Advertisement
ಇಲ್ಲಿನ ಪುರಸಭೆಗೆ ಕಳೆದ ನಾಲ್ಕು ತಿಂಗಳ ಹಿಂದೆ ಚುನಾವಣೆ ನಡೆದಿದೆ. ಅದಕ್ಕೂ ಮೊದಲು ಹಿಂದಿನ ಅವಧಿ ಮುಗಿದು ಸುಮಾರು2 ವರ್ಷಗಳು ಕಳೆದರೂ ಪುರಸಭೆ ಚುನಾವಣೆ ನೆಡೆದಿರಲಿಲ್ಲ.ಕಳೆದ ಎರಡುವರೆ ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳು ಇಲ್ಲದೆ ಆಡಳಿತಾಧಿಕಾರಿ ನೇಮಕದಿಂದ ಪಟ್ಟಣದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದರೂ ಇದುವರೆವಿಗೂ ಸರ್ಕಾರ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಸದೆ ವಾರ್ಡ್ ಅಭಿವೃದ್ಧಿಯಾಗದೆ ಹಿಂದೆ ಬಿದ್ದಿವೆ. ಯಗಚಿ ಜಲಾಶಯ ಪಟ್ಟಣಕ್ಕೆ ಹೊಂದಿಕೊಂಡಿದ್ದರೂ ಪುರಸಭೆ ಪಟ್ಟಣದ 23 ವಾರ್ಡ್‌ಗಳಲ್ಲಿ ನದಿಮೂಲದಿಂದ ಸಮರ್ಪಕ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ಸುಮಾರು 16 ಕೋಟಿ ವೆಚ್ಚದಲ್ಲಿ 24×7 ನೀರು ಕೊಡುವ ಯೋಜನೆ
ರೂಪಿಸಲಾಗಿದೆ. ಆದರೂ ಜನಪ್ರತಿನಿಧಿಗಳ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕಳೆದ 10 ವರ್ಷಗಳಿಂದ ಈ ಯೋಜನೆ ಕಾರ್ಯರೂಪಕ್ಕೆ ಬಾರದೆ ನನೆಗುದಿಗೆ ಬಿದ್ದಿದೆ.
ಕರೋನಾಬೀತಿಯಲ್ಲಿರುವ ಸಂದರ್ಭದಲ್ಲಿ ಪುರಸಭೆಗೆ ಚುನಾಯಿತ ಪ್ರತಿನಿಧಿಗಳು ಅವಶ್ಯಕವಾಗಿ ಬೇಕಾಗಿದೆ. ಜನ ಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ಪುರಸಭೆ ಆಡಳಿತ ಮಂಡಳಿ ಬಹುಮುಖ್ಯ ಎಂದರು. ಇದನ್ನೂ ಓದಿ:ಮಹಾದಾಯಿ,ಮೇಕೆದಾಟು ಬಗ್ಗೆ ವಿಪಕ್ಷದಲ್ಲಿದ್ದಾಗ ಮಾತನಾಡಿದ ನಾಯಕರು ಈಗ ಮಾತಾಡುತ್ತಾರೋ.:ಡಿಕೆಶಿ
Related Articles
ಗೂಡು ಪಟ್ಟಣದಲ್ಲೂ ಕೆಲಸ ಮಾಡಬೇಕಾಗಿದ್ದು, ಬೇಲೂರು ಪುರಸಭೆಗೆ ವಾರದಲ್ಲಿಕೇವಲ ಒಂದು ದಿನ ಕೆಲಸ ಮಾಡಿದರೆ ಪುರಸಭೆ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
Advertisement
ಪುರಸಭೆಯಲ್ಲಿ ಜನಸಾಮನ್ಯರ ಕೆಲಸಗಳು ಸುಲಭದ ರೀತಿಯಲ್ಲಿ ನಡೆಯುತ್ತಿಲ್ಲ. ಪುರಸಭೆ ವ್ಯಾಪ್ತಿಯಲ್ಲಿ ಹಲವಾರು ಸಮಸ್ಯೆ ಎದ್ದುಕಾಣುತ್ತಿವೆ. ಇವುಗಳನ್ನು ಬಗೆ ಹರಿಸಲು ಆಡಳಿತ ಮಂಡಳಿ ಅಗತ್ಯವಾಗಿರುವುರಿಂದ ಸರ್ಕಾರ ಹಾಗು ಜಿಲ್ಲಾಧಿಕಾರಿಗಳು ಕೂಡಲೆ ಗಮನಹರಿಸಿ ಬೇಲೂರುಪುರಸಭೆ ಸಮಗ್ರ ಅಭಿವೃದ್ದಿ ಗಮನದಲ್ಲಿಟ್ಟು ಅಡಳಿತ ಮಂಡಳಿಗೆ ಚುನಾವಣೆ ನಡೆಸಲು ಮುಂದಾಗ ಬೇಕು ಎಂದಿದ್ದಾರೆ. ಆಡಳಿತ ಮಂಡಳಿ ರಚನೆಯಾಗಲಿ
ಪಟ್ಟಣದ23 ವಾರ್ಡಗಳಲ್ಲಿ ಹಲವು ಸಮಸ್ಯೆಗಳಿದ್ದು, ಇವುಗಳನ್ನು ಬಗೆಹರಿಸಲು ಪುರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಅಗತ್ಯವಾಗಿದೆ. ಈಗಾಗಲೆ ಪುರಸಭೆ ಚುನವಣೆ ನಡೆದು ಸದಸ್ಯರೂ ಸಹ ಆಯ್ಕೆಯಾಗಿದ್ದಾರೆಕೋವಿಡ್ ನೆಪದಲ್ಲಿ ಅಡಳಿತ ಮಂಡಳಿ ರಚನೆಯಾಗದಿದ್ದರೆ ಹೇಗೆ ಜನಸಾಮಾನ್ಯರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಪಟ್ಟಣದ ಅಭಿವೃದ್ಧಿ ಬಗ್ಗೆಕೇಳಿದರೆ ಉಪ ವಿಭಾಗಧಿಕಾರಿಗಳನ್ನು
ತೋರಿಸುತ್ತಾರೆಕೂಡಲೆ ಸರ್ಕಾರ ಮನಗಂಡು ಬೇಲೂರು ಪುರಸಭೆಗೆ ಆಡಳಿತ ಮಂಡಳಿ ಚುನಾವಣೆ ನೆಡೆಸಬೇಕು ಎಂದು ಪುರಸಭೆ ಸದಸ್ಯ ಬಿ.ಎ. ಜಮಾಲುದ್ದೀನ್ ಒತ್ತಾಯಿಸಿದ್ದಾರೆ.