಮಾಡಿಸಿಲ್ಲ. ಇನ್ನು ಮುಂದೆ ಮಾಡಿಸುತ್ತೇನೆ.
ಎಂ.ಡಿ. ಸಮೀ,
ವಾಹನಗಳ ನಿರ್ವಹಣೆ ಮೇಲ್ವಿಚಾರಕ