ಮುಂಬಯಿ: 96ನೇ ಆಸ್ಕರ್ ಅವಾರ್ಡ್ಸ್‌ಗೆ ಭಾರತದಿಂದ ಅಧಿಕೃತವಾಗಿ ಪ್ರವೇಶ ಪಡೆಯುವ ಸಿನಿಮಾವಾಗಿ ಮಾಲಿವುಡ್ ಸಿನಿಮಾ 2018 ಆಯ್ಕೆ ಆಗಿದೆ ಎಂದು ಘೋಷಿಸಲಾಗಿದೆ.
ಇತ್ತೀಚೆಗೆ ನಿರ್ದೇಶಕ ಗಿರೀಶ್ ಕಾಸರವಳ್ಳಿ ನೇತೃತ್ವದ 17 ಸದಸ್ಯರ ತೀರ್ಪುಗಾರರನ್ನು ಒಳಗೊಂಡಿರುವ ಆಯ್ಕೆ ಸಮಿತಿಗೆ ಭಾರತದಾದ್ಯಂತ ತೆರೆಕಂಡ 22 ಸಿನಿಮಾಗಳು ಅಧಿಕೃತ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿತ್ತು.
ಇದರಲ್ಲಿ “ಬಾಲಗಮ್”, “ದಿ ಕೇರಳ ಸ್ಟೋರಿ”, “ಜ್ವಿಗಾಟೊ” “ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ”ಅನಂತ್ ಮಹದೇವನ್ ಅವರ ಸ್ಟೋರಿ ಟೇಲರ್ (ಹಿಂದಿ), ಮ್ಯೂಸಿಕ್ ಸ್ಕೂಲ್ (ಹಿಂದಿ), ಮಿಸಸ್ ಚಟರ್ಜಿ vs ನಾರ್ವೆ (ಹಿಂದಿ), 12th ಫೇಲ್ (ಹಿಂದಿ) ವಿದುತಲೈ ಭಾಗ 1 (ತಮಿಳು), ಘೂಮರ್ (ಹಿಂದಿ), ಮತ್ತು ದಸರಾ (ತೆಲುಗು) ಸಿನಿಮಾಗಳು ಆಸ್ಕರ್ ನ ಅಧಿಕೃತ ಪ್ರವೇಶ ಪಡೆಯುವ ಸಾಲ್ಲಿನಲ್ಲಿತ್ತು.
ಅಂತಿಮವಾಗಿ ಜೂಡ್ ಆಂಟನಿ ಜೋಸೆಫ್ ನಿರ್ದೇಶನದ ಮಲಯಾಳಂ ಸಿನಿಮಾ “2018” ಆಸ್ಕರ್ ಸ್ಪರ್ಧೆಗೆ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದೆ. ಇದೇ ವರ್ಷದ ಮೇ.5 ರಂದು ರಿಲೀಸ್ ಆಗಿದ್ದ ಈ ಸಿನಿಮಾದಲ್ಲಿ ಟೊವಿನೋ ಥಾಮಸ್ ಸೇರಿದಂತೆ ಕುಂಚಾಕೋ ಬೋಬನ್, , ಆಸಿಫ್ ಅಲಿ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕೇರಳದಲ್ಲಿ ಬಂದ ಪ್ರವಾಹದ ನೈಜ ಕಥೆಯನ್ನೊಳಗೊಂಡಿದೆ. ಬಾಕ್ಸ್ ಆಫೀಸ್ 100 ಕೋಟಿ ಕಮಾಯಿ ಮಾಡಿ, ದೊಡ್ಡ ಹಿಟ್ ಆಗಿತ್ತು.